KSRTC

ವಿಶ್ವ ಬ್ಯಾಂಕ್ ಪ್ರಾಯೋಜಿತ ಯೋಜನೆ

ಬಸ್ ಕಾಯ್ದಿರಿಸಿ

ಕ.ರಾ.ರ.ಸಾ.ನಿ.ದ ವ್ಯವಹಾರ ವಿತರಕರಾಗಿ

ಪಾಸ್ ಗಳು ಮತ್ತು ರಿಯಾಯಿತಿಗಳು

ರಿಯಾಯಿತಿಗಳು (ಟಿಕೆಟ್ ಕಾಯ್ದಿರಿಸುವಿಕೆ)

  • ಗುಂಪು ಕಾಯ್ದಿರಿಸುವಿಕೆ ರಿಯಾಯಿತಿ - 4 ಅಥವಾ 4 ಕ್ಕಿಂತ ಹೆಚ್ಚು ಟಿಕೆಟ್‍ಗಳನ್ನು ಒಂದೇ ಗುಂಪಿನಡಿಯಲ್ಲಿ ಕಾಯ್ದಿರಿಸಿದಾಗ ಟಿಕೆಟ್‍ನ ಮೂಲ ಶುಲ್ಕದ ಮೇಲೆ 5% ರಿಯಾಯಿತಿಗೆ ಅವಕಾಶವಿರುತ್ತದೆ.
  • ಮರು ಪ್ರಯಾಣ ರಿಯಾಯಿತಿ - ಹೋಗುವ ಮತ್ತು ಹಿಂದಿರುಗುವ ಟಿಕೆಟ್‍ಗಳನ್ನು ಒಟ್ಟಿಗೆ ಕಾಯ್ದಿರಿಸಿದಾಗ ಟಿಕೆಟ್‍ನ ಮೂಲ ಶುಲ್ಕದ ಮೇಲೆ 10% ರಿಯಾಯಿತಿಗೆ ಅವಕಾಶವಿರುತ್ತದೆ.
  • ನಗರ ಸೇವೆಗಳಲ್ಲಿ ಉಚಿತ ಸಂಚಾರ - ಮುಂಗಡ ಟಿಕೆಟ್ ಕಾದಿರಿಸಿರುವ ಪ್ರಯಾಣಿಕರು ಬಸ್ ಸೇವೆಯ ನಿರ್ಗಮನದ ಮುಂಚೆ 2 ಘಂಟೆಗಳ ಕಾಲ ಉಚಿತವಾಗಿ ನಗರ ಸಂಚಾರ ಸೇವೆಯನ್ನು ಬಳಸಬಹುದಾಗಿದೆ.

ರಿಯಾಯಿತಿಗಳು (ಶಾಸಕರು ಮತ್ತು ಇತರರು)

  • ಎಮ್‍ಎಲ್‍ಎ - ಎಲ್ಲಾ ಶ್ರೇಣಿಗಳ ಸೇವೆಯಲ್ಲಿ ಉಚಿತ ಪ್ರಯಾಣದ ಅವಕಾಶ.
  • ಮಾಜಿ ಎಮ್‍ಎಲ್‍ಎ - ಒಬ್ಬ ಸಹ-ಪಯಣಿಗರೊಂದಿಗೆ ಎಲ್ಲಾ ಶ್ರೇಣಿಗಳ ಸೇವೆಯಲ್ಲಿ ಉಚಿತ ಪ್ರಯಾಣದ ಅವಕಾಶ.
  • ಪತ್ರಿಕೋದ್ಯಮಿ - ಗುರುತಿನ ಚೀಟಿಯನ್ನು ಹೊಂದಿರುವ ಪತ್ರಿಕೋದ್ಯಮಿಗಳಿಗೆ ಉಚಿತ ನಗರ ಸಂಚಾರಕ್ಕೆ ಅವಕಾಶ.
  • ಹಿರಿಯ ನಾಗರಿಕರು ( 65 ವರ್ಷ ಮತ್ತು 65 ವರ್ಷದ ಮೇಲ್ಪಟ್ಟು) - ರಾಜಹಂಸ ಮತ್ತು ಕೆಳಗಿನ ಶ್ರೇಣಿಗಳ ಸೇವೆಗಳಿಗೆ 25% ರಿಯಾಯಿತಿಯ ಅವಕಾಶ.

