KSRTC

ವಿಶ್ವ ಬ್ಯಾಂಕ್ ಪ್ರಾಯೋಜಿತ ಯೋಜನೆ

ಬಸ್ ಕಾಯ್ದಿರಿಸಿ

ಕ.ರಾ.ರ.ಸಾ.ನಿ.ದ ವ್ಯವಹಾರ ವಿತರಕರಾಗಿ

ಈ- ಕಾಯ್ದಿರಿಸುವಿಕೆ

ಈ- ಟಿಕೆಟ್ ಕಾಯ್ದಿರಿಸುವ ವಿಧಾನ

 

ಅಂತರ್ಜಾಲ ಕಾಯ್ದಿರಿಸುವಿಕೆ ವ್ಯವಸ್ಥೆಯ ಮೂಲಕ ಪ್ರಯಾಣಿಕರು ಕ.ರಾ.ರ.ಸಾ.ನಿ. ಮುಂಗಟ್ಟೆ ಮತ್ತು ವ್ಯವಹಾರ ವಿತರಣಾ ಮುಂಗಟ್ಟೆಗಳಿಲ್ಲದ ದೂರದ ಸ್ಥಳಗಳಿಂದ ಕೂಡಾ ಟಿಕೆಟ್ ಕಾದಿರಿಸಬಹುದಾಗಿದೆ ಮತ್ತು ಇತರೆ ಸಂಬಂಧಿತ ವಹಿವಾಟುಗಳನ್ನು ಮಾಡಬಹುದಾಗಿದೆ. ಅಂತರ್ಜಾಲ ಕಾಯ್ದಿರಿಸುವಿಕೆಯ (ಆನ್‍ಲೈನ್ ಬುಕಿಂಗ್) ವಿಧಾನ ಮತ್ತು ಮಾರ್ಗದರ್ಶಿಗಳು ಈ ಕೆಳಗೆ ವಿವರಿಸಲ್ಪಟ್ಟಿವೆ:

 

