KSRTC

ವಿಶ್ವ ಬ್ಯಾಂಕ್ ಪ್ರಾಯೋಜಿತ ಯೋಜನೆ

ಬಸ್ ಕಾಯ್ದಿರಿಸಿ

ಕ.ರಾ.ರ.ಸಾ.ನಿ.ದ ವ್ಯವಹಾರ ವಿತರಕರಾಗಿ

ಹೊಸ ವ್ಯವಹಾರ ವಿತರಕರ (ಏಜೆಂಟರ) ನೇಮಕಾತಿ ಪದ್ಧತಿ

ಅವಶ್ಯಕತೆಯ ಆಧಾರದ ಮೇಲೆ ಕರಾರಸಾನಿಗಮವು ದಿನ-ಪತ್ರಿಕೆಗಳಲ್ಲಿ ಪ್ರಕಟಣೆ ಮತ್ತು ಜಾಹೀರಾತುಗಳನ್ನು ಹೊರಡಿಸುತ್ತದೆ. ಇದೇ ಜಾಹೀರಾತು ಮತ್ತು ಪ್ರಕಟಣೆಗಳು ಅಂತರ್ಜಾಲ ತಾಣದಲ್ಲಿಯೂ ಲಭ್ಯವಿರುತ್ತವೆ. ಆಸಕ್ತ ಅಭ್ಯರ್ಥಿಗಳು ಕರಾರಸಾನಿಗಮದಿಂದ ಅರ್ಜಿಯನ್ನು ಖರೀದಿಸಿ, ಪ್ರಕಟ ಪಡಿಸಿದ ಸ್ಥಳಗಳಿಗೆ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. ಆಯ್ಕೆಯು ಸಂಪೂರ್ಣವಾಗಿ ಅಧಿಸೂಚನೆಯ ಆಧಾರಿತವಾಗಿರುತ್ತದೆ. ಇತರೆ ವಿವರಗಳು ಅಧಿಸೂಚನೆಯ ಸಮಯದಲ್ಲಿ ಲಭ್ಯವಿರುತ್ತವೆ.

ವ್ಯವಹಾರ ವಿತರಕರ ನೇಮಕಾತಿ ಪದ್ಧತಿ (ಅಂತರ್‌ರಾಜ್ಯ ಸ್ಥಳಗಳಿಗೆ) & ಷರತ್ತುಗಳು ಮತ್ತು ನಿಬಂಧನೆಗಳು

ಅನೆಕ್ಷರ್ - ಏ

ಮಾದರಿ ಅರ್ಜಿ ಪತ್ರಿಕೆ - ಡೌನ್‍ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಅನೆಕ್ಷರ್ - ಸಿ

ವ್ಯವಹಾರ ವಿತರಕರ ನೇಮಕಾತಿ ಷರತ್ತುಗಳು ಮತ್ತು ನಿಬಂಧನೆಗಳು ಕೆಳಕಂಡಂತಿವೆ:

1. ಅರ್ಜಿ ಪತ್ರಗಳನ್ನು ಉಚಿತವಾಗಿ ನೀಡಲಾಗುವುದು. ಅರ್ಜಿ ಪತ್ರದ ನಕಲು ಪ್ರತಿ ಅಥವಾ ಮುದ್ರಿತ ಪ್ರತಿಯನ್ನೂ ಸಹ ಮನವಿಗಾಗಿ ಬಳಸಿಕೊಳ್ಳಬಹುದಾಗಿದೆ.

2. ತಾತ್ಕಾಲಿಕ ನೇಮಕಾತಿಗಾಗಿ (ಆರಂಭಿಕ ನೇಮಕಾತಿ) ಅರ್ಜಿ ಸಲ್ಲಿಸುತ್ತಿದಲ್ಲಿ, ಅರ್ಜಿಯೊಂದಿಗೆ ರೂ. 1000/- ಗಳ ಡಿಮ್ಯಾಂಡ್ ಡ್ರಾಫ಼್ಟ್ ಒಂದನ್ನು ಸಂಬಂಧ ಪಟ್ಟ ಡಿವಿಜನಲ್ ಕಂಟ್ರೋಲರ್, ಕೆ‍ಎಸ್‍ಆರ್‌ಟಿಸಿ ಇವರ ಹೆಸರಿನಲ್ಲಿ ಸಂಸ್ಕರಣ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಸಂಸ್ಕರಣ ಶುಲ್ಕವನ್ನು ಪ್ರಥಮ ಬಾರಿ ಅರ್ಜಿ ಸಲ್ಲಿಸುವಾಗ, ಅರ್ಜಿಯೊಂದಿಗೆ ಪಾವತಿಸಬೇಕಗುತ್ತದೆ, ಹಾಗೂ ಈ ಮೊತ್ತವು ಮರುಪಾವತಿಯಾಗುವುದಿಲ್ಲ. ಅರ್ಜಿ ನವೀಕರಣದ ಸಂದರ್ಭದಲ್ಲಿ, ಯಾವುದೇ ಸಂಸ್ಕರಣ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

3.ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧ ಪಟ್ಟ ಡಿವಿಜನಲ್ ಕಂಟ್ರೋಲರ್‌ರಿಗೆ ಯಾವುದೇ ಕೆಲಸದ ದಿನಗಳಲ್ಲಿ ಖುದ್ದಾಗಿ ಅಥವಾ ಪೋಸ್ಟ್ ಹಾಗೂ ಕೊರಿಯರ್ ಮುಖಾಂತರ ಸಲ್ಲಿಸಬಹುದಾಗಿದೆ.

4.ಅರ್ಜಿ ಸ್ವೀಕರಿಸಿದ 30  ದಿನಗಳ ಒಳಗಾಗಿ, ಕರಾರಸಾನಿವು ಅರ್ಜಿಯ ಸ್ವೀಕೃತಿ ಅಥವಾ ನಿರಾಕರಣೆ ಕುರಿತಂತೆ ನಿರ್ಧಾರ ಕೈಗೊಳ್ಳುತ್ತದೆ.