ಪಾಸುಗಳು (ರಿಯಾಯಿತಿ)

  • ವಿದ್ಯಾರ್ಥಿ ರಿಯಾಯಿತಿ ಪಾಸುಗಳು - ಸಾಮಾನ್ಯ ಬಸ್ ದರಗಳ ಮೇಲೆ 75% ರಿಂದ 80% ವರೆಗಿನ ರಿಯಾಯಿತಿ.
  • ಸ್ವಾತಂತ್ರ್ಯ ಹೋರಾಟಗಾರರು - ರಾಜಹಂಸ ಮತ್ತು ಕೆಳಗಿನ ಶ್ರೇಣಿಗಳ ಸೇವೆಗಳಲ್ಲಿ ಉಚಿತ ಪ್ರಯಾಣದ ಅವಕಾಶ. 75 ವರ್ಷದ ಮೇಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಸೇವೆಗಳಲ್ಲಿ ಒಬ್ಬ ಸಹಪ್ರಯಾಣಿಗರರ ಜೊತೆಗೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶವಿದೆ.
  • ಅಂಧರ ಪಾಸುಗಳು - ಸಾಮಾನ್ಯ ಮತ್ತು ವೇಗದೂತ ಸೇವೆಗಳಲ್ಲಿ ರಾಜ್ಯದಾದ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ.
  • ಅಂಗವಿಕಲ ಪಾಸುಗಳು - ಪ್ರತಿ ನಗರ/ಉಪನಗರ ಸೇವೆ ಹಾಗೂ ಗ್ರಾಮಾಂತರ ಸೇವೆಗಳಲ್ಲಿ ಬಾಗಿಲಿನ ಹತ್ತಿರದ 2 ಆಸನಗಳು ಅಂಗವಿಕಲರಿಗಾಗಿ ಮೀಸಲಾಗಿರುತ್ತವೆ.

ಮಾಸಿಕ ಪಾಸುಗಳಲ್ಲಿ ಎರಡು ವಿಧಗಳಿವೆ

  • ನಗರ ಸೇವೆಗಳ ಮಾಸಿಕ ಪಾಸುಗಳು

ನಗರ ಸೇವೆಗಳ ಮಾಸಿಕ ಪಾಸುಗಳ ದರ ಪಟ್ಟಿ

ಸೇವೆಯ ಪ್ರಕಾರ
ದರಗಳು
ನಗರ ರೂ.400
ಉಪನಗರ ರೂ.540
ವೋಲ್ವೊ ರೂ.750
  • ಗ್ರಾಮೀಣ ಪ್ರದೇಶಗಳ ಮಾಸಿಕ ಪಾಸುಗಳು

ಸಂಚಾರ – AWATAR ಆಡಳಿತ

ಶುಲ್ಕ ವಿಧಿಸುವ ಘಟ್ಟ ದರಗಳು
1 ರೂ.240-00
2 ರೂ.400-00
3 ರೂ.560-00
4 ರೂ.680-00
5 ರೂ.720-00
6 ರೂ.800-00
7 ರೂ.900-00
8 ರೂ.1020-00
9 ರೂ.1140-00
10 ರೂ.1220-00
11 ರೂ.1280-00
12 ರೂ.1310-00
13 ರೂ.1330-00
14 ರೂ.1360-00
15 ರೂ.1390-00
16 ರೂ.1410-00
17 ರೂ.1430-00
18 ರೂ.1440-00
19 ರೂ.1450-00
20 ರೂ.1460-00
21 ರೂ.1470-00
22 ರೂ.1480-00
23 ರೂ.1490-00

