KSRTC

ವಿಶ್ವ ಬ್ಯಾಂಕ್ ಪ್ರಾಯೋಜಿತ ಯೋಜನೆ

ಬಸ್ ಕಾಯ್ದಿರಿಸಿ

ಕ.ರಾ.ರ.ಸಾ.ನಿ.ದ ವ್ಯವಹಾರ ವಿತರಕರಾಗಿ

ಕಾಯ್ದಿರಿಸುವಿಕೆ ನಿಯಮಗಳು ಮತ್ತು ಷರತ್ತುಗಳು

  1. ಕರಾರಸಾನಿಗಮವು ಅಂತರ್ಜಾಲದ ಮೂಲಕ ಕೇವಲ ಕರಾರಸಾನಿ ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆಯಲ್ಲಿ ವಹಿವಾಟು ನಡೆಸಲು ಅವಕಾಶ ಕಲ್ಪಿಸುತ್ತದೆ. ಈ ಎಲ್ಲ ವಹಿವಾಟುಗಳಿಗೆ ಕರಾರಸಾನಿಗಮದ ಎಲ್ಲ ಕಾಯ್ದಿರಿಸುವಿಕೆ ನಿಬಂಧನೆಗಳು ಅನ್ವಯವಾಗುತ್ತವೆ. ಅದಲ್ಲದೇ ಅಂತರ್ಜಾಲ ಕಾಯ್ದಿರಿಸುವಿಕೆಗೆ ಇರುವ ಹೆಚ್ಚಿನ ನಿಯಮಗಳೂ ಈ ವಹಿವಾಟುಗಳಿಗೆ ಅನ್ವಯಿಸುತ್ತವೆ. ಅಂತರ್ಜಾಲ ಕಾಯ್ದಿರಿಸುವಿಕೆಗೆ ಅನ್ವಯವಾಗುವ ವಿಶೇಷ ನಿಯಮಗಳು ಮತ್ತು ಷರತ್ತುಗಳನ್ನು ಈ ಪುಟದಲ್ಲಿ ವಿವರಿಸಲಾಗಿದೆ.
  2. ನೀವು ಕರಾರಸಾನಿಗಮದ ಅಂತರ್ಜಾಲ ಆಧಾರಿತ ಟಿಕೆಟ್ ಕಾಯ್ದಿರಿಸುವಿಕೆ ಸೇವೆಯನ್ನು ಬಳಸಲು ಇಚ್ಛಿಸಿದರೆ ಈ ಕೆಳಗಿನ ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ದಯವಿಟ್ಟು ಈ ಷರತ್ತುಗಳನ್ನು ಗಮನವಿಟ್ಟು ಓದಿ, ಈ ಷರತ್ತುಗಳಿಗೆ ನಿಮ್ಮ ಒಪ್ಪಿಗೆಯಿದ್ದರೆ, ನೀವು ಅಂತರ್ಜಾಲ ತಾಣದಲ್ಲಿ ನೋಂದಾಯಿಸಿಕೊಂಡು ವಹಿವಾಟು ನಡೆಸಬಹುದು. ಯಾವ ಬಳಕೆದಾರನೂ ಒಂದಕ್ಕಿಂತ ಹೆಚ್ಚು ಬಾರಿ ನೋಂದಾಯಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಸಲ ನೀವು ಕರಾರಸಾನಿ ಅಂತರ್ಜಾಲ ತಾಣದಲ್ಲಿ ನೋಂದಾಯಿತರಾದರೆ, ಈ ಕೆಳಗೆ ನಮೂದಿಸಿರುವ ನಿಯಮಗಳು ಮತ್ತು ಷರತ್ತುಗಳನ್ನು ನೀವು ಒಪ್ಪಿಕೊಂಡಿರುವಿರಿ ಎಂಬ ಅಂಶವನ್ನು ದಯವಿಟ್ಟು ಗಮನಿಸಿ. ನೀವು ಈ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪದಿದ್ದರೆ, ನೀವು ಕರಾರಸಾನಿಗಮದ ಅಂತರ್ಜಾಲ ತಾಣದ ಮೂಲಕ ವ್ಯವಹರಿಸಬಾರದು. ಒಂದು ಬಾರಿ ನೀವು ಲಾಗಿನ್ ಪುಟದ "ನಿಯಮಗಳು ಮತ್ತು ಷರತ್ತುಗಳು" ವಿಭಾಗದ ಕೆಳಗಡೆ ಇರುವ ’ನಾನು ಒಪ್ಪುತ್ತೇನೆ’ ಎಂಬ ಗುಂಡಿಯನ್ನು ಕ್ಲಿಕ್ ಮಾಡಿದ ಮೇಲೆ, ನೀವು ಅಂತರ್ಜಾಲ ತಾಣದಲ್ಲಿ ವ್ಯವಹರಿಸಲು ಕರಾರಸಾನಿಗಮದೊಂದಿಗೆ ಔಪಚಾರಿಕ ಒಪ್ಪಂದ ಮಾಡಿಕೊಂಡಿದ್ದೀರೆಂದು ಪರಿಗಣಿಸಲಾಗುತ್ತದೆ.
  3. ಯಾವುದೇ ಬಳಕೆದಾರ, ಬಳಕೆಯ ಈ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿ, ಒಂದಕ್ಕಿಂತ ಹೆಚ್ಚು ಬಳಕೆದಾರರ ಹೆಸರಿನಿಂದ ನೋಂದಾಯಿತನಾದರೆ ಮತ್ತು/ಅಥವಾ ಟಿಕೆಟ್‍ಗಳನ್ನು ಕಾದಿರಿಸಿದರೆ, ಈ ಸಂದರ್ಭಗಳಲ್ಲಿ, ಇಂತಹ ಎಲ್ಲ ಬಳಕೆದಾರರ ನೋಂದಾವಣೆಗಳನ್ನು ಹಾಗೂ ಈ ಮೂಲಕ ಕಾದಿರಿಸಿರುವ ಕೆಲವು/ಎಲ್ಲ ಟಿಕೆಟ್‍ಗಳನ್ನು, ಯಾವುದೇ ಮುನ್ಸೂಚನೆ ನೀಡದೆ ರದ್ದುಪಡಿಸುವ ಹಕ್ಕು ಕರಾರಸಾನಿಗಮಕ್ಕೆ ಇರುತ್ತದೆ.