  • ನೋಂದಾಯಿತ ಗ್ರಾಹಕರು ಅಂತರ್ಜಾಲದ ಮೂಲಕ ಟಿಕೆಟ್ ಕಾದಿರಿಸಬಹುದಾಗಿದೆ. ಅಂತರ್ಜಾಲ ತಾಣದಲ್ಲಿ ತಮ್ಮ ವೈಯಕ್ತಿಕ ವಿವರಗಳೊಂದಿಗೆ ಈ-ಅರ್ಜಿ ಭರ್ತಿ ಮಾಡಿದ ನಂತರ, ಗ್ರಾಹಕರಿಗೆ ಬಳಕೆದಾರರ ಹೆಸರು ಮತ್ತು ಪಾಸ್‍ವರ್ಡ್ ನೀಡಲಾಗುತ್ತದೆ.
  • ದಿನದ 24 ಘಂಟೆಗಳಲ್ಲಿಯೂ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಟಿಕೆಟ್ ಕಾದಿರಿಸುವಿಕೆಗೆ ಕ್ರೆಡಿಟ್ ಕಾರ್ಡ್/ಅಂತರ್ಜಾಲ ಬ್ಯಾಂಕಿಂಗ್ ಮೂಲಕ ಹಣ ಪಾವತಿ ಮಾಡಬೇಕಾಗುತ್ತದೆ.
  • ಟಿಕೆಟ್ ಕಾಯ್ದಿರಿಸಬೇಕಾಗಿರುವ ಪ್ರಯಾಣಿಕರು ಕ.ರಾ.ರ.ಸಾ.ನಿ.ದ ಅಂತರ್ಜಾಲ ತಾಣದಲ್ಲಿ ಲಾಗಿನ್ ಆಗಿ, ಮುಂಗಡ ಕಾಯ್ದಿರಿಸುವಿಕೆಗಾಗಿ ನೀಡಿರುವ ಮಿಂಬಲೆ ಕೊಂಡಿಯ ಮೂಲಕ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯನ್ನು ಮುಂದುವರೆಸಬಹುದು. ಲಭ್ಯತೆಯ ಆಧಾರದ ಮೇಲೆ ಪ್ರಯಾಣಿಕರು ತಮಗೆ ಬೇಕಾದ ಸೇವೆಯಲ್ಲಿ, ತಮ್ಮ ಆಯ್ಕೆಯ ಆಸನವನ್ನು ಕಾದಿರಿಸಬಹುದು.
  • ಟಿಕೆಟ್ ಕಾಯ್ದಿರಿಸುವ ವೇಳೆಯಲ್ಲಿ ಪ್ರಯಾಣಿಕರು ತಮ್ಮ ಗುರುತಿನ ದಾಖಲೆಯ ಪ್ರಕಾರವನ್ನು ಆಯ್ದುಕೊಂಡು, ಪ್ರಯಾಣದ ವೇಳೆಯಲ್ಲಿ ಹಾಜರು ಪಡಿಸುವ ಗುರುತು ದಾಖಲೆಯ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಪಾಸ್‍ಪೋರ್ಟ್, ಚಾಲನಾ ಪರವಾನಿಗೆ, ಮತದಾರರ ಗುರುತು ಚೀಟಿ, ಪ್ಯಾನ್ ಕಾರ್ಡ್, ಪಡಿತರ ಕಾರ್ಡು ಇವುಗಳಲ್ಲಿ ಯಾವುದಾದರೂ ಒಂದು ಭಾವಚಿತ್ರ ಗುರುತಿನ ಚೀಟಿಯನ್ನು ಪ್ರಯಾಣಿಕರು ಗುರುತಿನ ದಾಖಲೆಯಾಗಿ ಆರಿಸಿಕೊಳ್ಳಬಹುದಾಗಿದೆ.