ಸ್ವತಂತ್ರ ಟಿಕೆಟ್‍ಗಳು(7 ದಿನಗಳ ಪಾಸ್)

ಸ್ವತಂತ್ರ ಪಾಸುಗಳ ದರಪಟ್ಟಿ

ಕಾಲ ತಿಂಗಳು ಗ್ರಾಮೀಣ ಪ್ರದೇಶ, ಕರ್ನಾಟಕ ಸಾರಿಗೆ ರಾಜಹಂಸ, ಸೆಮಿ-ಸ್ಲೀಪರ್, ಎಕ್ಸೆಕ್ಯೂಟಿವ್
ವಯಸ್ಕರು ಮಕ್ಕಳು ವಯಸ್ಕರು ಮಕ್ಕಳು
ಸಕಾಲ ಏಪ್ರಿಲ್, ಮೇ, ಜೂನ್, ಅಕ್ಟೋಬರ್, ಡಿಸೆಂಬರ್ ರೂ.8೦೦/- ರೂ.4೦೦/- ರೂ.17೦೦/- ರೂ.85೦/-
ಅಕಾಲ ಜನೆವರಿ, ಫೆಬ್ರುವರಿ, ಮಾರ್ಚ್, ಜುಲೈ, ಆಗಸ್ಟ್, ಸೆಪ್ಟೆಂಬರ್, ನವೆಂಬರ್ ರೂ. 75೦/- ರೂ.35೦/- ರೂ.155೦/- ರೂ.750/-

ಸುವರ್ಣ ಕರ್ನಾಟಕ ಟಿಕೆಟ್‍ಗಳು (3 & 4 ದಿನದ ಪಾಸುಗಳು)

ಸುವರ್ಣ ಕರ್ನಾಟಕ ಪಾಸ್‍ನ ದರಪಟ್ಟಿ

ದಿನಗಳು ವಾರ ಸಾಮಾನ್ಯ/ವೇಗದೂತ ಶೀತಲ್ ರಾಜಹಂಸ
3 ದಿನಗಳು ಶುಕ್ರ, ಶನಿ ಮತ್ತು ರವಿವಾರ ರೂ.5೦೦/- ರೂ. 6೦೦/- ರೂ.7೦೦/-
4 ದಿನಗಳು ಸೋಮ, ಮಂಗಳ, ಬುಧ ಮತ್ತು ಗುರುವಾರ ರೂ.5೦೦/- ರೂ. 6೦೦/- ರೂ.7೦೦/-

ಕ.ರಾ.ರ.ಸಾ.ನಿ/ಬೆಂ.ಮ.ಸಾ.ಸಂ. ಸಂಯೋಜಿತ ಪಾಸ್ (ದೈನಂದಿನ ಪಾಸ್)