  4. ಕರಾರಸಾನಿಗಮದ ಈ ಒಪ್ಪಂದವು ಭಾರತ ಸರ್ಕಾರದ ಪ್ರಚಲಿತ ಕಾನೂನುಗಳು ಮತ್ತು ಕಾನೂನು ಪ್ರಕ್ರಿಯೆಗಳಿಗನುಗುಣವಾಗಿ ರೂಪಿಸಲ್ಪಟ್ಟಿದೆ, ಮತ್ತು ಈ ಒಪ್ಪಂದದ ಪ್ರಕಾರ, ನಿಮ್ಮ ಅಂತರ್ಜಾಲ ಬಳಕೆಯ ಅಥವಾ ಈ ಬಳಕೆಯ ಮೂಲಕ ಕರಾರಸಾನಿಗಮವು ನೀಡಿದ/ಪಡೆದ ಮಾಹಿತಿಗೆ ಸಂಬಂಧಿಸಿದ ಮಾಹಿತಿಗಳು ಕರಾರಸಾನಿಗಮದ ನಿಯಮ ಪಾಲಿಕೆ ಮತ್ತು ಜಾರಿಯನ್ನು ಕುರಿತಾದ ಹಕ್ಕು ಅಥವಾ ಅವಶ್ಯಕತೆಗಳನ್ನು ಉಲ್ಲಂಘಿಸುವಂತಿಲ್ಲ. ಕರಾರಸಾನಿಗಮವು ನಿಮ್ಮ ಅಂತರ್ಜಾಲ ತಾಣದ ಬಳಕೆಯ ವಿವರಗಳನ್ನು ಯಾವುದೇ ನಿಯಂತ್ರಣಾಧಿಕಾರಿ ಅಥವಾ ಪೋಲಿಸ್ ಅಥವಾ ಇನ್ನಿತರ ಮೂರನೇ ಪಕ್ಷಕ್ಕೆ ಒದಗಿಸಬಹುದಾಗಿದೆ ಅಥವಾ ಅಂತರ್ಜಾಲ ಕುರಿತಾದ ಯಾವುದೇ ವಿವಾದದಗಳನ್ನು/ದೂರುಗಳನ್ನು ಬಗೆಹರಿಸಲು ನಿಮ್ಮ ಅಂತರ್ಜಾಲ ತಾಣದ ಬಳಕೆಯ ವಿವರಗಳನ್ನು ಕರಾರಸಾನಿಗಮವು ತನ್ನ ಸ್ವವಿವೇಚನೆಗನುಗುಣವಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಈ ಮೂಲಕ ಒಪ್ಪಿಕೊಳ್ಳಬೇಕಾಗುತ್ತದೆ.
  5. ಆಶ್ವಾಸನೆಯ ಹಕ್ಕು ನಿರಾಕರಣೆ ಮತ್ತು ಬಾಧ್ಯತೆಯ ಇತಿಮಿತಿಗಳನ್ನೊಳಗೊಂಡಂತೆ, ಈ ಒಪ್ಪಂದದ ಯಾವುದೇ ಭಾಗವನ್ನು ಪ್ರಸ್ತುತ ಕಾಯಿದೆಯನ್ವಯ ಅಸಿಂಧುವೆಂದು ಅಥವಾ ಜಾರಿಗೊಳಿಸಲಾಗದಿರುವುದೆಂದು ತೀರ್ಮಾನಿಸಿದಲ್ಲಿ, ಅಸಿಂಧುವಾದ ಅಥವಾ ಜಾರಿಗೆ ತರಲಾಗದ ಒಪ್ಪಂದದ ವಿಭಾಗವು ಪ್ರಸ್ತುತದಲ್ಲಿ ಸಿಂಧುವಾಗಿರುವ ಮತ್ತು ಜಾರಿಗೆ ತರಬಹುದಾದ, ಮೂಲ ಷರತ್ತಿಗೆ ಅತಿ ಸಮೀಪವಾದ, ಷರತ್ತಿನಿಂದ ಅಧಿಕ್ರಮಿಸಲ್ಪಡುತ್ತದೆ. ಒಪ್ಪಂದದ ಉಳಿದ ಭಾಗಗಳು ಮೊದಲಿನಂತೆಯೇ ಸಿಂಧುವಾಗಿರುತ್ತವೆ.
  6. ಈ ಒಪ್ಪಂದವು ಅಂತರ್ಜಾಲ ತಾಣದ ಬಳಕೆಗೆ ಸಂಬಂಧಪಟ್ಟಂತೆ, ಕರಾರಸಾನಿಗಮ ಮತ್ತು ಬಳಕೆದಾರರ ನಡುವಿನ ಸಂಪೂರ್ಣ ಒಪ್ಪಂದವಾಗಿರುತ್ತದೆ, ಮತ್ತು ಅಂತರ್ಜಾಲ ತಾಣದ ಬಳಕೆಯ ಕುರಿತಂತೆ ವ್ಯಿದ್ಯುನ್ಮಾನ, ಮೌಖಿಕ , ಲಿಖಿತ ಸಂಪರ್ಕ ಮಾಧ್ಯಮಗಳನ್ನೊಳಗೊಂಡಂತೆ, ಗ್ರಾಹಕ ಮತ್ತು ಕರಾರಸಾನಿಗಮದ ನಡುವಿನ ಯಾವುದೇ ಪೂರ್ವದ ಹಾಗೂ ಸಮಕಾಲೀನ ಸಂವಾದಗಳನ್ನು/ಯೋಜನೆಗಳನ್ನು ಇದು ಅಧಿಕ್ರಮಿಸುತ್ತದೆ.ಇತರೆ ವ್ಯವಹಾರ ದಾಖಲೆಗಳ ಮುದ್ರಿತ ಪ್ರತಿಗಳಿಗೆ ಅನ್ವಯವಾಗುವ ಷರತ್ತುಗಳು ಮತ್ತು ವ್ಯಾಪ್ತಿಗಳಿಗನುಗುಣವಾಗುವಂತೆ, ಈ ಒಪ್ಪಂದದ ಮತ್ತು ಯಾವುದೇ ವಿದ್ಯುನ್ಮಾನ ಸೂಚನೆಯ ಮುದ್ರಿತ ಪ್ರತಿಯನ್ನೂ ಕೂಡ, ಈ ಒಪ್ಪಂದದ ಆಧಾರಿತ/ಸಂಬಂಧಿತ ನ್ಯಾಯಾಂಗದ ಅಥವಾ ಆಡಳಿತಾತ್ಮಕ ಮೊಕದ್ದಮೆಗಳಲ್ಲಿ ಸಿಂಧುವಾದ ದಾಖಲೆಯೆಂದು ಪರಿಗಣಿಸಲಾಗುತ್ತದೆ.