  • ಟಿಕೆಟ್ ಕಾಯ್ದಿರಿಸುವ ಮುನ್ನ, ಪ್ರಯಾಣಿಕರು ಪಾವತಿ ಮಾರ್ಗದ (ಪೇಮೆಂಟ್ ಗೇಟ್‍ವೇ) ಅನುಮೋದನೆಗಾಗಿ ಪಾವತಿ ವಿವರಗಳನ್ನು (’ಕ್ರೆಡಿಟ್ ಕಾರ್ಡ್/ಅಂತರ್ಜಾಲ ಬ್ಯಾಂಕಿಂಗ್’) ಒದಗಿಸಬೇಕು. ಪಾವತಿ ಮಾರ್ಗವು ವಹಿವಾಟನ್ನು ಅನುಮೋದಿಸಿದ ನಂತರ ಟಿಕೆಟ್ ಕಾಯ್ದಿರಿಸುವಿಕೆ ಖಚಿತಗೊಳ್ಳುತ್ತದೆ. ಈ ವೇಳೆಯಲ್ಲಿ ಖಚಿತಗೊಂಡ ಟಿಕೆಟ್‍ಗೆ ಪಿಎನ್‍ಆರ್ ಸಂಖ್ಯೆ ರಚನೆಗೊಳ್ಳುತ್ತದೆ. ನಂತರ ಪ್ರಯಾಣಿಕರು ಈ-ಟಿಕೆಟ್‍ನ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳಬಹುದು. ಸ್ವೀಕೃತಿಯ ದಾಖಲೆಯಾಗಿ ಈ-ಟಿಕೆಟ್‍ಗಳು ಸ್ಪಷ್ಟವಾದ A4 ಸೈಜ್ ಕಾಗದದ ಮೇಲೆ ಮುದ್ರಿತವಾಗುತ್ತವೆ ಮತ್ತು ಇವನ್ನು ಪ್ರಯಾಣದ ವೇಳೆಯಲ್ಲಿ ಅಂಗೀಕರಿಸಲಾಗುತ್ತದೆ.
  • ಬದಲಾಗಿ ಪ್ರಯಾಣಿಕರು ಅಂತರ್ಜಾಲ ಸಂಪರ್ಕ ಮತ್ತು ಮುದ್ರಣ ಸೌಲಭ್ಯ ಇರುವ ಯಾವುದೇ ಗಣಕದಿಂದ ಅಥವಾ ಕ.ರಾ.ರ.ಸಾ.ನಿ.ದ ಮುಂಗಟ್ಟೆಗಳಲ್ಲಿ, ಟಿಕೆಟ್‍ನ ಪಿಎನ್‍ಆರ್ ಸಂಖ್ಯೆಯನ್ನು ಉಲ್ಲೇಖಿಸಿ ಈ-ಟಿಕೆಟ್‍ನ ಮುದ್ರಿತ ಪ್ರತಿಯನ್ನು ಪಡೆಯಬಹುದಾಗಿದೆ. ಪ್ರಯಾಣಿಕರು ಅಂತರ್ಜಾಲದ ತಾಣದಲ್ಲಿ ತಮ್ಮ ನೋಂದಾಯಿತ ಬಳಕೆಯ ಹೆಸರಿನಿಂದ ಲಾಗಿನ್ ಆಗಿ, "ಕಾಯ್ದಿರಿಸುವಿಕೆ ಇತಿಹಾಸ ವೀಕ್ಷಿಸಿ (ವ್ಯೂ ಬುಕಿಂಗ್ ಹಿಸ್ಟರಿ)" ಪುಟದಿಂದ ಟಿಕೆಟ್‍ನ ಮುದ್ರಿತ ಪ್ರತಿ ಪಡೆಯಬಹುದು.
  • ಕಾದಿರಿಸಿದ ಟಿಕೆಟ್ ಅನ್ನು ಕ.ರಾ.ರ.ಸಾ.ನಿ.ದ ಮುಂಗಟ್ಟೆಗಳಲ್ಲಿ ಮುದ್ರಿಸಬೇಕಿದ್ದಲ್ಲಿ, ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವ ವ್ಯಕ್ತಿಗೆ ಗುರುತು ದಾಖಲೆಯ ಅಸಲು ಪ್ರತಿಯನ್ನು ಪರಿಶೀಲನೆಗಾಗಿ ಒದಗಿಸಬೇಕಾಗುತ್ತದೆ. ಪಿಎನ್‍ಆರ್ ಸಂಖ್ಯೆಯ ಪ್ರಯಾಣ ಸಾರಾಂಶದ ಆಧಾರದ ಮೇಲೆ ಪರಿಶೀಲನೆ ನಡೆಸಲಾಗುತ್ತದೆ. ಪ್ರಯಾಣ ಮುಂಗಟ್ಟೆಗಳಲ್ಲಿ ನೇರವಾಗಿ ಪಡೆದುಕೊಂಡ ಮುಂಗಡ ಟಿಕೆಟ್‍ಗಳಿಗೆ ಪ್ರಯಾಣದ ವೇಳೆ ಯಾವುದೇ ತೆರನಾದ ಗುರುತು ದಾಖಲೆಯನ್ನು ಒದಗಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಟಿಕೆಟ್ ಅನ್ನು ಮುದ್ರಿಸಲು ಯಾವುದೇ ಹೆಚ್ಚುವರಿ ಶುಲ್ಕವನ್ನುವಿಧಿಸಲಾಗುವುದಿಲ್ಲ.
  • ಪ್ರಯಾಣಿಕರು ಈ-ಟಿಕೆಟ್ ಮೂಲಕ ಪ್ರಯಾಣಿಸುತ್ತಿದ್ದರೆ, ಪ್ರಯಾಣದ ಸಮಯದಲ್ಲಿ, ಈ-ಟಿಕೆಟ್‍ನಲ್ಲಿ ನಮೂದಿಸಿರುವ ಗುರುತಿನ ದಾಖಲೆಯ ಮೂಲಪ್ರತಿಯನ್ನು ಹೊಂದಿರಬೇಕಾಗಿರುತ್ತದೆ.
  • ಮುಂಗಡ ಕಾಯ್ದಿರಿಸುವಿಕೆ ಟಿಕೆಟ್ ಮುದ್ರಿತವಾದ ಮೇಲೆ, ಈ-ಟಿಕೆಟ್‍ಗೆ ಯಾವುದೇ ಸಿಂಧುತ್ವ ಇರುವುದಿಲ್ಲ.
  • ಪ್ರಯಾಣದ ವೇಳೆಯಲ್ಲಿ, ಸೇವೆಯಲ್ಲಿರುವ ನಿರ್ವಾಹಕ (ಅಥವಾ ಚಾಲಕ ಕಂ ನಿರ್ವಾಹಕ), ಪ್ರಯಾಣ ಪಟ್ಟಿ ಮತ್ತು ಈ-ಟಿಕೆಟ್‍ನಲ್ಲಿ ನಮೂದಿಸಿರುವ ಪ್ರಯಾಣಿಕರ ಗುರುತು ದಾಖಲೆಯ ಮೂಲ ಪ್ರತಿಯನ್ನು ಪರಿಶೀಲಿಸುತ್ತಾರೆ. ಒಂದು ವೇಳೆ ಪ್ರಯಾಣಿಕರು ಈ-ಟಿಕೆಟ್‍ನಲ್ಲಿ ನಮೂದಿಸಿರುವ ಗುರುತು ದಾಖಲೆಯ ಮೂಲ ಪ್ರತಿಯನ್ನು ಒದಗಿಸುವಲ್ಲಿ ವಿಫಲರಾದರೆ, ಅಂತಹ ಈ-ಟಿಕೆಟ್ ಅನ್ನು ಅಸಿಂಧುವೆಂದು ಪರಿಗಣಿಸಲಾಗುತ್ತದೆ ಮತ್ತು ಆ ಪ್ರಯಾಣವನ್ನು "ಟಿಕೆಟ್ ರಹಿತ ಪ್ರಯಾಣ" ಎಂದು ಪರಿಗಣಿಸಲಾಗುತ್ತದೆ. ಗುರುತು ದಾಖಲೆಯ ಕರಡು ಪ್ರತಿಯನ್ನು, ಗುರುತು ದಾಖಲೆಯಾಗಿ ಸ್ವೀಕರಿಸಲಾಗುವುದಿಲ್ಲ.
  • ಈ-ಟಿಕೆಟ್‍ಗಳಲ್ಲಿ ಭಾಗಶಃ ರದ್ಧತಿಗೆ ಅವಕಾಶವಿಲ್ಲ.