ಕ.ರಾ.ರ.ಸಾ.ನಿ/ಬೆಂ.ಮ.ಸಾ.ಸಂ. ದೈನಂದಿನ ಸಂಯೋಜಿತ ಪಾಸುಗಳ ದರಪಟ್ಟಿ

ಕ್ರ.ಸಂ. ಇಂದ ಗೆ ಪಾಸ್ ಶುಲ್ಕ (ರೂ)
1 ಕನಕಪುರ ಬೆಂಗಳೂರು 90.00
2 ಹಾರೊಹಳ್ಳಿ ಬೆಂಗಳೂರು 70.00
3 ಚನ್ನಪಟ್ನ ಬೆಂಗಳೂರು 90.00
4 ರಾಮನಗರ ಬೆಂಗಳೂರು 75.00
5 ಮಾಗಡಿ ಬೆಂಗಳೂರು 65.00
6 ಚಿಕ್ಕಬಳ್ಳಾಪುರ ಬೆಂಗಳೂರು 90.00
7 ಗೌರಿಬಿದನೂರು ಬೆಂಗಳೂರು 115.00
8 ಶಿಢ್ಲಘಟ್ಟ ಬೆಂಗಳೂರು 80.00
9 ಚಿಂತಾಮಣಿ ಬೆಂಗಳೂರು 110.00
10 ಕೋಲಾರ ಬೆಂಗಳೂರು 105.00
11 ತುಮಕೂರು ಬೆಂಗಳೂರು 100.00
12 ಕುಣಿಗಲ್ ಬೆಂಗಳೂರು 95.00
  • ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ರಾಜ್ಯ ಕಾರ್ಯದರ್ಶಿಗಳಿಗೆ ಉಚಿತ ಪ್ರಯಾಣದ ಸೌಲಭ್ಯ.
  • ಗುರುತು ಪತ್ರ ಹೊಂದಿರುವ ಪತ್ರಿಕೋದ್ಯಮಿಗಳಿಗೆ ಉಚಿತ ಪಾಸುಗಳು/ಕೂಪನ್‍ಗಳು.
  • ಪ್ರಚಲಿತ ಮತ್ತು ಮಾಜಿ ಎಮ್‍ಎಲ್‍ಎ, ಎಮ್‍ಎಲ್‍ಸಿ ಗಳಿಗೆ ಉಚಿತ ಪಾಸುಗಳು.
  • 65 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಟಿಕೆಟ್ ಶುಲ್ಕದ ಮೇಲೆ 25% ರಿಯಾಯಿತಿ.

ಬಸ್ ಆಸನ ಕಾಯ್ದಿರಿಸುವ ವಿವಿಧ ವಿಧಾನಗಳು

ಬಸ್ ಆಸನ ಕಾಯ್ದಿರಿಸುವಿಕೆಯನ್ನು ಸರಳ ಮತ್ತು ಗ್ರಾಹಕಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕರಾರಸಾನಿ ಆಸನ ಕಾದಿರಿಸುವ ವಿವಿಧ ವಿಧಾನಗಳನ್ನು ಪರಿಚಯಿಸಿದೆ.