ಈ- ಟಿಕೆಟ್ ಕಾಯ್ದಿರಿಸುವ ವಿಧಾನ:

ಅಂತರ್ಜಾಲ ಕಾಯ್ದಿರಿಸುವಿಕೆ ವ್ಯವಸ್ಥೆಯ ಮೂಲಕ ಪ್ರಯಾಣಿಕರು ಕ.ರಾ.ರ.ಸಾ.ನಿ. ಮುಂಗಟ್ಟೆ ಮತ್ತು ವ್ಯವಹಾರ ವಿತರಣಾ ಮುಂಗಟ್ಟೆಗಳಿಲ್ಲದ ದೂರದ ಸ್ಥಳಗಳಿಂದ ಕೂಡಾ ಟಿಕೆಟ್ ಕಾದಿರಿಸಬಹುದಾಗಿದೆ ಮತ್ತು ಇತರೆ ಸಂಬಂಧಿತ ವಹಿವಾಟುಗಳನ್ನು ಮಾಡಬಹುದಾಗಿದೆ. ಅಂತರ್ಜಾಲ ಕಾಯ್ದಿರಿಸುವಿಕೆಯ (ಆನ್‍ಲೈನ್ ಕಾಯ್ದಿರಿಸುವಿಕೆ) ವಿಧಾನ ಮತ್ತು ಮಾರ್ಗದರ್ಶಿಗಳು ಈ ಕೆಳಗೆ ವಿವರಿಸಲ್ಪಟ್ಟಿವೆ:

  1. ನೋಂದಾಯಿತ ಗ್ರಾಹಕರು ಅಂತರ್ಜಾಲದ ಮೂಲಕ ಟಿಕೆಟ್ ಕಾದಿರಿಸಬಹುದಾಗಿದೆ. ಅಂತರ್ಜಾಲ ತಾಣದಲ್ಲಿ ತಮ್ಮ ವೈಯಕ್ತಿಕ ವಿವರಗಳೊಂದಿಗೆ ಈ-ಅರ್ಜಿ ಭರ್ತಿ ಮಾಡಿದ ನಂತರ, ಗ್ರಾಹಕರಿಗೆ ಬಳಕೆದಾರರ ಹೆಸರು ಮತ್ತು ಪಾಸ್‍ವರ್ಡ್ ನೀಡಲಾಗುತ್ತದೆ.
  2. ದಿನದ 24 ಘಂಟೆಗಳಲ್ಲಿಯೂ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಟಿಕೆಟ್ ಕಾದಿರಿಸುವಿಕೆಗೆ ಕ್ರೆಡಿಟ್ ಕಾರ್ಡ್/ಅಂತರ್ಜಾಲ ಬ್ಯಾಂಕಿಂಗ್ ಮೂಲಕ ಹಣ ಪಾವತಿ ಮಾಡಬೇಕಾಗುತ್ತದೆ.
  3. ಟಿಕೆಟ್ ಕಾಯ್ದಿರಿಸಬೇಕಾಗಿರುವ ಪ್ರಯಾಣಿಕರು ಕ.ರಾ.ರ.ಸಾ.ನಿ.ದ ಅಂತರ್ಜಾಲ ತಾಣದಲ್ಲಿ ಲಾಗಿನ್ ಆಗಿ, ಮುಂಗಡ ಕಾಯ್ದಿರಿಸುವಿಕೆಗಾಗಿ ನೀಡಿರುವ ಅಂತರ್ಜಾಲ ಕೊಂಡಿಯ ಮೂಲಕ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯನ್ನು ಮುಂದುವರೆಸಬಹುದು. ಲಭ್ಯತೆಯ ಆಧಾರದ ಮೇಲೆ ಪ್ರಯಾಣಿಕರು ತಮಗೆ ಬೇಕಾದ ಸೇವೆಯಲ್ಲಿ, ತಮ್ಮ ಆಯ್ಕೆಯ ಆಸನವನ್ನು ಕಾದಿರಿಸಬಹುದು.
  4. ಟಿಕೆಟ್ ಕಾಯ್ದಿರಿಸುವ ವೇಳೆಯಲ್ಲಿ ಪ್ರಯಾಣಿಕರು ತಮ್ಮ ಗುರುತಿನ ದಾಖಲೆಯ ಪ್ರಕಾರವನ್ನು ಆಯ್ದುಕೊಂಡು, ಪ್ರಯಾಣದ ವೇಳೆಯಲ್ಲಿ ಹಾಜರು ಪಡಿಸುವ ಗುರುತು ದಾಖಲೆಯ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಪಾಸ್‍ಪೋರ್ಟ್, ಚಾಲನಾ ಪರವಾನಿಗೆ, ಮತದಾರರ ಗುರುತು ಚೀಟಿ, ಪ್ಯಾನ್ ಕಾರ್ಡ್, ಪಡಿತರ ಕಾರ್ಡು ಇವುಗಳಲ್ಲಿ ಯಾವುದಾದರೂ ಒಂದು ಭಾವಚಿತ್ರ ಗುರುತಿನ ಚೀಟಿಯನ್ನು, ಪ್ರಯಾಣಿಕರು ಗುರುತಿನ ದಾಖಲೆಯಾಗಿ ಆರಿಸಿಕೊಳ್ಳಬಹುದಾಗಿದೆ.
  5. ಟಿಕೆಟ್ ಕಾಯ್ದಿರಿಸುವ ಮುನ್ನ, ಪ್ರಯಾಣಿಕರು ಪಾವತಿ ಮಾರ್ಗದ (ಪೇಮೆಂಟ್ ಗೇಟ್‍ವೇ) ಅನುಮೋದನೆಗಾಗಿ ಪಾವತಿ ವಿವರಗಳನ್ನು (’ಕ್ರೆಡಿಟ್ ಕಾರ್ಡ್/ಅಂತರ್ಜಾಲ ಬ್ಯಾಂಕಿಂಗ್’) ಒದಗಿಸಬೇಕು. ಪಾವತಿ ಮಾರ್ಗವು ವಹಿವಾಟನ್ನು ಅನುಮೋದಿಸಿದ ನಂತರ ಟಿಕೆಟ್ ಕಾಯ್ದಿರಿಸುವಿಕೆ ಖಚಿತಗೊಳ್ಳುತ್ತದೆ. ಈ ವೇಳೆಯಲ್ಲಿ ಖಚಿತಗೊಂಡ ಟಿಕೆಟ್‍ಗೆ ಪಿಎನ್‍ಆರ್ ಸಂಖ್ಯೆ ರಚನೆಗೊಳ್ಳುತ್ತದೆ. ನಂತರ ಪ್ರಯಾಣಿಕರು ಈ-ಟಿಕೆಟ್‍ನ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳಬಹುದು. ಸ್ವೀಕೃತಿಯ ದಾಖಲೆಯಾಗಿ ಈ-ಟಿಕೆಟ್‍ಗಳು ಸ್ಪಷ್ಟವಾದ A4 ಸೈಜ್ ಕಾಗದದ ಮೇಲೆ ಮುದ್ರಿತವಾಗುತ್ತವೆ ಮತ್ತು ಇವನ್ನು ಪ್ರಯಾಣದ ವೇಳೆಯಲ್ಲಿ ಅಂಗೀಕರಿಸಲಾಗುತ್ತದೆ.