5.ಭಾರತೀಯ ಸಹಸ್ವಾಮ್ಯ ಕಾಯ್ದೆ ಅಡಿಯಲ್ಲಿ ಮತ್ತು ಕಂಪನಿ ಕಾಯ್ದೆ ಅಡಿಯಲ್ಲಿ ನೋಂದಾಯಿತ ಸಂಸ್ಥೆಗಳು ಅರ್ಜಿ ಸಲ್ಲಿಸುತ್ತಿದ್ದರೆ, ಅರ್ಜಿಗೆ ಸಹಿ ಹಾಕುವ ವ್ಯಕ್ತಿಯು, ಸಂಸ್ಥೆಯ ಪ್ರತಿನಿಧಿತ್ವದಲ್ಲಿ ಅರ್ಜಿ ಸಲ್ಲಿಕೆ ಕುರಿತಂತೆ ಇರುವ ಅಧಿಕಾರಕ್ಕೆ ಸಂಬಂಧ ಪಟ್ಟ ವಿವರಗಳನ್ನು ಒದಗಿಸಬೇಕಾಗುತ್ತದೆ ಮತ್ತು ಸಂಬಂಧಿತ ಪಾಲುದಾರಿಕೆ ಪತ್ರದ ನಕಲು ಪ್ರತಿಯನ್ನು, ಅರ್ಜಿಯೊಂದಿಗೆ ಲಗತ್ತಿಸಬೇಕಾಗುತ್ತದೆ. ಕಂಪನಿಯು ಅರ್ಜಿ ಸಲ್ಲಿಸುತ್ತಿರುವ ಸಂದರ್ಭಗಳಲ್ಲಿ, ಸಂಘ ನಿಯಮಾವಳಿಗಳು, ಅರ್ಜಿ ಸಲ್ಲಿಸುತ್ತಿರುವ ವ್ಯಕ್ತಿಗೆ ನೀಡಿರುವ ಅಧಿಕಾರಕ್ಕೆ ಸಂಬಂಧ ಪಟ್ಟ ದಾಖಲೆ ವಿವರಗಳನ್ನು ಅರ್ಜಿಯೂಂದಿಗೆ ಲಗತ್ತಿಸಬೇಕಾಗುತ್ತದೆ.ಅನೆಕ್ಸ್ ದಾಖಲೆಗಳನ್ನು ಲಗತ್ತಿಸಲು ವಿಫಲರಾದ ಸಂದರ್ಭಗಳಲ್ಲಿ ಅರ್ಜಿ ನಿರಾಕರಣೆ ಅನಿವಾರ್ಯವಾಗುತ್ತದೆ.

6.ಯಾವುದೇ ಪ್ರದೇಶದಲ್ಲಿ ಕರಾರಸಾನಿದ ಸ್ವಂತ/ವ್ಯವಹಾರ ವಿತರಕರು ಇದ್ದಾಗ್ಯೂ, ವ್ಯವಹಾರ ವಿತರಕರ ನೇಮಕಾತಿ ಸಂಪೂರ್ಣವಾಗಿ ಕರಾರಸಾನಿದ ವಿವೇಚನೆಯಡಿಯಲ್ಲಿ ಇರುತ್ತದೆ.

7.ಕರಾರಸಾನಿವು ಯಾವುದೇ ಸ್ಥಳ ಅಥವಾ ಪ್ರದೇಶದಲ್ಲಿ ತನಗೆ ಬೇಕಾದಷ್ಟು ವ್ಯವಹಾರ ವಿತರಕರನ್ನು ನೇಮಿಸುವ ವಿವೇಚನಾಧಿಕಾರವನ್ನು ಹೊಂದಿರುತ್ತದೆ. ಈ ಕುರಿತಂತೆ ಪ್ರಶ್ನಿಸುವ ಅಧಿಕಾರ ವ್ಯವಹಾರ ವಿತರಕರಿಗೆ ಇರುವುದಿಲ್ಲ.

8.ಕರಾರಸಾನಿವು ಅರ್ಜಿಯನ್ನು ಯಾವುದೇ ಕಾರಣ ನೀಡದೆ ನಿರಾಕರಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ. ಇಂತಹ ಸಂದರ್ಭಗಳಲ್ಲಿ ಪರಿಷ್ಕರಣ ಶುಲ್ಕವನ್ನು ಮರುಪಾವತಿಸಲಾಗುತ್ತದೆ.

9.ತಾತ್ಕಾಲಿಕ ವ್ಯವಹಾರ ವಿತರಕರಾಗಿ ಆರಂಭಿಕ ನೇಮಕಾತಿ/ಒಪ್ಪಂದ/ಕಂಟ್ರಾಕ್ಟ್ ಅವಧಿ 6 ತಿಂಗಳುಗಳಾಗಿರುತ್ತದೆ. ಆ ನಂತರ, 2 ವರ್ಷಗಳ ನಂತರ ಖಾಯಂ ವ್ಯವಹಾರ ವಿತರಕರಾಗಿ ನೇಮಿಸಲಾಗುತ್ತದೆ.

10.ಭದ್ರತಾ ಠೇವಣಿ ಮೊತ್ತವನ್ನು ಒಪ್ಪಂದವನ್ನು ಕಾರ್ಯಗತ ಮಾಡುವ ಮೊದಲೇ ಪಾವತಿಸಬೇಕಾಗುತ್ತದೆ. ಈ ಭದ್ರತಾ ಠೇವಣಿಗೆ ಯಾವುದೇ ತೆರನಾದ ಬಡ್ಡಿ ಇರುವುದಿಲ್ಲ. ಒಪ್ಪಂದದ ಅವಧಿ ಮುಗಿದ ನಂತರ, ಈ ಭದ್ರತಾ ಠೇವಣಿಯನ್ನು ಯಾವುದೇ ಬಡ್ಡಿ ಮೊತ್ತವಿಲ್ಲದೇ ಮರಳಿಸಲಾಗುತ್ತದೆ. ಕರಾರಸಾನಿಕ್ಕೆ ಯಾವುದೇ ಮೊತ್ತ ಪಾವತಿಯಾಗಬೇಕಿದ್ದಲ್ಲಿ, ಭದ್ರತಾ ಠೇವಣಿ ಮೊತ್ತದಿಂದ ಅದನ್ನು ಮುರಿದುಕೊಳ್ಳಲಾಗುತ್ತದೆ.

11.ಒಪ್ಪಂದದ ದಸ್ತಾವೇಜಿನ ಮೇಲೆ ವ್ಯವಹಾರ ವಿತರಕರ ( /ಸಂಸ್ಥೆಯ ಅಧಿಕೃತ ರುಜುಗಾರರ) ಪಾಸ್‍ಪೋರ್ಟ್ ಸೈಜಿನ ಭಾವಚಿತ್ರವನ್ನು ಅವರ ಗುರುತಿಗಾಗಿ ಲಗತ್ತಿಸಬೇಕಾಗುತ್ತದೆ.

12.ವ್ಯವಹಾರ ವಿತರಣಾ ಹಕ್ಕುಗಳ ವರ್ಗಾವಣೆ/ಮಾರಾಟ/ಗುತ್ತಿಗೆಗೆ ಯಾವುದೇ ಅವಕಾಶಗಳು ಇರುವುದಿಲ್ಲ. ವ್ಯವಹಾರ ಸ್ಥಳದ ಬದಲಾವಣೆಗೂ ಯಾವುದೇ ಅವಕಾಶ ಇರುವುದಿಲ್ಲ.

13.ಆಯ್ಕೆಯಾದ ವ್ಯವಹಾರ ವಿತರಕ ಒಪ್ಪಂದವನ್ನು ಕಾರ್ಯಗತಗೊಳಿಸಲು ಬೇಕಾದ ಮೊತ್ತವನ್ನು ತಾನೇ ಪಾವತಿಸಬೇಕಾಗುತ್ತದೆ.

14.ಆಯ್ಕೆಯಾದ ವ್ಯವಹಾರ ವಿತರಕ ತನ್ನ ಮುಂಗಟ್ಟೆಗಳನ್ನು ಕರಾರಸಾನಿ, ಬೆಂಮಸಾಸಂ, ಈಕರಾರಸಾಸಂ, ಅಥವಾ ವಾಕರಾರಸಾಸಂ ಆವರಣಗಳಲ್ಲಿ ಹೊಂದುವಂತಿಲ್ಲ. (ಬಸ್ ನಿಲ್ದಾಣ, ಘಟಕ, ಪ್ರಾದೇಶಿಕ ಕಛೇರಿ, ಕಾರ್ಯಾಗಾರಗಳನ್ನೊಳಗೊಂಡಂತೆ)

15.ವ್ಯವಹಾರ ವಿತರಕರಿಗೆ AWATAR ವ್ಯವಸ್ಥೆಯ ಮೂಲಕ ಕೇವಲ ಕೌಂಟರ್ ಕಾದಿರಿಸುವಿಕೆಗೆ ಅವಕಾಶವಿರುತ್ತದೆ.

16.ವ್ಯವಹಾರ ವಿತರಕರು ತಮ್ಮ ಮುಂಗಟ್ಟೆಯ ಸೌಕರ್ಯಗಳು, ಆಡಳಿತ ಮತ್ತು ನಿರ್ವಹಣಾ ಮೊತ್ತವನ್ನು ತಾವೇ ನಿಭಾಯಿಸಬೇಕಾಗುತ್ತದೆ.

 

ಅರ್ಹತಾ ಮಾನದಂಡಗಳು

1. ಅರ್ಜಿದಾರರು ಭಾರತೀಯ ಪ್ರಜೆಗಳಾಗಿರಬೇಕು.

2. ವಯಸ್ಸು: ಅರ್ಜಿದಾರರು, ವ್ಯವಹಾರ ವಿತರಣಾ ಅರ್ಜಿ ಸಲ್ಲಿಸಿದ ದಿನಾಂಕದಂದು, 18 ವರ್ಷ ಅಥವಾ ಮೇಲ್ಪಟ್ಟಿರುವವರಾಗಿರಬೇಕು. ಮೆಟ್ರಿಕ್ಯುಲೇಷನ್, ಅಥವಾ ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರವನ್ನು ಜನನ ದಿನಾಂಕದ ಸಾಕ್ಷಿಗಾಗಿ, ಹಾಗೂ ಮತದಾರರ ಗುರುತು ಚೀಟಿ, ಪಾಸ್‍ಪೋರ್ಟ್, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಅಥವಾ ಚಾಲನಾ ಪರವಾನಿಗೆ ಪತ್ರ (ಕಾಯಂಗೊಳಿಸಿದ) ಇವುಗಳಲ್ಲಿ ಯಾವುದಾದರೂ ಒಂದನ್ನು ವಯಸ್ಸಿನ ದಾಖಲೆಯಾಗಿ ಒದಗಿಸಬೇಕಾಗುತ್ತದೆ.

3. ವಾಸದ ಸ್ಥಿತಿ: ಕರ್ನಾಟಕದಲ್ಲಿ ವಾಸವಾಗಿರುವ ಅರ್ಜಿದಾರರು ಎಲ್ಲ ಸ್ಥಳಗಳಿಗೂ ಅರ್ಜಿ ಸಲ್ಲಿಸಬಹುದಾಗಿದೆ. ಬೇರೆ ರಾಜ್ಯಗಳಲ್ಲಿರುವ ಭಾರತೀಯ ಅರ್ಜಿದಾರರು ಕೇವಲ ಕರ್ನಾಟಕ ರಾಜ್ಯದ ಹೊರಗಿರುವ ಸ್ಥಳಗಳಿಗೆ ಮಾತ್ರ ವ್ಯವಹಾರ ವಿತರಣೆಗಾಗಿ ಅರ್ಜಿ ಸಲ್ಲಿಸಬಹುದು. ವಿಳಾಸದ ಸಾಕ್ಷಿಯಾಗಿ ಅರ್ಜಿದಾರರು ಮತದಾರರ ಗುರುತು ಚೀಟಿ, ಪಾಸ್‍ಪೋರ್ಟ್, ದೂರವಾಣಿ ಬಿಲ್, ಬ್ಯಾಂಕ್ ಪಾಸ್‍ಬುಕ್, ವಿಮಾ ಪತ್ರ, ಆಧಾರ್ ಕಾರ್ಡ್ ಅಥವಾ ಚಾಲನಾ ಪರವಾನಿಗೆ ಪತ್ರ (ಕಾಯಂಗೊಳಿಸಿದ)  ಗಳಲ್ಲಿ ಯಾವುದಾದರೂ ಒಂದನ್ನು ಒದಗಿಸಬೇಕಾಗುತ್ತದೆ.

4. ಅರ್ಜಿದಾರರು ಭಾವಚಿತ್ರ ಸಹಿತ ಗುರುತಿನ ಚೀಟಿಯನ್ನು ತಮ್ಮ ಗುರುತಿನ ಸಾಕ್ಷಿಗಾಗಿ ಒದಗಿಸಬೇಕಾಗುತ್ತದೆ. ಮತದಾರರ ಗುರುತು ಚೀಟಿ, ಪಾಸ್‍ಪೋರ್ಟ್, ಆಧಾರ್ ಕಾರ್ಡ್, ಚಾಲನಾ ಪರವಾನಿಗೆ ಪತ್ರ (ಕಾಯಂಗೊಳಿಸಿದ) ಅಥವಾ ಆದಾಯ ತೆರಿಗೆ ಪ್ಯಾನ್ ಕಾರ್ಡ್‍ಗಳಲ್ಲಿ ಯಾವುದಾದರೂ ಒಂದನ್ನು ಗುರುತಿನ ಸಾಕ್ಷಿಗಾಗಿ ಒದಗಿಸಾಹುದಾಗಿದೆ.

5. ವಿವಾಹಿತ ಮಹಿಳಾ ಅರ್ಜಿದಾರರು ತಮ್ಮ ವಿವಾಹ ಪೂರ್ವ ಮತ್ತು ವಿವಾಹ ನಂತರದ ಹೆಸರಿನ ಬದಲಾವಣೆಯ ಸಾಕ್ಷಿಯಾಗಿ ಮದುವೆಯ ಪ್ರಮಾಣ ಪತ್ರವನ್ನು ಅಥವಾ ಅಫೆಡವೇಟ್ ಅನ್ನು ಒದಗಿಸಬೇಕಾಗುತ್ತದೆ.

