ರದ್ದು ಪಡಿಸುವಿಕೆ ವಿಧಾನ
- ಕೆಳಕಂಡ ಷರತ್ತುಗಳಿಗನ್ವಯವಾಗಿ, ಕಾದಿರಿಸಿದ ಟಿಕೆಟ್‍ಗಳನ್ನು, ವ್ಯವಹಾರ ವಿತರಣಾ ಮುಂಗಟ್ಟೆಗಳನ್ನೊಳಗೊಂಡಂತೆ ಕ.ರಾ.ರ.ಸಾ.ನಿ. ದ ಯಾವುದೇ ಮುಂಗಟ್ಟೆಗಳಲ್ಲಿ ರದ್ದು ಪಡಿಸಬಹುದು.
- ವ್ಯವಹಾರ ವಿತರಣಾ ಮುಂಗಟ್ಟೆಗಳಲ್ಲಿ ಮುಂಗಡ ಕಾಯ್ದಿರಿಸುವಿಕೆ ಸೌಲಭ್ಯವು ಇರುವವರೆಗೆ ಟಿಕೆಟ್‍ಗಳನ್ನು ರದ್ದು ಪಡಿಸಬಹುದಾಗಿದೆ. ಸಾಮಾನ್ಯವಾಗಿ ಪ್ರಾರಂಭಿಕ ಸ್ಥಳದಿಂದ ಬಸ್‍ನ ನಿರ್ಗಮನ ಸಮಯಕ್ಕಿಂತ 30-60 ನಿಮಿಷಗಳ ಮುಂಚೆ ಟಿಕೆಟ್ ರದ್ದು ಪಡಿಸಬಹುದಾಗಿದೆ.
- ದೂರದ ಸ್ಥಳಗಳಿಂದ ಸರಿ ರಾತ್ರಿ/ಬೆಳಗು ಜಾವ ನಿರ್ಗಮಿಸುವ ಬಸ್‍ಗಳ ಕಾದಿರಿಸುವಿಕೆಯನ್ನು ಬಹು ಮುಂಚಿತವಾಗಿಯೇ ನಿಲ್ಲಿಸಬಹುದು. ಉದಾಹರಣೆಗಾಗಿ: ಒಂದು ಬಸ್ ಸೇವೆ ಬೆಳಗು ಜಾವದ 05:00ಘಂಟೆಗೆ ನಿರ್ಗಮಿಸುತ್ತಿದ್ದರೆ, ಕಾಯ್ದಿರಿಸುವಿಕೆಯನ್ನು ಹಿಂದಿನ ರಾತ್ರಿ 22:00 ಘಂಟೆಗೇ ನಿಲ್ಲಿಸಬಹುದು.
- ಈ ವೇಳೆಯ ನಂತರ ( ಮುಂಗಡ ಕಾಯ್ದಿರಿಸುವಿಕೆ ಮುಕ್ತಾಯಗೊಂಡ ಮೇಲೆ) ಹಾಗು ಬಸ್ ನಿರ್ಗಮನದ ಒಂದು ಘಂಟೆಯೊಳಗೆ, ಟಿಕೆಟ್‍ಗಳನ್ನು ಕೇವಲ ಕ.ರಾ.ರ.ಸಾ.ನಿ.ಮುಂಗಟ್ಟೆಗಳಿಂದ (ಪ್ರಯಾಣದ ಪ್ರಾರಂಭಿಕ ಸ್ಥಾನದಿಂದ)ರದ್ದು ಪಡಿಸಬಹುದಾಗಿದೆ. ( ಕೇವಲ ಮುಂಗಟ್ಟೆಗಳ ಕೆಲಸದ ವೇಳೆಯಲ್ಲಿ ಮಾತ್ರ).
- ರದ್ದುಪಡಿಸಿದ ಸೇವೆಯ ಮರುಪಾವತಿಯು ( ಮರುಪಾವತಿ %) ರದ್ದು ಪಡಿಸಿದ ವೇಳೆ ಮತ್ತು ಅನುಸೂಚಿ ಪ್ರಾರಂಭಿಕ ಸ್ಥಳದಿಂದ ನಿರ್ಗಮನದ ವೇಳೆಗಳ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿ ಸೇವೆಗೆ ಅದರ ಪ್ರಾರಂಭಿಕ ಸ್ಥಳ, ನಿರ್ಗಮನದ ವೇಳೆ, ತಲುಪುವ ಸ್ಥಳಗಳ ವಿವರಗಳನ್ನು ಎಲ್ಲ ಟಿಕೆಟ್‍ಗಳ ಮೇಲೆ ನಮೂದಿಸಲಾಗಿರುತ್ತದೆ.
- ಅನುಸೂಚಿ ಮಾರ್ಗ ಮಧ್ಯ ಸ್ಥಳದಿಂದ ಪ್ರಾರಂಭವಾಗುವ ಪ್ರಯಾಣಗಳಲ್ಲಿ ( ಪ್ರಯಾಣ ಶುರುವಾಗುವುದು, ಸೇವೆಯ ಪ್ರಾರಂಭಿಕ ಸ್ಥಳಕ್ಕಿಂತ ಭಿನ್ನವಾಗಿರುವಾಗ)ಟಿಕೆಟ್ ರದ್ದು ಪಡಿಸುವಾಗ, ಪ್ರಯಾಣದ ಬುಕಿಂಗ್ ಸ್ಥಳದ ಕ.ರಾ.ರ.ಸಾ.ನಿ.ದ ಮುಂಗಟ್ಟೆಗಳ ಮೂಲಕ, ಪ್ರಯಾಣದ ಆರಂಭ ವೇಳೆಯ ವರೆಗೆ ಟಿಕೆಟ್ ರದ್ದು ಪಡಿಸಲು ಅವಕಾಶವಿದ್ದು, ಟಿಕೆಟ್ ಶುಲ್ಕದ 50% ಮೊತ್ತದ ಮರುಪಾವತಿಗೆ ಅವಕಾಶವಿದೆ.