  6. ಬದಲಾಗಿ ಪ್ರಯಾಣಿಕರು ಅಂತರ್ಜಾಲ ಸಂಪರ್ಕ ಮತ್ತು ಮುದ್ರಣ ಸೌಲಭ್ಯ ಇರುವ ಯಾವುದೇ ಗಣಕದಿಂದ ಅಥವಾ ಕ.ರಾ.ರ.ಸಾ.ನಿ.ದ ಮುಂಗಟ್ಟೆಗಳ ಕೆಲಸದ ವೇಳೆಯಲ್ಲಿ, ಟಿಕೆಟ್‍ನ ಪಿಎನ್‍ಆರ್ ಸಂಖ್ಯೆಯನ್ನು ಉಲ್ಲೇಖಿಸಿ ಈ-ಟಿಕೆಟ್‍ನ ಮುದ್ರಿತ ಪ್ರತಿ ಪಡೆಯಬಹುದಾಗಿದೆ. ಪ್ರಯಾಣಿಕರು ಈ ಸೌಲಭ್ಯವನ್ನು, ಪ್ರಯಾಣದ ನಿಗದಿತ ಆರಂಭಿಕ ಸ್ಥಳದಿಂದ ಬಸ್‍ನ ನಿರ್ಗಮನದ ವೇಳೆಯವರೆಗೂ ಪಡೆಯಬಹುದಾಗಿದೆ. ಅವರು  ಅಂತರ್ಜಾಲದ ತಾಣದಲ್ಲಿ ತಮ್ಮ ನೋಂದಾಯಿತ ಬಳಕೆಯ ಹೆಸರಿನಿಂದ ಲಾಗಿನ್ ಆಗಿ, "ಕಾಯ್ದಿರಿಸುವಿಕೆ ಇತಿಹಾಸ ವೀಕ್ಷಿಸಿ (ವ್ಯೂ ಬುಕಿಂಗ್ ಹಿಸ್ಟರಿ)" ಪುಟದಿಂದ ಟಿಕೆಟ್‍ನ ಮುದ್ರಿತ ಪ್ರತಿಯನ್ನು ಪಡೆಯಬಹುದು.
  7. ಕಾದಿರಿಸಿದ ಟಿಕೆಟ್ ಅನ್ನು ಕ.ರಾ.ರ.ಸಾ.ನಿ.ದ ಮುಂಗಟ್ಟೆಗಳಲ್ಲಿ ಮುದ್ರಿಸಬೇಕಿದ್ದಲ್ಲಿ, ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವ ವ್ಯಕ್ತಿಗೆ ಗುರುತು ದಾಖಲೆಯ ಅಸಲು ಪ್ರತಿಯನ್ನು ಪರಿಶೀಲನೆಗಾಗಿ ಒದಗಿಸಬೇಕಾಗುತ್ತದೆ. ಪಿಎನ್‍ಆರ್ ಸಂಖ್ಯೆಯ ಪ್ರಯಾಣ ಸಾರಾಂಶದ ಆಧಾರದ ಮೇಲೆ ಪರಿಶೀಲನೆ ನಡೆಸಲಾಗುತ್ತದೆ. ಪ್ರಯಾಣ ಮುಂಗಟ್ಟೆಗಳಲ್ಲಿ ನೇರವಾಗಿ ಪಡೆದುಕೊಂಡ ಮುಂಗಡ ಟಿಕೆಟ್‍ಗಳಿಗೆ ಪ್ರಯಾಣದ ವೇಳೆ ಯಾವುದೇ ತೆರನಾದ ಗುರುತು ದಾಖಲೆಯನ್ನು ಒದಗಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಮುಂಗಡ ಟಿಕೆಟ್ ಅನ್ನು ಮುದ್ರಿಸಲು ಯಾವುದೇ ಹೆಚ್ಚುವರಿ ಶುಲ್ಕವನ್ನುವಿಧಿಸಲಾಗುವುದಿಲ್ಲ.
  8. ಪ್ರಯಾಣದ ಸಮಯದಲ್ಲಿ ಈ-ಟಿಕೆಟ್‍ನ ಮುದ್ರಿತ ಪ್ರತಿ ಮತ್ತು ಕರಾರಸಾನಿಯು ನಮೂದಿಸಿದ ಗುರುತು ದಾಖಲೆಗಳಲ್ಲಿ ಯಾವುದಾದರೂ ಒಂದು ಗುರುತು ದಾಖಲೆಯನ್ನು ಪ್ರಯಾಣಿಕರು ಹೊಂದಿರಬೇಕಾಗಿರುತ್ತದೆ. ಈ-ಟಿಕೆಟ್‍ನ ಮುದ್ರಿತ ಪ್ರತಿ ಮತ್ತು ಗುರುತು ಚೀಟಿಗಳಿಲ್ಲದೇ ಹೋದಲ್ಲಿ ಪ್ರಯಾಣಿಸಲು ಅವಕಾಶವನ್ನು ಕೊಡಲಾಗುವುದಿಲ್ಲ.
  9. ಅಂತರ್ಜಾಲ ಗ್ರಾಹಕರು, ಪ್ರಯಾಣ ಮಾಡುತ್ತಿರುವ ವ್ಯಕ್ತಿಯ ಹೆಸರನ್ನು ಟಿಕೆಟ್ ಕಾಯ್ದಿರಿಸುವಾಗ ನಮೂದಿಸಬೇಕಾಗುತ್ತದೆ ಮತ್ತು ಪ್ರಯಾಣದ ಸಮಯದಲ್ಲಿ ಕರಾರಸಾನಿಗಮವು ನಮೂದಿಸಿರುವ ಗುರುತು ದಾಖಲೆಯನ್ನು ಒದಗಿಸಬೇಕಾಗುತ್ತದೆ. ಒಂದು ವೇಳೆ ಒಬ್ಬರಿಗಿಂತ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರೆ ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ತಂಡದ ಮುಖಂಡರ ಹೆಸರನ್ನು ನಮೂದಿಸಬೇಕಾಗುತ್ತದೆ ಮತ್ತು ಅವರು ಪ್ರಯಾಣದ ಸಮಯದಲ್ಲಿ ಕರಾರಸಾನಿಗಮವು ನಮೂದಿಸಿರುವ ಗುರುತು ಚೀಟಿಯನ್ನು ಪ್ರಕಟಪಡಿಸಬೇಕಾಗುತ್ತದೆ.