 

ಅನರ್ಹತೆಗಳು:

1. ನೀತಿ ಉಲ್ಲಂಘನೆ/ಆರ್ಥಿಕ ಅಪರಾಧಗಳನ್ನೊಳಗೊಂಡಂತೆ, ಯಾವುದೇ ರೀತಿಯ ಕಾನೂನು ಬಾಹಿರ ಅಪರಾಧಗಳಲ್ಲಿ (ಸ್ವಾತಂತ್ರ್ಯ ಸಂಗ್ರಾಮದ ಹೊರತಾಗಿ ), ಅಪರಾಧಿಯೆಂದು ನಿರ್ಣಿಯಸಲಾದ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ.

2. ಸಂಪೂರ್ಣವಾಗಿ ಅಂಗವಿಕಲರಾದ ಅಥವಾ ಮಾನಸಿಕವಾಗಿ ಅಸ್ವಸ್ಥರಾಗಿರುವ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ.

3. ಸಂಪೂರ್ಣವಾಗಿ ಅಂಧ, ಕಿವುಡ ಹಾಗೂ ಮೂಕರಾಗಿರುವ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ.

4. ಕರ್ತವ್ಯ ಲೋಪ ಅಥವಾ ಉಲ್ಲಂಘನೆ ಆಧಾರದ ಮೇಲೆ ಕರಾರಸಾನಿ ಅಥವಾ ಇತರೆ ಸಂಬಂಧಿತ ರಾಜ್ಯ ಸಾರಿಗೆ ಉದ್ಯಮಗಳಿಂದ ವ್ಯವಹಾರ ವಿತರಣೆ ಒಪ್ಪಂದವನ್ನು ಅಂತ್ಯಗೊಳಿಸಲಾದ ಪುರಾತನ ವ್ಯವಹಾರ ವಿತರಕರು ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ.

5. ಸರ್ಕಾರಿ ನೌಕರರು ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ. ಈ ವ್ಯಕ್ತಿಗಳು ವ್ಯವಹಾರ ವಿತರಣೆಗಾಗಿ ತಮ್ಮ ಪ್ರಸ್ತುತ ಹುದ್ದೆಗೆ ರಾಜೀನಾಮೆ ನೀಡಲು ತಯಾರಾಗಿದ್ದ ಪಕ್ಷದಲ್ಲಿ ಅವರು ವ್ಯವಹಾರ ವಿತರಣೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

6. ಕರಾರಸಾನಿ ಹಾಗೂ ಇತರೆ ಸಂಬಂಧಿತ ರಾಜ್ಯ ಸಾರಿಗೆ ಉದ್ಯಮಗಳನ್ನೊಳಗೊಂಡಂತೆ, ರಾಜ್ಯ ಅಥವಾ ಕೇಂದ್ರ ಸರ್ಕಾರದ ಹುದ್ದೆಗಳಿಂದ ವಜಾ ಮಾಡಲಾಗಿರುವ / ತೆಗೆದು ಹಾಕಲಾಗಿರುವ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ.

 

ನೇಮಕಾತಿ ಪದ್ಧತಿ:

1. ಅರ್ಜಿ ಪತ್ರಗಳು ಉಚಿತವಾಗಿ ಲಭ್ಯವಿರುತ್ತವೆ. ಅರ್ಜಿ ಪತ್ರದ ಕರಡು ಪ್ರತಿ/ ಸ್ಕ್ಯಾನ್ ಪ್ರತಿ/ ಈ-ಮೇಲ್ ಪ್ರತಿಗಳನ್ನೂ ಸಹ ಅರ್ಜಿ ಸಲ್ಲಿಸಲು ಉಪಯೋಗಿಸಬಹುದಾಗಿದೆ.

2. ತಾತ್ಕಾಲಿಕ ನೇಮಕಾತಿಗಾಗಿ ಅರ್ಜಿ ಸಲ್ಲಿಸುತ್ತದ್ದಲ್ಲಿ, ಅಭ್ಯರ್ಥಿಗಳು ಸಂಬಂಧಿತ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ರೂ 1000/- (ಒಂದುಸಾವಿರ ರೂಪಾಯಿಗಳು ಮಾತ್ರ) ಗಳನ್ನು ಸಂಸ್ಕರಣಾ ಶುಲ್ಕವಾಗಿ ಭರಿಸಬೇಕಾಗಿತ್ತದೆ. ಈ ಮೊತ್ತವು ಮರುಪಾವತಿಯಾಗುವುದಿಲ್ಲ.

3. ಯಾವುದೇ ಸ್ಥಳದ ವ್ಯವಹಾರ ವಿತರಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮೊದಲು ಬಂದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ; ಮತ್ತು ವ್ಯವಹಾರ ವಿತರಕರ ನೇಮಕಾತಿ, ಆ ಸ್ಥಳದ ಅವಶ್ಯಕತೆ ಹಾಗೂ ಅಭ್ಯರ್ಥಿಗಳ ಅರ್ಹತೆಯ ಮೇಲೆ ಅವಲಂಬಿತವಾಗಿರುತ್ತದೆ.

4. ಮೊದಲಿನ 6 ತಿಂಗಳಿಗೆ ನೇಮಕಾತಿಯು ತಾತ್ಕಾಲಿಕವಾಗಿರುತ್ತದೆ.

5. ಆಯ್ಕೆಯಾದ ವ್ಯವಹಾರ ವಿತರಕರು ಟಿಕೆಟ್ ಕಾದಿರಿಸುವಿಕೆ ವಹಿವಾಟುಗಳನ್ನು AWATAR ವ್ಯವಸ್ಥೆಯ ಮೂಲಕವೇ ಮಾಡಬೇಕಾಗುತ್ತದೆ.

6. ಆಯ್ಕೆಯಾದ ವ್ಯವಹಾರ ವಿತರಕರು ನಿಗದಿಪಡಿಸಿದ ಸುರಕ್ಷತಾ ಮೊತ್ತವನ್ನು ಭರಿಸಬೇಕಾಗುತ್ತದೆ. ಮತ್ತು ಆಯ್ಕೆಯಾದ ವ್ಯವಹಾರ ವಿತರಕರು, ವಿವಿಧ ವಹಿವಾಟುಗಳಿಗೆ ನಿಗದಿಪಡಿಸಿದ ದಲ್ಲಾಳಿ ಮೊತ್ತಕ್ಕೆ ಅರ್ಹರಾಗಿರುತ್ತಾರೆ.

7. ಅಭ್ಯರ್ಥಿಗಳು ಗುರುತಿನ ಸಾಕ್ಷಿ, ವಿಳಾಸದ ಸಾಕ್ಷಿ, ಹಾಗೂ, ವಯಸ್ಸಿನ ಸಾಕ್ಷಿಗಾಗಿ ಸಂಬಂಧಿತ ದಾಖಲೆಗಳ ಕರಡು ಪ್ರತಿಗಳನ್ನು , ಅರ್ಜಿ ಪತ್ರದೊಂದಿಗೆ ಲಗತ್ತಿಸಬೇಕಾಗುತ್ತದೆ.

8. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಗುರುತಿನ ಸಾಕ್ಷಿ, ವಿಳಾಸದ ಸಾಕ್ಷಿ, ಹಾಗೂ, ವಯಸ್ಸಿನ ಸಾಕ್ಷಿಗಾಗಿ ಸಂಬಂಧಿತ ದಾಖಲೆಗಳ ಮೂಲ ಪ್ರತಿಗಳನ್ನು ಸಂಬಂಧಿತ ವಿಭಾಗೀಯ ಸಂಚಾರ ಅಧಿಕಾರಿಗಳ ಎದುರು ಹಾಜರುಪಡಿಸಬೇಕಾಗುತ್ತದೆ.

9. ಅರ್ಜಿದಾರರು ಸಾರ್ವಜನಿಕರಿಗೆ ಸುಲಭವಾಗಿ ಟಿಕೆಟ್ ಖರೀದಿಸಲು ಅವಕಾಶ ಕಲ್ಪಿಸುವಂತಹ ಸೂಕ್ತ ಸ್ಥಳದಲ್ಲಿ ಒಳ್ಳೆಯ ಕಚೇರಿಯೊಂದನ್ನು ಹೊಂದಿರಬೇಕಾಗುತ್ತದೆ. ಒಪ್ಪಂದಕ್ಕೆ ಸಹಿ ಹಾಕಿದ ನಂತರ ವ್ಯವಹಾರ ಸ್ಥಳದ ವಿಳಾಸವನ್ನು ಬದಲಿಸುವ ಅವಕಾಶವಿರುವುದಿಲ್ಲ.

10. ಆರಂಭಿಕ ಒಪ್ಪಂದದ 5 ತಿಂಗಳುಗಳು ಸಂಪೂರ್ಣವಾದ ನಂತರ, ಸಂಬಂಧಿತ ವ್ಯವಹಾರ ವಿತರಕರು ಖಾಯಂ ವ್ಯವಹಾರ ವಿತರಕರಾಗಿ ಕಾರ್ಯ ನಿರ್ವಹಿಸಲು ಆಸಕ್ತರಾಗಿದ್ದಲ್ಲಿ, ಈ ಕುರಿತು ಒಂದು ಲಿಖಿತ ಅರ್ಜಿಯನ್ನು ಸಂಬಂಧಿತ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸಲ್ಲಿಸಬೇಕಾಗುತ್ತದೆ.

11. ತಾತ್ಕಾಲಿಕ ವ್ಯವಹಾರ ವಿತರಕರಿಂದ ಖಾಯಂ ವ್ಯವಹಾರ ವಿತರಕರಾಗಿ ಪರಿವರ್ತನೆಗೊಳ್ಳಲು ಯಾವುದೇ ಸಂಸ್ಕರಣಾ ಶುಲ್ಕವಿರುವುದಿಲ್ಲ.

12. ತಾತ್ಕಾಲಿಕ ವ್ಯವಹಾರ ವಿತರಕರ ವ್ಯವಹಾರ ಕೇಂದ್ರವನ್ನು, ಒಪ್ಪಂದದ ಮೊದಲ5 ತಿಂಗಳುಗಳಲ್ಲಿ, ಸಂಬಂಧಿತ ವಿಭಾಗೀಯ ಸಂಚಾರಿ ಅಧಿಕಾರಿಗಳು ಅಥವಾ  ವಿಭಾಗೀಯ ನಿಯಂತ್ರಣಾಧಿಕಾರಿಗಳಿಂದ ನೇಮಿಸಲ್ಪಟ್ಟ ಇತರೆ ಅಧಿಕಾರಿಗಳು ಸಂದರ್ಶಿಸುತ್ತಾರೆ. ಈ ಪ್ರಕ್ರಿಯೆಯನ್ನು ತಾತ್ಕಾಲಿಕ  ವ್ಯವಹಾರ ವಿತರಕರನ್ನು ಖಾಯಂ  ವ್ಯವಹಾರ ವಿತರಕರಾಗಿ ಪರಿವರ್ತಿಸುವ ಸಂದಂರ್ಭದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಸಂದರ್ಶನದ ವೇಳೆಯಲ್ಲಿ ವ್ಯವಹಾರ ಕೇಂದ್ರದ ವಿಸ್ತೀರ್ಣ, ಪ್ರಮುಖ ಬಸ್ ನಿಲ್ದಾಣಗಳಿಂದ ಇರುವ ದೂರ (ಪ್ರಮುಖ ರಸ್ತೆಗಳಿಗೆ ಇರುವ ಸಾಮೀಪ್ಯ), ವ್ಯವಹಾರ ಸಾಮರ್ಥ್ಯ ಇತ್ಯಾದಿ ವಿವರಗಳನ್ನು ನಮೂದಿಸಿಕೊಳ್ಳಲಾಗುತ್ತದೆ. ಈ ಸಂದರ್ಶನ ವರದಿಯ ಕರಡು ಪ್ರತಿಯನ್ನು ಸಂದರ್ಶನದ ಸಮಯದಲ್ಲಿ ಉಪಸ್ಥಿತರಿರುವ ವ್ಯವಹಾರ ವಿತರಕರು ಅಥವಾ ಅವರ ಪ್ರತಿನಿಧಿಗೆ ಒದಗಿಸಲಾಗುತ್ತದೆ.

13. ಸಂಬಂಧಿತ ವಿಭಾಗೀಯ ನಿಯಂತ್ರಣಾಧಿಕಾರಿ, ಕಾಯ್ದಿರಿಸುವಿಕೆ ವಹಿವಾಟು ಹಾಗೂ ತಾತ್ಕಾಲಿಕ ವ್ಯವಹಾರ ವಿತರಕರ ಸ್ಥಳ ಇತ್ಯಾದಿಗಳನ್ನು ಪರಿಶೀಲಿಸಿದ ನಂತರ, ತಾತ್ಕಾಲಿಕ ವ್ಯವಹಾರ ವಿತರಕರನ್ನು ಖಾಯಂ ವ್ಯವಹಾರ ವಿತರಕರಾಗಿ ಪರಿವರ್ತಿಸಲು ತಮ್ಮ ಶಿಫಾರಸನ್ನು ಕಳುಹಿಸುತ್ತಾರೆ. ನೇಮಕಾತಿ ಪ್ರಾಧಿಕಾರ, ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಲ್ಲಿಸಿರುವ ಈ ಶಿಫಾರಸುಗಳ  ಆಧಾರದ ಮೇಲೆ ಖಾಯಂ ವ್ಯವಹಾರ ವಿತರಕರ ನೇಮಕಾತಿಯನ್ನು ನಿರ್ಧರಿಸುತ್ತದೆ.