- ಮೇಲಿನ ನಿಯಮಗಳು ಭಾಗಶಃ ರದ್ದು ಪಡಿಸುವಿಕೆಗೂ ಅನ್ವಯಿಸುತ್ತವೆ.
- ಟಿಕೆಟ್ ರದ್ದು ಪಡಿಸುವ ಸೇವೆಗಳಿಗೆ, ರದ್ದು ಪಡಿಸುವ ಶುಲ್ಕವನ್ನು ಪ್ರಯಾಣದ ಶುಲ್ಕದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
- ರಿಯಾಯಿತಿ ದರದಲ್ಲಿ ಖರೀದಿಸಿದ ಟಿಕೆಟ್‍ಗಳಿಗೂ ರದ್ದು ಪಡಿಸುವ ವಿಧಾನ ಮೇಲೆ ತಿಳಿಸದಂತೆಯೇ ಇರುತ್ತದೆ. ಆದರೆ ರದ್ದು ಪಡಿಸುವ ಶುಲ್ಕವನ್ನು ಟಿಕೆಟ್‍ನ ಅಸಲು ಶುಲ್ಕದ ಮೇಲೆ (ರಿಯಾಯಿತಿ ದರದ ಮೇಲಲ್ಲ) ನಿರ್ಧರಿಸಲಾಗುತ್ತದೆ. ಟಿಕೆಟ್‍ನ ಮರುಪಾವತಿ ಮೊತ್ತವು ಟಿಕೆಟ್‍ನ ರಿಯಾಯಿತಿ ಶುಲ್ಕ ಮತ್ತು ರದ್ದು ಪಡಿಸುವ ಶುಲ್ಕ, ಇವೆರಡರ ವ್ಯತ್ಯಾಸವಾಗಿರುತ್ತದೆ.
- ಕಾಯ್ದಿರಿಸುವಿಕೆ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ. ಸೇತುವೆ ಶುಲ್ಕ, ಗ್ರಾಹಕ ಶುಲ್ಕ, ದಾರಿಸುಂಕದ ಶುಲ್ಕ, ಪ್ರವೇಶ ಶುಲ್ಕ ಮತ್ತು ಅಪಘಾತ ಪರಿಹಾರ ನಿಧಿ ಶುಲ್ಕ ಇತ್ಯಾದಿಗಳನ್ನು ಸಂಪೂರ್ಣವಾಗಿ ಮರು ಪಾವತಿಸಲಾಗುತ್ತದೆ.
ರದ್ದು ಪಡಿಸಿದಾಗ ದೊರೆಯುವ ಮರು ಪಾವತಿ ವಿವರಗಳು(ಕಾಯ್ದಿರಿಸುವಿಕೆ ಶುಲ್ಕದ ಹೊರತಾಗಿ) ಕೆಳ ಕಂಡಂತಿವೆ:
ರದ್ಧತಿ ಶುಲ್ಕ
ಕಾಲಾವಧಿ
ಪ್ರಯಾಣ ಶುಲ್ಕದ 10% ರದ್ಧತಿ ಶುಲ್ಕ
ನಿರ್ಗಮನ ವೇಳೆಗಿಂತ 72 ಘಂಟೆಗಳ ಮೊದಲು ಟಿಕೆಟ್ ರದ್ಧತಿ ಮಾಡಿದಲ್ಲಿ.
ಪ್ರಯಾಣ ಶುಲ್ಕದ 25% ರದ್ಧತಿ ಶುಲ್ಕ
ನಿರ್ಗಮನದ ವೇಳೆಗಿಂತ 72 ರಿಂದ 2 ಘಂಟೆ ಮುಂಚಿತವಾಗಿ ಮಾಡಿದ ರದ್ಧತಿ.
ಪ್ರಯಾಣ ಶುಲ್ಕದ 50% ರದ್ಧತಿ ಶುಲ್ಕ
ನಿರ್ಗಮನದ 2 ಘಂಟೆ ಮುಂಚಿತವಾಗಿ ಮತ್ತು ನಿರ್ಗಮನದ 1 ಘಂಟೆಯ ಒಳಗೆ, ಸೇವೆಯ ಪ್ರಾರಂಭಿಕ ಸ್ಥಳದಿಂದ ಟಿಕೆಟ್ ರದ್ದು ಪಡಿಸಿದರೆ ಮಾತ್ರ. ಅಥವಾ ಮಾರ್ಗ ಮಧ್ಯದ ಕಾಯ್ದಿರಿಸುವಿಕೆಯಾಗಿದ್ದಲ್ಲಿ, ಆ ಸ್ಥಳದ ನಿರ್ಗಮನದ ವೇಳೆಯ ವರೆಗೆ ಟಿಕೆಟ್ ರದ್ದು ಪಡಿಸಿದಾಗ.
ಯಾವುದೇ ಮರುಪಾವತಿ ಇಲ್ಲ
ಸೇವೆಯ ಪ್ರಾರಂಭಿಕ ಸ್ಥಾನದಿಂದ, ನಿರ್ಗಮನದ 1 ಘಂಟೆಯ ನಂತರ ಟಿಕೆಟ್ ರದ್ದು ಪಡಿಸಿದರೆ. ಅಥವಾ ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ ಬಸ್‍ನ ನಿರ್ಗಮನದ ನಂತರ ಟಿಕೆಟ್ ರದ್ದು ಪಡಿಸಿದರೆ.