  10. ಪ್ರಯಾಣಿಕರು ಈ-ಟಿಕೆಟ್ ಮೂಲಕ ಪ್ರಯಾಣಿಸುತ್ತಿದ್ದರೆ, ಅವರು ಪ್ರಯಾಣದ ಸಮಯದಲ್ಲಿ, ಈ-ಟಿಕೆಟ್‍ನಲ್ಲಿ ನಮೂದಿಸಿರುವ ಗುರುತಿನ ದಾಖಲೆಯ ಮೂಲಪ್ರತಿಯನ್ನು ಹೊಂದಿರಬೇಕಾಗಿರುತ್ತದೆ.
  11. ಪ್ರಯಾಣದ ವೇಳೆಯಲ್ಲಿ, ಸೇವೆಯಲ್ಲಿರುವ ನಿರ್ವಾಹಕ (ಅಥವಾ ಚಾಲಕ ಕಂ ನಿರ್ವಾಹಕ), ಪ್ರಯಾಣ ಪಟ್ಟಿ ಮತ್ತು ಈ-ಟಿಕೆಟ್‍ನಲ್ಲಿ ನಮೂದಿಸಿರುವ ಪ್ರಯಾಣಿಕರ ಗುರುತು ದಾಖಲೆಯ ಮೂಲ ಪ್ರತಿಯನ್ನು ಪರಿಶೀಲಿಸುತ್ತಾರೆ. ಒಂದು ವೇಳೆ ಪ್ರಯಾಣಿಕರು ಈ-ಟಿಕೆಟ್‍ನಲ್ಲಿ ನಮೂದಿಸಿರುವ ಗುರುತು ದಾಖಲೆಯ ಮೂಲ ಪ್ರತಿಯನ್ನು/ ಈ - ಟಿಕೆಟ್‍ನ ಮುದ್ರಿತ ಪ್ರತಿಯನ್ನು ಒದಗಿಸುವಲ್ಲಿ ವಿಫಲರಾದರೆ, ಅಂತಹ ಈ-ಟಿಕೆಟ್ ಅನ್ನು ಅಸಿಂಧುವೆಂದು ಪರಿಗಣಿಸಲಾಗುತ್ತದೆ ಮತ್ತು ಆ ಪ್ರಯಾಣವನ್ನು "ಟಿಕೆಟ್ ರಹಿತ ಪ್ರಯಾಣ" ಎಂದು ಪರಿಗಣಿಸಲಾಗುತ್ತದೆ. ಗುರುತು ದಾಖಲೆಯ ಕರಡು ಪ್ರತಿಯನ್ನು, ಗುರುತು ದಾಖಲೆಯಾಗಿ ಸ್ವೀಕರಿಸಲಾಗುವುದಿಲ್ಲ.
  12. ಈ-ಟಿಕೆಟ್‍ಗಳಲ್ಲಿ ಭಾಗಶಃ ರದ್ಧತಿಗೆ ಅವಕಾಶವಿಲ್ಲ.
  13. ಅಂತರ್ಜಾಲದಲ್ಲಿ ಕಾದಿರಿಸಿದ ಟಿಕೆಟ್‍ಗಳನ್ನು ("ಈ-ಟಿಕೆಟ್ ಅಥವಾ ಮುಂಗಡ ಟಿಕೆಟ್" ಸಹಿತ/ರಹಿತ) ಆ ಸೇವೆಯ ಮುಂಗಡ ಟಿಕೆಟ್ ಕಾದಿರಿಸುವ ಸೌಲಭ್ಯ ಇರುವವರೆಗೆ ರದ್ದು ಪಡಿಸಬಹುದಾಗಿದೆ. ನೋಂದಾಯಿತ ಗ್ರಾಹಕರು ಟಿಕೆಟ್ ಕಾದಿರಿಸುವ ವೇಳೆಯಲ್ಲಿ ಬಳಸಿದ ಬಳಕೆದಾರರ ಹೆಸರಿನಿಂದ ಲಾಗಿನ್ ಆದರೆ ಮಾತ್ರ ಈ-ಟಿಕೆಟ್ ರದ್ಧತಿಗೆ ಅವಕಾಶವಿರುತ್ತದೆ. ಈ-ಟಿಕೆಟ್ ರದ್ಧತಿಯ ಸಂದರ್ಭಗಳಲ್ಲಿ ಮರುಪಾವತಿ ಮೊತ್ತವನ್ನು ಸಂಬಂಧಿತ ಕ್ರೆಡಿಟ್ ಕಾರ್ಡ್/ಅಂತರ್ಜಾಲ ಬ್ಯಾಂಕಿಂಗ್ ಖಾತೆಗೆ ಮಾತ್ರ ವರ್ಗಾವಣೆ ಮಾಡಲಾಗುತ್ತದೆ.
  14. ಯಾವುದೇ ಸೇವೆಗೆ, ಮುಂಗಡ ಕಾದಿರಿಸುವಿಕೆ ಸ್ಥಗಿತಗೊಂಡ ನಂತರ ಈ-ಟಿಕೆಟ್ ರದ್ದು ಪಡಿಸಲು ಅವಕಾಶವಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಯಾವುದೇ ಮರುಪಾವತಿಯನ್ನು ಮಾಡಲಾಗುವುದಿಲ್ಲ.
  15. ಒಂದು ವೇಳೆ ಕ.ರಾ.ರ.ಸಾ.ನಿ. (ಅಥವಾ ಇತರ STUಗಳು) ವು ಸೇವೆಯನ್ನು ರದ್ದು ಪಡಿಸಿದಲ್ಲಿ, ಆ ಸೇವೆಗೆ ಅನ್ವಯಿಸುವ ಮರುಪಾವತಿ ಮೊತ್ತವನ್ನು ಸಂಬಂಧಿತ ಕ್ರೆಡಿಟ್ ಕಾರ್ಡ್/ ಅಂತರ್ಜಾಲ ಬ್ಯಾಂಕಿಂಗ್ ಖಾತೆಗಳಿಗಷ್ಟೇ ವರ್ಗಾಯಿಸಲಾಗುತ್ತದೆ.
  16. ಪ್ರಯಾಣಿಕರು "ಈ-ಟಿಕೆಟ್" ಕಳೆದು ಹೋದ ಸಂದರ್ಭದಲ್ಲಿ, ತಮ್ಮ ನೋಂದಾಯಿತ ಬಳಕೆದಾರರ ಹೆಸರಿನಿಂದ ಲಾಗಿನ್ ಆಗಿ "ಕಾದಿರಿಸುವಿಕೆ ಇತಿಹಾಸ ವೀಕ್ಷಿಸಿ (ವ್ಯೂ ಬುಕಿಂಗ್ ಹಿಸ್ಟರಿ)" ಪುಟದಿಂದ ಟಿಕೆಟ್‍ನ ಪ್ರತಿಯನ್ನು ಮುದ್ರಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.