14. ತಾತ್ಕಾಲಿಕ ವ್ಯವಹಾರ ವಿತರಕರನ್ನು ಖಾಯಂ ವ್ಯವಹಾರ ವಿತರಕರಾಗಿ ಪರಿವರ್ತಿಸುವ ಪ್ರಕ್ರಿಯೆ, ೬ ನೇ ತಿಂಗಳಲ್ಲಿ, ಮೊದಲಿನ ಒಪ್ಪಂದ ಮುಕ್ತಾಯವಾಗುವುದರೊಳಗೆ ಸಂಪೂರ್ಣಗೊಳ್ಳುತ್ತದೆ. ಮೊದಲಿನ ಒಪ್ಪಂದ ಮುಕ್ತಾಯವಾದ ನಂತರ ೨ ವರ್ಷಗಳ ಹೊಸ ಒಪ್ಪಂದವೊಂದನ್ನು ಜಾರಿಗೊಳಿಸಲಾಗುತ್ತದೆ.

15. ಈಗಾಗಲೇ ಖಾಸಗಿ ಸಾರಿಗೆ ಸಂಸ್ಥೆಗಳ ಅಥವಾ ಕರಾರಸಾನಿವನ್ನು ಹೊರತುಪಡಿಸಿ ಇತರೆ ಸಾರಿಗೆ ಸಂಸ್ಥೆಗಳ ವ್ಯವಹಾರ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು, ಕರಾರಸಾನಿ ವ್ಯವಹಾರ ವಿತರಣೆಗೆ ಸಹಿ ಹಾಕುವ ಮೊದಲು, ಲಿಖಿತ ರೂಪದಲ್ಲಿ ತಮ್ಮ ಮೊದಲಿನ ವ್ಯವಹಾರವನ್ನು ಅಂತ್ಯಗೊಳಿಸುವುದಾಗಿ ಹೇಳಿಕೆ ಕೊಡಬೇಕಾಗುತ್ತದೆ.

16. ಕರಾರಸಾನಿವು ಯಾವುದೇ ಸ್ಥಳ ಅಥವಾ ಪ್ರದೇಶದಲ್ಲಿ ತನಗೆ ಬೇಕಾದಷ್ಟು ವ್ಯವಹಾರ ವಿತರಕರನ್ನು ನೇಮಿಸುವ ವಿವೇಚನಾಧಿಕಾರವನ್ನು ಹೊಂದಿರುತ್ತದೆ. ಈ ಕುರಿತಂತೆ ಪ್ರಶ್ನಿಸುವ ಅಧಿಕಾರ ವ್ಯವಹಾರ ವಿತರಕರಿಗೆ ಇರುವುದಿಲ್ಲ.

 

ಭದ್ರತಾ ಠೇವಣಿ ಮತ್ತು ದಲ್ಲಾಳಿ ಮೊತ್ತ ಪಾವತಿ

1 . ನೇಮಕಾತಿ ಮಾಹಿತಿ ದೊರೆತ 15 ದಿನಗಳೊಳಗಾಗಿ ಆಯ್ಕೆಯಾದ ವ್ಯವಹಾರ ವಿತರಕರು ನಿಗದಿ ಪಡಿಸಿದ ಭದ್ರತಾ ಮೊತ್ತವನ್ನು ಪಾವತಿಸಿ ಒಪ್ಪಂದದ ದಸ್ತಾವೇಜನ್ನು ಕಾರ್ಯಗತಗೊಳಿಸಬೇಕಾಗುತ್ತದೆ.ಈ ಭದ್ರತಾ ಮೊತ್ತಕ್ಕೆ ಯಾವುದೇ ತರಹದ ಬಡ್ಡಿ ದೊರೆಯುವುದಿಲ್ಲ.

2. ತಾತ್ಕಾಲಿಕ ವ್ಯವಹಾರ ವಿತರಕರಾಗಿ ಪ್ರಾರಂಭಿಕ ನೇಮಕಾತಿಯ ಅಥವಾ ಒಪ್ಪಂದದ ಕಾಲಾವಧಿ 6 ತಿಂಗಳುಗಳಾಗಿರುತ್ತದೆ. ನಂತರ ಖಾಯಂ ವ್ಯವಹಾರ ವಿತರಕರಾಗಿ ನೇಮಕಾತಿಯಾದ ನಂತರ ಈ ಒಪ್ಪಂದದ ಕಾಲಾವಧಿ 2 ವರ್ಷಗಳದ್ದಾಗಿರುತ್ತದೆ.

3. ಭದ್ರತಾ ಠೇವಣಿ ಮೊತ್ತ ರೂ.30,000/- ಗಳು (ರೂ. ಮೂವತ್ತು ಸಾವಿರಗಳು ಮಾತ್ರ).

4. ಖಾಯಂ ನೇಮಕಾತಿಯ ಅಥವಾ ಒಪ್ಪಂದದ ಕಾಲಾವಧಿ 2 ವರ್ಷಗಳದ್ದಾಗಿರುತ್ತದೆ. ವ್ಯವಹಾರ ವಿತರಕರ ತೃಪ್ತಿಕರ ಕಾರ್ಯ ನಿರ್ವಹಣೆಯ ಆಧಾರದ ಮೇಲೆ ಈ ಕಾಲಾವಧಿಯನ್ನು 2 ವರ್ಷಗಳಿಗೊಂದಾವರ್ತಿಯಂತೆ ನವೀಕರಿಸಬಹುದಾಗಿದೆ. ಆದರೆ ಪ್ರತಿ ಒಪ್ಪಂದ ನವೀಕರಣದ ಸಮಯದಲ್ಲಿ, ವ್ಯವಹಾರ ವಿತರಕರು 10% ಹೆಚ್ಚಿನ ಭದ್ರತಾ ಠೇವಣಿಯನ್ನು ಪಾವತಿಸಬೇಕಾಗುತ್ತದೆ.

5. ವ್ಯವಹಾರ ವಿತರಕರಿಗೆ ಅವರು ಕಾದಿರಿಸಿದ ಟಿಕೆಟ್‍ಗಳ ಒಟ್ಟು ಮೊತ್ತದ ಆಧಾರದ ಮೇಲೆ ಕಮೀಷನ್ ಮೊತ್ತವನ್ನು ಪಾವತಿಸಲಾಗುತ್ತದೆ. ಕಾದಿರಿಸುವಿಕೆ ಶುಲ್ಕ ಅಥವಾ ಇತರೆ ಯಾವುದೇ ತೆರಿಗೆಗಳ ಮೇಲೆ ಯಾವುದೇ ಕಮೀಷನ್ ಮೊತ್ತವನ್ನು ಪಾವತಿಸಲಾಗುವುದಿಲ್ಲ. ಈ ಕಮೀಷನ್ ಮೊತ್ತವನ್ನು ಪ್ರತಿ ತಿಂಗಳು ಪಾವತಿಸಲಾಗುವುದು (ಮುಂದಿನ ತಿಂಗಳಿನ 10ನೇ ತಾರೀಖಿನ ಒಳಗೆ) ಅಥವಾ AWATAR ವ್ಯವಸ್ಥೆಯ ಮೂಲಕ ಪ್ರತಿದಿನ ಅಂತರ್ಜಾಲ ವರ್ಗಾವಣೆ ಮಾಡಲಾಗುವುದು.

