KSRTC

ವಿಶ್ವ ಬ್ಯಾಂಕ್ ಪ್ರಾಯೋಜಿತ ಯೋಜನೆ

ಬಸ್ ಕಾಯ್ದಿರಿಸಿ

ಕ.ರಾ.ರ.ಸಾ.ನಿ.ದ ವ್ಯವಹಾರ ವಿತರಕರಾಗಿ

ಕ.ರಾ.ರ.ಸಾ.ನಿ.ದ ಇತಿಹಾಸ

ಸದೃಢ, ಸುರಕ್ಷಿತ ಮತ್ತು ಆರಾಮದಾಯಕ ಸಾರಿಗೆ ಸೌಕರ್ಯದ ಲಭ್ಯತೆಯು ಯಾವುದೇ ದೇಶದ ಆರ್ಥಿಕ ಪ್ರಗತಿಯ ಪ್ರಮುಖ ದಿಕ್ಸೂಚಿಯಾಗಿರುತ್ತದೆ. ಅಭಿವೃದ್ಧಿಶೀಲ ಸಮಾಜದಲ್ಲಿ ದೂರದ ಪ್ರದೇಶಗಳಿಗೆ ಸಂಪರ್ಕ ಒದಗಿಸುವ ಅತಿ ಮುಖ್ಯ ಮಾಧ್ಯಮವಾಗಿ ಸಾರ್ವಜನಿಕ ರಸ್ತೆ ಸಾರಿಗೆಯು ಕಾರ್ಯ ನಿರ್ವಹಿಸುತ್ತದೆ. ಈ ನಿಟ್ಟಿನಲ್ಲಿ, ಪ್ರಯಾಣಿಕರಿಗೆ " ಸಮೃಧ್ಧ, ಸಮರ್ಥ, ಮಿತವ್ಯಯಕಾರಿ ಹಾಗೂ ಸುಸಜ್ಜಿತ ರಸ್ತೆ ಸಾರಿಗೆ ಸೌಕರ್ಯ" ಗಳನ್ನು ಒದಗಿಸುವ ಉದ್ದೇಶದಿಂದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು , ರಸ್ತೆ ಸಾರಿಗೆ ನಿಗಮ ಕಾಯಿದೆ 1950 ರ ಅಡಿಯಲ್ಲಿ, ಆಗಸ್ಟ್, 1961 ರಲ್ಲಿ ಸ್ಥಾಪಿತವಾಯಿತು. ಈ ಪ್ರಯತ್ನದಲ್ಲಿ ಯಶ ಸಾಧಿಸಿದ ಕ.ರಾ.ರ.ಸಾ.ನಿಗಮವು ವಿಶ್ವಾಸಾರ್ಹತೆ ಮತ್ತು ಸುರಕ್ಷತೆಗಾಗಿ ಹೆಸರುವಾಸಿಯಾಗಿದೆ ಹಾಗೂ ಜನ-ಮನದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ.

 

ಕಾಲ ಕ್ರಮೇಣ, ಪ್ರಾದೇಶಿಕ ಆಧಾರದ ಮೇಲೆ ಸುಲಲಿತ ಆಡಳಿತಕ್ಕಾಗಿ ಈ ಕೆಳಕಂಡ ಮೂರು ಅಂಗ ಸಂಸ್ಥೆಗಳು ರೂಪಿಸಲ್ಪಟ್ಟವು:

 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಂಗಳೂರು 15-08-1997 ರಿಂದ ಸ್ಥಾಪಿತವಾಗಿರುತ್ತದೆ,
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ 01-11-1997 ರಿಂದ ಸ್ಥಾಪಿತವಾಗಿರುತ್ತದೆ ಹಾಗೂ
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಗುಲ್ಬರ್ಗ 01-10-2000 ದಿಂದ ಸ್ಥಾಪಿತವಾಗಿರುತ್ತದೆ.

 

ಮರು-ರೂಪಿತ ರಾಜ್ಯ ಸಾರಿಗೆ ಉದ್ಯಮದ (STU) ಕಾರ್ಯ ನಿರ್ವಹಣೆ:

Restructured STU Operations

KSRTC © 2011. All Rights Reserved.KSRTC eMailCRM Login

Designed and Developed by Fugo Creative Pvt Ltd

Powered by :
Radiant info