  17. ಅಂತರ್ಜಾಲ ಕಾದಿರಿಸುವಿಕೆ ಮೂಲಕ ಮಾಡಿದ ಎಲ್ಲ ವಹಿವಾಟುಗಳ ವಿವರಗಳು "ಕಾದಿರಿಸುವಿಕೆ ಇತಿಹಾಸ ವೀಕ್ಷಿಸಿ (ವ್ಯೂ ಬುಕ್ಡ್ ಹಿಸ್ಟರಿ)" ಪುಟದಲ್ಲಿ ಲಭ್ಯವಿರುತ್ತವೆ. ಈ ವ್ಯವಸ್ಥೆಯನ್ನು ಗ್ರಾಹಕರು ತಮ್ಮ ಪರಾಮರ್ಶೆಗಾಗಿ ಹಾಗೂ ನಂತರದ ಸಂಬಂಧಿತ ಕ್ರೆಡಿಟ್ ಕಾರ್ಡ್/ ಅಂತರ್ಜಾಲ ಬ್ಯಾಂಕಿಂಗ್ ವಹಿವಾಟುಗಳ ಪರಿಶೀಲನೆಗಾಗಿ ಬಳಸಿಕೊಳ್ಳಬಹುದಾಗಿದೆ.
  18. ಅಂತರ್ಜಾಲದ ಮೂಲಕ ಮಾಡಿದ ಎಲ್ಲ ವಹಿವಾಟುಗಳು ವಾಣಿಜ್ಯ ಮಾರ್ಗದಿಂದ(ಪೇಮೆಂಟ್ ಗೇಟ್‍ವೇ) ನಿರ್ದೇಶಿತ ಷರತ್ತುಗಳಿಗನ್ವಯವಾಗಿರುತ್ತವೆ ಮತ್ತು ಯಾವುದೇ ತೆರಿಗೆ ಶುಲ್ಕಗಳಿದ್ದಲ್ಲಿ, ಅವುಗಳಿಗೆ ಬದ್ಧವಾಗಿರುತ್ತವೆ. ಕ.ರಾ.ರ.ಸಾ.ನಿಗಮವು ಪ್ರತಿ ಕಾದಿರಿಸಿದ ಆಸನಕ್ಕೆ, ಟಿಕೆಟ್ ಶುಲ್ಕದ ಮೇಲೆ 2.5% ನಷ್ಟು ಸೇವಾ ಶುಲ್ಕವನ್ನು ಅಂತರ್ಜಾಲ ಕಾಯ್ದಿರಿಸುವಿಕೆಗೆ ವಿಧಿಸುತ್ತದೆ.
  19. ಯಾವುದೇ ಸೇವೆಗೆ ಅನ್ವಯಿಸುವ ರಿಯಾಯಿತಿಗಳು ಅಂತರ್ಜಾಲದ ಮೂಲಕ ಕಾದಿರಿಸಿದ ಎಲ್ಲ ಟಿಕೆಟ್‍ಗಳಿಗೂ ಲಭ್ಯವಿರುತ್ತವೆ.
  20. ಅಧಿಕ ಅಂತರ್ಜಾಲ ಸಂಚಾರದ ಸಂದರ್ಭಗಳಲ್ಲಿ ಈ-ಟಿಕೆಟ್‍ನ ಸೌಲಭ್ಯವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಗಳಿರುವುದರಿಂದ, ಈ ಅನಾನುಕೂಲದಿಂದ ತಪ್ಪಿಸಿಕೊಳ್ಳಲು, ಪ್ರಯಾಣಿಕರು ಟಿಕೆಟ್ ಕಾದಿರಿಸಿದ ತಕ್ಷಣ ಈ-ಟಿಕೆಟ್‍ನ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳಬೇಕೆಂದು ವಿನಂತಿಸುತ್ತೇವೆ.
  21. ಈ-ಟಿಕೆಟ್‍ನ ಮೇಲೆ ಮುದ್ರಿತ ಬಸ್‍ನ ನಿರ್ಗಮನ ಸಮಯಗಳು ಕೇವಲ ತಾತ್ಕಾಲಿಕ.ಟ್ರಾಫಿಕ್ ಜಾಮ್, ವಾಹನ ಕೆಟ್ಟು ಹೋಗುವಿಕೆ ಇತ್ಯಾದಿ ಗಳಂತಹ ಅನಿವಾರ್ಯ ಸಂದರ್ಭಗಳಲ್ಲಿ ಬಸ್ ನಿರ್ಗಮನದ ವೇಳೆಯಲ್ಲಿ ವಿಳಂಬವಾಗುವ ಸಾಧ್ಯತೆ ಇರುತ್ತದೆ. ಆದರೆ ಅನುಸೂಚಿತ ನಿಲ್ದಾಣದಿಂದ ಈ-ಟಿಕೆಟ್‍ನಲ್ಲಿ ನಮೂದಿಸಿರುವ ನಿರ್ಗಮನದ ವೇಳೆಗಿಂತ ಮುಂಚಿತವಾಗಿ ಬಸ್ ಹೊರಡುವುದಿಲ್ಲ.
  22. ಪ್ರಯಾಣಿಕರು ಸೇವೆಯ ನಿಗದಿತ ನಿರ್ಗಮನದ ಸಮಯಕ್ಕಿಂತ 10 ನಿಮಿಷ ಮುಂಚಿತವಾಗಿ ನಿಗದಿತ ಬಸ್ ನಿಲ್ದಾಣದಲ್ಲಿ ಹಾಜರಿರಬೇಕಾಗಿ ವಿನಂತಿ.
  23. ಅಂಧ ವ್ಯಕ್ತಿಗಳು, ಅಂಗವಿಕಲರು, ಹಿರಿಯ ನಾಗರಿಕರು, ಪೋಲಿಸ್ ವಾಹನದ ಅಧಿಪತ್ರ, ಕ.ರಾ.ರ.ಸಾ.ನಿ.ದ ನೌಕರರ ಕುಟುಂಬಕ್ಕೆ ದೊರೆತ ಅನುಜ್ಞಾ ಪತ್ರ, ಕ.ರಾ.ರ.ಸಾ.ನಿ.ದ ನೌಕರರ ಬಳಿ ಇರುವ ಅನುಜ್ಞಾ ಪತ್ರ, ಸ್ವತಂತ್ರ ಟಿಕೆಟ್‍ಗಳು ಇತ್ಯಾದಿ ರಿಯಾಯಿತಿ ಅನುಜ್ಞಾ ಪತ್ರ ಹೊಂದಿರುವ ವ್ಯಕ್ತಿಗಳಿಗೆ ಅಂತರ್ಜಾಲ ಕಾದಿರಿಸುವಿಕೆ ಮೂಲಕ ಟಿಕೆಟ್ ಕಾದಿರಿಸಲು ಅವಕಾಶವಿಲ್ಲ.