6. ಕಾದಿರಿಸಿದ ಟಿಕೆಟ್ ರದ್ಧತಿಯ ಮೇಲೆ ಪಡೆದ ರದ್ಧತಿ ಶುಲ್ಕವು ಸಹ ಕರಾರಸಾನಿಕ್ಕೆ ಪಾವತಿಯಾಗುತ್ತದೆ.  ಹಾಗೂ ಈ ಮೊತ್ತವನ್ನೂ ಸಹ ಕಮೀಷನ್ ಪಾವತಿಗೆ ಪರಿಗಣಿಸಲಾಗುತ್ತದೆ.

7. ಕರಾರಸಾನಿದಿಂದ ಸೇವೆಗಳು ರದ್ಧತಿಗೊಂಡ ಸಂದರ್ಭದಲ್ಲಿ ಪ್ರಯಾಣಿಕರಿಗೆ ಟಿಕೆಟ್‍ನ ಸಂಪೂರ್ಣ ಮೊತ್ತ ಪರು ಪಾವತುಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ, ಟಿಕೆಟ್ ಕಾಯ್ದಿರಿಸುವಿಕೆ ಮತ್ತು ರದ್ಧತಿಗಳ ಮೇಲೆ ವ್ಯವಹಾರ ವಿತರಕರಿಗೆ ಯಾವುದೇ ಕಮೀಷನ್ ನೀಡಲಾಗುವುದಿಲ್ಲ.

8. ವಿವಿಧ ವಹಿವಾಟುಗಳಿಗೆ ನೀಡಲಾಗುವ ಕಮೀಷನ್‍ನ ವಿವರಗಳನ್ನು ಅನೆಕ್ಷರ್ ಡಿ ನಲ್ಲಿ ಒದಗಿಸಲಾಗಿದೆ.

9. ಕರಾರಸಾನಿದ ತನ್ನದೇ ಆದ ಅನನ್ಯತೆಯನ್ನು ಮೂಡಿಸಲು, ಸೇವೆಗಳು, ಸೌಲಭ್ಯಗಳು ಮತ್ತು ಹೊರನೋಟದಲ್ಲಿ ಸಾಮ್ಯ ಒದಗಿಸಲು,  ವ್ಯವಹಾರ ವಿತರಕರ ವ್ಯವಹಾರ ಕೇಂದ್ರಗಳನ್ನು "ಟ್ರಾವೆಲ್ ಹೌಸ್" ಎಂದು ಗುರುತಿಸಲಾಗುತ್ತದೆ. ಈ ಹೆಜ್ಜೆಯು ಕರಾರಸಾನಿದ ಸೇವೆಗಳ ಛಾಪನ್ನು ಮೂಡಿಸುವಲ್ಲಿ ಮತ್ತು ಖಾಸಗಿ ನಿರ್ವಾಹರಿಗೆ ಸಮನಾದ ಪೈಪೋಟಿಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

10. ಟ್ರಾವೆಲ್ ಹೌಸ್ ಎಂದು ನಿಗದಿಗೊಳಿಸಿದ ವ್ಯವಹಾರ ವಿತರಕರಿಗೆ ಸಮಾನ ಗುಣಮಟ್ಟದ ಸೌಲಭ್ಯಗಳ ನಿರ್ವಹಣೆ ಹಾಗೂ ಮರುಕಳಿಸುವ ವೆಚ್ಚಗಳನ್ನು ನಿಭಾಯಿಸಲು ಸಹಾಯವಾಗುವಂತೆ ಕರಾರಸಾನಿವು ಹೆಚ್ಚಿನ ಕಮೀಷನ್ ಒದಗಿಸುತ್ತದೆ. ಈ ಕುರಿತಾದ ವಿವರಗಳು ಅನೆಕ್ಷರ್ - ಡಿ ನಲ್ಲಿ ಲಭ್ಯವಿವೆ.

11. ಆರಂಭಿಕ ಒಪ್ಪಂದದ ಒಂದು ವರ್ಷದ ನಂತರ ವ್ಯವಹಾರ ವಿತರಕರು ತಮ್ಮ ವ್ಯವಹಾರ ವಿತರಣೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದಲ್ಲಿ ಭದ್ರತಾ ಠೇವಣಿಯ ಸಂಪೂರ್ಣ ಮೊತ್ತ ಮರುಪಾವತಿಯಾಗುತ್ತದೆ.

 

ದಂಡನೆ ಷರತ್ತುಗಳು ಹಾಗೂ ಮುಟ್ಟುಗೋಲು ನಿಬಂಧನೆಗಳು

1.  ವಿವಿಧ ಷರತ್ತುಗಳು ಮತ್ತು ದಂಡಗಳ ವಿವರಗಳನ್ನು ಅನೆಕ್ಷರ್ ಡಿ ನಲ್ಲಿ ಕೊಡಲಾಗಿದೆ.

2. ದಂಡ ವಿಧಿಸುವ ಮೊದಲು ಅಥವಾ ವ್ಯವಹಾರ ವಿತರಣೆಯನ್ನು ರದ್ದುಗೊಳಿಸುವ ಮೊದಲು ಕರಾರಸಾನಿವು ಸಂಬಂಧಿತ ವ್ಯವಹಾರ ವಿತರಕರಿಗೆ ಉಲ್ಲಂಘನೆಗೊಳಿಸಿದ ಷರತ್ತುಗಳ ವಿವರಗಳೊಂದಿಗೆ ನೋಟೀಸನ್ನು ಕಳುಹಿಸುತ್ತದೆ. ನೋಟೀಸ್ ದೊರೆತ ಏಳು ದಿನಗಳಲ್ಲಿ ಸಂಬಂಧಿತ ವ್ಯವಹಾರ ವಿತರಕರು ತಮ್ಮ ಉತ್ತರವನ್ನು ಲಿಖಿತ ರೂಪದಲ್ಲಿ ಒದಗಿಸಬೇಕಾಗುತ್ತದೆ. ವ್ಯವಹಾರ ವಿತರಕರಿಂದ ಉತ್ತರ ದೊರೆತ ಸಂದರ್ಭದಲ್ಲಿ, ಅವರ ಉತ್ತರದ ಆಧಾರದ ಮೇಲೆ ಕರಾರಸಾನಿವು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