  • ಅಂತರ್ಜಾಲದಲ್ಲಿ ಕಾದಿರಿಸಿದ ಟಿಕೆಟ್‍ಗಳನ್ನು ("ಈ-ಟಿಕೆಟ್ ಅಥವಾ ಮುಂಗಡ ಟಿಕೆಟ್" ಸಹಿತ/ರಹಿತ) ಆ ಸೇವೆಯ ಮುಂಗಡ ಟಿಕೆಟ್ ಕಾದಿರಿಸುವ ಸೌಲಭ್ಯ ಇರುವವರೆಗೆ ರದ್ದು ಪಡಿಸಬಹುದಾಗಿದೆ. ನೋಂದಾಯಿತ ಗ್ರಾಹಕರು ಟಿಕೆಟ್ ಕಾದಿರಿಸುವ ವೇಳೆಯಲ್ಲಿ ಬಳಸಿದ ಬಳಕೆದಾರರ ಹೆಸರಿನಿಂದ ಲಾಗಿನ್ ಆದರೆ ಮಾತ್ರ ಈ-ಟಿಕೆಟ್ ರದ್ಧತಿಗೆ ಅವಕಾಶವಿರುತ್ತದೆ. ಈ-ಟಿಕೆಟ್ ರದ್ಧತಿಯ ಸಂದರ್ಭಗಳಲ್ಲಿ ಮರುಪಾವತಿ ಮೊತ್ತವನ್ನು ಸಂಬಂಧಿತ ಕ್ರೆಡಿಟ್ ಕಾರ್ಡ್/ಅಂತರ್ಜಾಲ ಬ್ಯಾಂಕಿಂಗ್ ಖಾತೆಗೆ ಮಾತ್ರ ವರ್ಗಾವಣೆ ಮಾಡಲಾಗುತ್ತದೆ.
  • ಯಾವುದೇ ಸೇವೆಗೆ, ಮುಂಗಡ ಕಾದಿರಿಸುವಿಕೆ ಸ್ಥಗಿತಗೊಂಡ ನಂತರ ಈ-ಟಿಕೆಟ್ ರದ್ದು ಪಡಿಸಲು ಅವಕಾಶವಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಯಾವುದೇ ಮರುಪಾವತಿಯನ್ನು ಮಾಡಲಾಗುವುದಿಲ್ಲ.
  • ಒಂದು ವೇಳೆ ಕ.ರಾ.ರ.ಸಾ.ನಿ. (ಅಥವಾ ಇತರ STUಗಳು) ವು ಸೇವೆಯನ್ನು ರದ್ದು ಪಡಿಸಿದಲ್ಲಿ, ಆ ಸೇವೆಗೆ ಅನ್ವಯಿಸುವ ಮರುಪಾವತಿ ಮೊತ್ತವನ್ನು ಸಂಬಂಧಿತ ಕ್ರೆಡಿಟ್ ಕಾರ್ಡ್/ ಅಂತರ್ಜಾಲ ಬ್ಯಾಂಕಿಂಗ್ ಖಾತೆಗಳಿಗಷ್ಟೇ ವರ್ಗಾಯಿಸಲಾಗುತ್ತದೆ.
  • ಪ್ರಯಾಣಿಕರು "ಈ-ಟಿಕೆಟ್" ಕಳೆದು ಹೋದ ಸಂದರ್ಭದಲ್ಲಿ, ತಮ್ಮ ನೋಂದಾಯಿತ ಬಳಕೆದಾರರ ಹೆಸರಿನಿಂದ ಲಾಗಿನ್ ಆಗಿ "ಕಾದಿರಿಸುವಿಕೆ ಇತಿಹಾಸ ವೀಕ್ಷಿಸಿ (ವ್ಯೂ ಬುಕಿಂಗ್ ಹಿಸ್ಟರಿ)" ಪುಟದಿಂದ ಟಿಕೆಟ್‍ನ ಪ್ರತಿಯನ್ನು ಮುದ್ರಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.
  • ಅಂತರ್ಜಾಲ ಕಾದಿರಿಸುವಿಕೆ ಮೂಲಕ ಮಾಡಿದ ಎಲ್ಲ ವಹಿವಾಟುಗಳ ವಿವರಗಳು "ಕಾದಿರಿಸುವಿಕೆ ಇತಿಹಾಸ ವೀಕ್ಷಿಸಿ (ವ್ಯೂ ಬುಕಿಂಗ್ ಹಿಸ್ಟರಿ)" ದಲ್ಲಿ ಲಭ್ಯವಿರುತ್ತವೆ. ಈ ವ್ಯವಸ್ಥೆಯನ್ನು ಗ್ರಾಹಕರ ಪರಾಮರ್ಶೆಗಾಗಿ ಹಾಗೂ ನಂತರದ ಸಂಬಂಧಿತ ಕ್ರೆಡಿಟ್ ಕಾರ್ಡ್/ ಅಂತರ್ಜಾಲ ಬ್ಯಾಂಕಿಂಗ್ ವಹಿವಾಟುಗಳ ಪರಿಶೀಲನೆಗಾಗಿ ಬಳಸಿಕೊಳ್ಳಬಹುದಾಗಿದೆ.