ಮರುಪಾವತಿ ವಿಧಾನ ಹಾಗೂ ನಿಯಮಗಳು ಮತ್ತು ಷರತ್ತುಗಳು

  1. ಪ್ರಯಾಣಿಕರು ತಮ್ಮ ಟಿಕೆಟ್‍ಗಳನ್ನು ರದ್ದುಗೊಳಿಸಿದಲ್ಲಿ, ಕರಾರಸಾನಿದ ಹಣಕಾಸು ವಿಭಾಗವು ಮರುಪಾವತಿ ಮೊತ್ತವನ್ನು ಸಂಬಂಧಿತ ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್/ ಅಂತರ್ಜಾಲ ಬ್ಯಾಂಕಿಂಗ್ ಖಾತೆಗೆ ವರ್ಗಾಯಿಸುತ್ತದೆ.
  2. ಹಣ ಸಂದಾಯವಾಗಿ ಟಿಕೆಟ್ ಕಾಯ್ದಿರಿಸುವಿಕೆ ಖಾತರಿಗೊಂಡಿಲ್ಲದಾಗ, ಪ್ರಯಾಣಿಕರು, ಬಳಕೆದಾರರ ಹೆಸರು ಮತ್ತು ಓಬಿ ಉಲ್ಲೇಖ ಸಂಖ್ಯೆ ವಿವರಗಳೊಂದಿಗೆ This e-mail address is being protected from spambots. You need JavaScript enabled to view it ಗೆ ಈ-ಮೇಲ್ ಮಾಡಬೇಕಗುತ್ತದೆ. ಹಣಕಾಸು ವಿಭಾಗದ ಅಧಿಕಾರಿಗಳು ಈ ವಿವರಗಳನ್ನು ಪರಿಶೀಲಿಸಿದ ನಂತರ ಮರುಪಾವತಿ ಮೊತ್ತವು ಸಂಬಂಧಿತ ಕ್ರೆಡಿಟ್ ಕಾರ್ಡ್/ಅಂತರ್ಜಾಲ ಬ್ಯಾಂಕಿಂಗ್ ಖಾತೆಗೆ ವರ್ಗಾವಣೆಯಾಗುತ್ತದೆ.
  3. ಕರಾರಸಾನಿವು ಸೇವೆಯನ್ನು ರದ್ದುಗೊಳಿಸಿದ ಸಂದರ್ಭಗಳಲ್ಲಿ, ಮರುಪಾವತಿಗಾಗಿ ಪ್ರಯಾಣಿಕರು ಬಳಕೆದಾರರ ಹೆಸರು,ವಹಿವಾಟಿನ ಓಬಿ ಉಲ್ಲೇಖ ಸಂಖ್ಯೆ ಮತ್ತು ಪಿಎನ್‍ಆರ್ ಸಂಖ್ಯೆಯ ವಿವರಗಳೊಂದಿಗೆ This e-mail address is being protected from spambots. You need JavaScript enabled to view it ಗೆ ಈ-ಮೇಲ್ ಕಳಿಸಬೇಕಾಗುತ್ತದೆ. ಸಂಚಾರ- AWATAR ಆಡಳಿತಾಧಿಕಾರಿಗಳು ಈ ವಿವರಗಳನ್ನು ಪರಿಶೀಲಿಸಿ ಹಣಕಾಸು ವಿಭಾಗಕ್ಕೆ ಮರುಪಾವತಿಗಾಗಿ ನಿರ್ದೇಶನ ನೀಡುತ್ತಾರೆ. ಆಗ ಹಣಕಾಸು ವಿಭಾಗವು ಮರುಪಾವತಿ ಮೊತ್ತವನ್ನು ಸಂಬಂಧಿತ ಕ್ರೆಡಿಟ್ ಕಾರ್ಡ್/ಅಂತರ್ಜಾಲ ಬ್ಯಾಂಕಿಂಗ್ ಖಾತೆಗೆ ವರ್ಗಾಯಿಸುತ್ತದೆ.
  4. ಇನ್ನಿತರ ಯಾವುದೇ ಕಾರಣಗಳಿಗಾಗಿ ಹಣ ಮರುಪಾವತಿಯಾಗಬೇಕಿದ್ದಲ್ಲಿ, ಪ್ರಯಾಣಿಕರು ತಮ್ಮ ಬಳಕೆದಾರರ ಹೆಸರು,ವಹಿವಾಟಿನ ಓಬಿ ಉಲ್ಲೇಖ ಸಂಖ್ಯೆ ಮತ್ತು ಪಿಎನ್‍ಆರ್ ಸಂಖ್ಯೆಯ ವಿವರಗಳೊಂದಿಗೆ, ಮರುಪಾವತಿಯ ಕಾರಣವನ್ನು ಉಲ್ಲೇಖಿಸಿ This e-mail address is being protected from spambots. You need JavaScript enabled to view it ಗೆ ಈ-ಮೇಲ್ ಮಾಡಬೇಕಾಗುತ್ತದೆ.ಇಂತಹ ಕೋರಿಕೆಗಳನ್ನು ಸೇವೆಯ ನಿರ್ಗಮನದ ವೇಳೆಗಿಂತ ಮುಂಚೆ ಸಲ್ಲಿಸಿದಲ್ಲಿ ಮಾತ್ರ ಪರಿಗಣಿಸಲಾಗುತ್ತದೆ. ಸಂಚಾರ- AWATAR ಆಡಳಿತಾಧಿಕಾರಿಗಳು ಈ ವಿವರಗಳನ್ನು ಪರಿಶೀಲಿಸಿ, ಪ್ರಯಾಣಿಕರ ಗಮನದಲ್ಲಿರುವಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.ಇಂತಹ ಕೋರಿಕೆಗಳನ್ನು ಪ್ರಯಾಣದ ದಿನಾಂಕದ 6 ತಿಂಗಳೊಳಗೆ ಕಳಿಸಬೇಕಾಗುತ್ತದೆ. ಪ್ರಯಾಣದ ದಿನಾಂಕದ 6 ತಿಂಗಳಿನ ನಂತರ ಸಲ್ಲಿಸಿದ ಕೋರಿಕೆಗಳನ್ನು ಪರಿಗಣಿಸಲಾಗುವುದಿಲ್ಲ.

ಸಾಮಾನ್ಯವಾಗಿ ಟಿಕೆಟ್ ರದ್ದು ಪಡಿಸಿದ ಅಥವಾ ಈ-ಮೇಲ್ ದೊರೆತ 7 ಕೆಲಸದ ದಿನಗಳ ಒಳಗೆ ಪ್ರಯಾಣಿಕರಿಗೆ ಮರುಪಾವತಿ ಮೊತ್ತವನ್ನು ಪಾವತಿಸಲಾಗುತ್ತದೆ. ಮರುಪಾವತಿಯಲ್ಲಿ ಯಾವುದೇ ರೀತಿಯ ವಿಳಂಬವಾದಲ್ಲಿ ಪ್ರಯಾಣಿಕರು ಕೆಳಕಂಡ ದೂರವಾಣಿ ಸಂಖ್ಯೆಗಳ ಮೂಲಕ ಕರಾರಸಾನಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಹಣಕಾಸು ವಿಭಾಗ:

(ವಿಫಲ/ರದ್ದುಗೊಳಿಸಿದ ವಹಿವಾಟುಗಳಿಗಾಗಿ) 080-22221321 ವಿ.ಸಂ. 283, 280

ಸಂಚಾರ - AWATAR ಆಡಳಿತ:

(ವಿಫಲ/ರದ್ದುಗೊಳಿಸಿದ ವಹಿವಾಟುಗಳ ಹೊರತು ಇನ್ಯಾವುದೇ ಕಾರಣಕ್ಕಾಗಿ ಟಿಕೆಟ್ ರದ್ದಾದಲ್ಲಿ) 080-22221321 ವಿ.ಸಂ. 278, 7760990034/35

KSRTC © 2011. All Rights Reserved.KSRTC eMailCRM Login

Designed and Developed by Fugo Creative Pvt Ltd

Powered by :
Radiant info