  • ಮುಂಗಟ್ಟೆ ಕಾಯ್ದಿರಿಸುವಿಕೆ.
  • ಕರಾರಸಾನಿ ಮುಂಗಟ್ಟೆಗಳು: ಪ್ರಯಾಣಿಕರು ತಮ್ಮ ಸಮೀಪದ ಪ್ರಮುಖ ಕರಾರಸಾನಿ/ಬೆಂಮಸಾಸಂ ಬಸ್ ನಿಲ್ದಾಣಗಳಲ್ಲಿರುವ ಕರಾರಸಾನಿ ಮುಂಗಟ್ಟೆಗಳಿಗೆ ಭೇಟಿಕೊಟ್ಟು ತಮ್ಮ ಆಸನಗಳನ್ನು ಕಾದಿರಿಸಬಹುದಾಗಿದೆ.
  • ವ್ಯವಹಾರ ವಿತರಣಾ ಮುಂಗಟ್ಟೆಗಳು: ನೆರೆಯ ರಾಜ್ಯಗಳೂ ಸೇರಿದಂತೆ ಹಲವಾರು ಪ್ರಮುಖ ಸ್ಥಳಗಳಲ್ಲಿ ಲಭ್ಯವಿರುವ ಕರಾರಸಾನಿ ವ್ಯವಹಾರ ವಿತರಣಾ ಮುಂಗಟ್ಟೆಗಳ ಮೂಲಕವೂ ಪ್ರಯಾಣಿಕರು ತಮ್ಮ ಆಸಗಳನ್ನು ಕಾದಿರಿಸಬಹುದಾಗಿದೆ.
  • ಈ-ಕಾದಿರಿಸುವಿಕೆ: ಪ್ರಯಾಣಿಕರು ಕರಾರಸಾನಿದ ‘ksrtc.in’ ಅಂತರ್ಜಾಲ ತಾಣದ ಮೂಲಕವೂ ತಮ್ಮ ಆಸನಗಳನ್ನು ಕಾದಿರಿಸಬಹುದು.ಈ-ಟಿಕೆಟ್ ಕಾದಿರಿಸಲು ಅವಶ್ಯಕವಾದ ಪೂರ್ವಭಾವಿ ಷರತ್ತು: ಹೊಸ ಪ್ರಯಾಣಿಕರು ಆಸನ ಕಾದಿರಿಸಲು ಕರಾರಸಾನಿದೊಂದಿಗೆ ನೋಂದಾಯಿತರಾಗಬೇಕು. ನೋಂದಾಯಿತ ಬಳಕೆದಾರರ ಹೆಸರನ್ನು ಉಪಯೋಗಿಸಿ, ಕಾಯ್ದಿರಿಸುವಿಕೆ ಮತ್ತು ರದ್ದು ಪಡಿಸುವಿಕೆಗಳಂತಹ ಭವಿಷ್ಯದ ಎಲ್ಲಾ ವಹಿವಾಟುಗಳನ್ನು ಮಾಡಬಹುದಾಗಿದೆ.ಪ್ರಮುಖ ಸೂಚನೆ: ಪ್ರಯಾಣಿಕರು ಮುದ್ರಿತ ಈ-ಟಿಕೆಟ್ ಮತ್ತು ಗುರುತು ಚೀಟಿಗಳನ್ನು ಪ್ರಯಾಣದ ಸಮಯದಲ್ಲಿ ಹೊಂದಿರಬೇಕಾಗುತ್ತದೆ
  • ಮೊಬೈಲ್ ಕಾಯ್ದಿರಿಸುವಿಕೆ: ಪ್ರಯಾಣಿಕರು ತಮ್ಮ ಮೊಬೈಲ್‍ನ ಮೂಲಕ ತಮ್ಮ ಆಸನಗಳನ್ನು ಕಾದಿರಿಸಬಹುದು. ಈ ಸೌಲಭ್ಯವನ್ನು ಪಡೆಯಲು ಪ್ರಯಾಣಿಕರು ‘ngpay’ ತಂತ್ರಾಂಶವನ್ನು ತಮ್ಮ ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಕಾದಿರಿಸುವ ವಿಧಾನ:
    1. KSRTC ಎಂದು 56767 ಗೆ ಎಸ್‍ಎಮ್‍ಎಸ್ ಕಳಿಸಿ.
    2. ngpay ತಂತ್ರಾಂಶವನ್ನು ಡೌನ್‍ಲೋಡ್ ಮಾಡಿಕೊಳ್ಳಲು ಬೇಕಾದ ಅಂತರ್ಜಾಲ ಕೊಂಡಿಯನ್ನು ಹೊಂದಿರುವ ಎಸ್‍ಎಮ್‍ಎಸ್ ನಿಮಗೆ ತಲುಪುತ್ತದೆ.
    3. ತಂತ್ರಾಂಶವನ್ನು ಡೌನ್‍ಲೋಡ್ ಮಾಡಿಕೊಂಡು, ತಮ್ಮ ಹೆಸರು ಮತ್ತು ವಿಳಾಸದೊಂದಿಗೆ ಒಂದೇ ಬಾರಿ ನೋಂದಾಯಿಸಿಕೊಳ್ಳಿ.
    4. ನಿಮ್ಮ ಟಿಕೆಟ್ ಅನ್ನು ಕಾದಿರಿಸಲು ngpay ನಲ್ಲಿರುವ KSRTC ಪುಟವನ್ನು ಸಂದರ್ಶಿಸಿ.

ಮೊಬೈಲ್ ಮೂಲಕ ಟಿಕೆಟ್ ಕಾದಿರಿಸಲು ಅವಶ್ಯಕವಾದ ಪೂರ್ವಭಾವಿ ಷರತ್ತು: ಗ್ರಾಹಕರ ಮೊಬೈಲ್ ಜಿಪಿಆರ್‌ಎಸ್ ಸೌಲಭ್ಯವನ್ನು ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

080-22221321 ವಿ.ಸಂ.:302

KSRTC © 2011. All Rights Reserved.KSRTC eMailCRM Login

Designed and Developed by Fugo Creative Pvt Ltd

Powered by :
Radiant info