  • ಅಂತರ್ಜಾಲದ ಮೂಲಕ ಮಾಡಿದ ಎಲ್ಲ ವಹಿವಾಟುಗಳು ವಾಣಿಜ್ಯ ಮಾರ್ಗದಿಂದ(ಪೇಮೆಂಟ್ ಗೇಟ್‍ವೇ) ನಿರ್ದೇಶಿತ ಷರತ್ತುಗಳಿಗನ್ವಯವಾಗಿರುತ್ತವೆ ಮತ್ತು ಯಾವುದೇ ತೆರಿಗೆ ಶುಲ್ಕಗಳಿದ್ದಲ್ಲಿ, ಅವುಗಳಿಗೆ ಬದ್ಧವಾಗಿರುತ್ತವೆ. ಕ.ರಾ.ರ.ಸಾ.ನಿ.ವು ಪ್ರತಿ ಕಾದಿರಿಸಿದ ಆಸನಕ್ಕೆ, ಟಿಕೆಟ್ ಶುಲ್ಕದ ಮೇಲೆ 2.5% ನಷ್ಟು ಸೇವಾ ಶುಲ್ಕವನ್ನು ಅಂತರ್ಜಾಲ ಕಾಯ್ದಿರಿಸುವಿಕೆಗೆ ವಿಧಿಸುತ್ತದೆ.
  • ಯಾವುದೇ ಸೇವೆಗೆ ಅನ್ವಯಿಸುವ ರಿಯಾಯಿತಿಗಳು ಅಂತರ್ಜಾಲ ಮೂಲಕ ಕಾದಿರಿಸಿದ ಎಲ್ಲ ಟಿಕೆಟ್‍ಗಳಿಗೂ ಲಭ್ಯವಿರುತ್ತವೆ.
  • ಅಧಿಕ ಅಂತರ್ಜಾಲ ಸಂಚಾರದ ಸಂದರ್ಭಗಳಲ್ಲಿ ಈ-ಟಿಕೆಟ್‍ನ ಸೌಲಭ್ಯವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಗಳಿರುವುದರಿಂದ, ಈ ಅನಾನುಕೂಲದಿಂದ ತಪ್ಪಿಸಿಕೊಳ್ಳಲು, ಪ್ರಯಾಣಿಕರು ಟಿಕೆಟ್ ಕಾದಿರಿಸಿದ ತಕ್ಷಣ ಈ-ಟಿಕೆಟ್‍ನ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳುವುದು ಉತ್ತಮವೆಂದು ಈ ಮೂಲಕ ಸೂಚಿಸುತ್ತೇವೆ.
  • ಅಂಧ ವ್ಯಕ್ತಿಗಳು, ಅಂಗವಿಕಲರು, ಹಿರಿಯ ನಾಗರಿಕರು, ಪೋಲಿಸ್ ವಾಹನದ ಅಧಿಪತ್ರ, ಕ.ರಾ.ರ.ಸಾ.ನಿ.ದ ನೌಕರರ ಕುಟುಂಬಕ್ಕೆ ದೊರೆತ ಅನುಜ್ಞಾ ಪತ್ರ, ಕ.ರಾ.ರ.ಸಾ.ನಿ.ದ ನೌಕರರ ಬಳಿ ಇರುವ ಅನುಜ್ಞಾ ಪತ್ರ, ಸ್ವತಂತ್ರ ಟಿಕೆಟ್‍ಗಳು ಇತ್ಯಾದಿ ರಿಯಾಯಿತಿ ಅನುಜ್ಞಾ ಪತ್ರ ಹೊಂದಿರುವ ವ್ಯಕ್ತಿಗಳಿಗೆ ಅಂತರ್ಜಾಲ ಕಾದಿರಿಸುವಿಕೆ ಮೂಲಕ ಟಿಕೆಟ್ ಕಾದಿರಿಸಲು ಅವಕಾಶವಿಲ್ಲ.