3. ಅನೆಕ್ಷರ್ ಡಿ ನಲ್ಲಿ ಒದಗಿಸಿರುವ ಷರತ್ತು ಉಲ್ಲಂಘನೆ ಮತ್ತು ದಂಡದ ವಿವರಗಳು ಸ್ಥೂಲ ಮಟ್ಟದಲ್ಲಿರುತ್ತವೆ. ವ್ಯವಹಾರ ವಿತರಣಾ ಹಕ್ಕುಗಳ ವರ್ಗಾವಣೆ/ಮಾರಾಟ, ಉಪ ವ್ಯವಹಾರ ವಿತರಕರ ನೇಮಕಾತಿ, ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚಾಗಿ ವಿಧಿಸುವ ಟಿಕೆಟ್ ರದ್ಧತಿ ಶುಲ್ಕ,ಕರಾರಸಾನಿದ ಕೀರ್ತಿಗೆ ಹಾನಿ ತರುವಂತಹ ವರ್ತನೆ, ಪ್ರಯಾಣಿಕರ ಅನಾನುಕೂಲ, ದುರುದ್ದೇಶಪೂರ್ವಕವಾಗಿ ಎಸಗುವ ಅಪರಾಧಗಳು/ಕೃತ್ಯಗಳು, ಖಾಸಗಿ ನಿರ್ವಾಹಕರಿಗಾಗಿ ಬಸ್ ಕಾದಿರಿಸುವಿಕೆ, ಖಾಸಗಿ ನಿರ್ವಾಹಕರೊಂದಿಗೆ ಅಥವಾ ಇತರೆ ಎಸ್‍ಟಿ‍ಯುಗಳ ಜೊತೆಗೂಡಿ ಒಳಸಂಚು ಮಾಡುವುದು ಮತ್ತು ಇತರೆ ಅನಿರೀಕ್ಷಿತ ಷರತ್ತು ಉಲ್ಲಂಘನೆ, ಇಂತಹ ಯಾವುದೇ ಸಂದರ್ಭಗಳಲ್ಲಿ, ಕರಾರಸಾನಿವು ಸಂಬಂಧಿತ ವ್ಯವಹಾರ ವಿತರಕರ ವಿರುದ್ಧ ತಕ್ಕ ಕ್ರಮ ತೆಗೆದುಕೊಳ್ಳುವ ಹಕ್ಕನ್ನು ಕಾದಿರಿಸಿಕೊಳ್ಳುತ್ತದೆ.

4. ಕರಾರಸಾನಿವು  ಹೆಚ್ಚಿನ ದಂಡನೆ, ಮತ್ತು/ಅಥವಾ ಸಂಪೂರ್ಣ ಭದ್ರತಾ ಠೇವಣಿಯನ್ನು ಮುಟ್ಟುಗೋಲುಗೊಳಿಸಿ  ವ್ಯವಹಾರ ವಿತರಣಾ ಒಪ್ಪಂದವನ್ನು ಮುಕ್ತಾಯಗೊಳಿಸುವಂತಹ ಅತಿ  ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುವ ಹಕ್ಕನ್ನು ಸಹ ಕಾದಿರಿಸುತ್ತದೆ. ಅವಶ್ಯಕತೆ ಇದ್ದಲ್ಲಿ ಸಂಬಂಧಿತ ವ್ಯವಹಾರ ವಿತರಕರಿಂದ ಆದ ನಷ್ಟ ಅಥವಾ ನಿಯಮ ಉಲ್ಲಂಘನೆಯಿಂದ ಉಂಟಾದ ಇನ್ನಿತರೆ ಪ್ರತಿಕೂಲ ಪರಿಣಾಮಗಳ ವಿರುದ್ಧ ಕಾನೂನು ರೀತಿಯಿಂದ ಕ್ರಮ ಕೈಗೊಳ್ಳುವ ಹಕ್ಕನ್ನೂ ಕೂಡ ಕಾದಿರಿಸುತ್ತದೆ.

5. ಕರ್ತವ್ಯಲೋಪದ ಕಾರಣಕ್ಕಾಗಿ ವ್ಯವಹಾರ ವಿತರಣಾ ಒಪ್ಪಂದವನ್ನು ಅಂತ್ಯಗೊಳಿಸಿದಲ್ಲಿ, ಕರಾರಸಾನಿವು ಸಂಪೂರ್ಣ ಭದ್ರತಾ ಠೇವಣಿಯನ್ನು ಮುಟ್ಟುಗೋಲುಗೊಳಿಸಿಕೊಳ್ಳಬಹುದಾಗಿದೆ.

6. ವ್ಯವಹಾರ ವಿತರಕರ ಪ್ರತಿನಿಧಿಗಳು/ನೌಕರರು ಎಸಗಿದ ನಿಯಮ ಉಲ್ಲಂಘನೆಗಳಿಗೆ ವ್ಯವಹಾರ ವಿತರಕರೇ ಜವಾಬ್ದಾರರಾಗಿರುತ್ತಾರೆ. ವ್ಯವಹಾರ ವಿತರಕರ ನೌಕರರು ಪ್ರಯಾಣಿಕರೊಂದಿಗೆ, ಕರಾರಸಾನಿ ಅಧಿಕಾರಿಗಳೊಂದಿಗೆ/ನೌಕರರೊಂದಿಗೆ, ಶಾಸನಬದ್ದ ಅಧಿಕಾರಿಗಳೊಂದಿಗೆ ಕೆಟ್ಟ ನಡತೆಯನ್ನು ಪ್ರದರ್ಶಿಸಿದ ಕುರಿತು ದೂರುಗಳು ಬಂದಲ್ಲಿ ವ್ಯವಹಾರ ವಿತರಕರು ಅಂತಹ ನೌಕರರ ವಿರುದ್ಧ ತಕ್ಕ ಕ್ರಮಗಳನ್ನು ಕೈಗೊಳ್ಳಬೇಕು.

7. ಆರಂಭಿಕ ಒಪ್ಪಂದದ ಒಂದು ವರ್ಷದ ಮುಂಚಿತವಾಗಿ ವ್ಯವಹಾರ ವಿತರಕರು ತಮ್ಮ ಖಾಯಂ ವ್ಯವಹಾರ ವಿತರಣಾ ಏಜೆನ್ಸಿಯನ್ನು ಹಿಂತೆಗೆದುಕೊಳ್ಳಲು ಬಯಸಿದರೆ, ಸಂಪೂರ್ಣ ಭದ್ರತಾ ಠೇವಣಿವನ್ನು ಮುಟ್ಟುಗೋಲುಗೊಳಿಸಿಕೊಳ್ಳಲಾಗುತ್ತದೆ (100%).

8. ಕರಾರಸಾನಿವು ತನಗೆ ಸರಿ ಎನಿಸಿದ ಕಾರಣಗಳಿಗಾಗಿ ವ್ಯವಹಾರ ವಿತರಣಾ ಒಪ್ಪಂದವನ್ನು ಮೊಟಕುಗೊಳಿಸುವ ಹಕ್ಕನ್ನು ಕಾದಿರಿಸಿಕೊಳ್ಳುತ್ತದೆ.

 

KSRTC © 2011. All Rights Reserved.KSRTC eMailCRM Login

Designed and Developed by Fugo Creative Pvt Ltd

Powered by :
Radiant info