ಈ - ರದ್ದು ಪಡಿಸುವಿಕೆ

ರದ್ದು ಪಡಿಸುವಿಕೆ ನಿಯಮಗಳು

 

  • ಈ-ಟಿಕೆಟ್‍ಗಳಿಗೆ ಭಾಗಶಃ ರದ್ದು ಪಡಿಸುವಿಕೆಗೆ ಅವಕಾಶವಿಲ್ಲ.
  • ಯಾವುದೇ ಸೇವೆಗೆ, ಮುಂಗಡ ಟಿಕೆಟ್ ಕಾದಿರಿಸುವ ವ್ಯವಸ್ಥೆ ಮುಕ್ತಾಯಗೊಂಡ ನಂತರ ಈ-ಟಿಕೆಟ್ ರದ್ದು ಪಡಿಸಲು ಅವಕಾಶವಿರುವುದಿಲ್ಲ.ಇಂತಹ ಸಂದರ್ಭಗಳಲ್ಲಿ ಯಾವುದೇ ಮರುಪಾವತಿ ನೀಡಲಾಗುವುದಿಲ್ಲ.
  • ಟಿಕೆಟ್ ರದ್ದು ಪಡಿಸುವಿಕೆಗೆ, ರದ್ದು ಪಡಿಸುವ ಶುಲ್ಕವನ್ನು ಆ ಪ್ರಯಾಣದ ಟಿಕೆಟ್ ಶುಲ್ಕದ ಆಧಾರದ ಮೇಲೆ ಲೆಕ್ಕ ಹಾಕಲಾಗುವುದು.
  • ರಿಯಾಯಿತಿ ಟಿಕೆಟ್‍ಗಳ ರದ್ದು ಪಡಿಸುವಿಕೆಯೂ ಮೇಲ್ಕಂಡ ಕ್ರಮಗಳಿಗನುಗುಣವಾಗಿಯೇ ಇರುವುದು.ಆದರೆ ರದ್ದು ಪಡಿಸುವಿಕೆ ಶುಲ್ಕಗಳನ್ನು ಟಿಕೆಟ್‍ನ ಸಂಪೂರ್ಣ ಶುಲ್ಕದ ಮೇಲೆ (ರಿಯಾಯಿತಿ ಶುಲ್ಕದ ಮೇಲಲ್ಲ) ನಿರ್ಧರಿಸಲಾಗುವುದು. ಮರುಪಾವತಿ ಮೊತ್ತವು ರಿಯಾಯಿತಿ ಟಿಕೆಟ್ ಶುಲ್ಕ ಮತ್ತು ರದ್ದು ಪಡಿಸುವಿಕೆ ಶುಲ್ಕ, ಇವೆರಡರ ವ್ಯತ್ಯಾಸವಾಗಿರುವುದು. ಒಟ್ಟಿನಲ್ಲಿ, ರದ್ದು ಪಡಿಸುವಿಕೆ ಶುಲ್ಕಗಳು, ಟಿಕೆಟ್‍ನ ಸಂಪೂರ್ಣ ಶುಲ್ಕದ ಮೇಲೆ ಅವಲಂಬಿತವಾಗಿರುತ್ತವೆ.
  • ಕಾಯ್ದಿರಿಸುವ ಶುಲ್ಕವು ಮರುಪಾವತಿಯಾಗುವುದಿಲ್ಲ. ಉಳಿದಂತೆ, ಸೇತುವೆ ಶುಲ್ಕ, ಗ್ರಾಹಕ ಶುಲ್ಕ, ದಾರಿಸುಂಕದ ಶುಲ್ಕ, ಪ್ರವೇಶ ಶುಲ್ಕ ಮತ್ತು ಅಪಘಾತ ಪರಿಹಾರ ನಿಧಿ ಶುಲ್ಕ ಇತ್ಯಾದಿಗಳು ಸಂಪೂರ್ಣವಾಗಿ ಮರುಪಾವತಿಯಾಗುತ್ತವೆ.

KSRTC © 2011. All Rights Reserved.KSRTC eMailCRM Login

Designed and Developed by Fugo Creative Pvt Ltd

Powered by :
Radiant info