ಸಾಮಾನ್ಯ ಪ್ರಶ್ನೆಗಳು
ಕ.ರಾ.ರ.ಸಾ.ನಿ. ದ ಬಸ್ ಟಿಕೆಟ್ ಖರೀದಿಯಿಂದಾಗುವ ಪ್ರಯೋಜನಗಳೇನು?
ಕ.ರಾ.ರ.ಸಾ.ನಿ. ವು ಮುಂಚೂಣಿಯಲ್ಲಿರುವ ಸಾರ್ವಜನಿಕ ವಲಯದ ಉದ್ಯಮವಾಗಿರುವುದರಿಂದ ಅತ್ಯಧಿಕ ಬಸ್ ಆಯ್ಕೆಯ ಅವಕಾಶವಿರುತ್ತದೆ. ನಮ್ಮಜೊತೆ ವ್ಯವಹರಿಸುವುದರಿಂದಾಗುವ ಕೆಲವು ಪ್ರಯೋಜನಗಳು:
- ನಿಮ್ಮ ಆಯ್ಕೆಯ ಆಸನವನ್ನು ಪಡೆಯುವ ಅವಕಾಶ.
- ಅಂತರ್ಜಾಲ, ಮೊಬೈಲ್ ಮುಖಾಂತರವಾಗಿ ಹಾಗೂ ವೈಯಕ್ತಿಕವಾಗಿ ಆಸನಗಳನ್ನು ಕಾದಿರಿಸುವ ಸೌಲಭ್ಯ.
- ನಿಮಗೆ ಬೇಕಾದ ಬಸ್‍ನ ಮಾದರಿ, ಬಸ್ ಸಮಯ ಮತ್ತು ಹತ್ತುವ ಸ್ಥಳದ ಆಧಾರದ ಮೇಲೆ ಬಸ್ ಅನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ
ನೇರ/ ಅಂತರ್ಜಾಲ (ಈ - ಟಿಕೆಟ್) ಕಾಯ್ದಿರಿಸುವಿಕೆಗೆ ನೊಂದಾವಣೆ ಅಗತ್ಯವೇ?
ಹೌದು. ಗ್ರಾಹಕರ ನೊಂದಾವಣೆ ಅಗತ್ಯ.
ನೇರ/ ಅಂತರ್ಜಾಲ (ಈ - ಟಿಕೆಟ್) ಕಾಯ್ದಿರಿಸುವಿಕೆಗೆ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆಯೆ?
ಹೌದು. ವಿದ್ಯುನ್ಮಾನ-ಕಾಯ್ದಿರಿಸುವಿಕೆ (ಈ - ಟಿಕೆಟ್)ಗೆ ನಾವು 2.5 % ಸೇವಾ ಶುಲ್ಕ ವಿಧಿಸುತ್ತೇವೆ.
ಟಿಕೆಟ್ ಮೊತ್ತ ಕಡಿತವಾಗಿ, ಟಿಕೆಟ್ ಖಚಿತಗೊಂಡಿಲ್ಲದಾಗ (ವಿಫಲ ವ್ಯವಹಾರ) ಕೈಗೊಳ್ಳಬೇಕಾದ ಕ್ರಮಗಳೇನು?
ಈ-ಟಿಕೆಟ್ ಉಲ್ಲೇಖ ಸಂಖ್ಯೆ ಅಥವಾ ಕ.ರಾ.ರ.ಸಾ.ನಿ.ದೊಂದಿಗೆ ನೋಂದಾಯಿತವಾಗಿರುವ ಬಳಕೆದಾರರ ಹೆಸರು ಮತ್ತು ವ್ಯವಹಾರದ ದಿನಾಂಕದ ವಿವರಗಳನ್ನು This e-mail address is being protected from spambots. You need JavaScript enabled to view it ಗೆ ಈ-ಮೇಲ್ ಮಾಡಿ. ಉಲ್ಲೇಖ ಸಂಖ್ಯೆಯನ್ನು, ಈ -ಟಿಕೆಟ್ ಕಾಯ್ದಿರಿಸುವಿಕೆಗೆ ಲಾಗಿನ್ ಆದಾಗ, (ಸಂಭವನೀಯ ವಿಫಲ ವ್ಯವಹಾರದ ಇತಿಹಾಸ) ಪುಟದಿಂದ ಪಡೆಯ ಬಹುದಾಗಿದೆ.
ಸಂಪರ್ಕ ಸಂಖ್ಯೆಗಳು:
22221321 ವಿ.ಸಂ. 283 ಇತರ ಡೆಬಿಟ್ ಹಾಗು ಕ್ರೆಡಿಟ್ ಕಾರ್ಡ್ ಪಾವತಿಗಾಗಿ
22221321 ವಿ.ಸಂ. 280 ಎಸ್.ಬಿ.ಐ. ಡೆಬಿಟ್ ಕಾರ್ಡ್ ಪಾವತಿಗಾಗಿ (ಕೆಲಸದ ದಿನಗಳಲ್ಲಿ ಬೆ. 10:30 ರಿಂದ ಸಂಜೆ 17:00 ಘಂಟೆಯ ವರೆಗೆ, ಶನಿವಾರ ಬೆ. 10:30 ರಿಂದ ಮ: 13:00 ಘಂಟೆಯವರೆಗೆ ಸಂಪರ್ಕಿಸಿ)
ಮೊಬೈಲ್ ಕಾಯ್ದಿರಿಸುವಿಕೆಗೆ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆಯೆ?
ಹೌದು. ಮೊಬೈಲ್ -ಕಾಯ್ದಿರಿಸುವಿಕೆಗೆ ನಾವು 2.5 % ಸೇವಾ ಶುಲ್ಕ ವಿಧಿಸುತ್ತೇವೆ.
ಕ.ರಾ.ರ.ಸಾ.ನಿ. ದ ವ್ಯವಹಾರ ವಿತರಣಾ ಮುಂಗಟ್ಟಿನಿಂದ ಟಿಕೆಟ್ ಕಾಯ್ದಿರಿಸಲು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆಯೆ?
ಇಲ್ಲ! ಕ.ರಾ.ರ.ಸಾ.ನಿ. ದ ಮುಂಗಟ್ಟೆಗಳಲ್ಲಿ ಮತ್ತು ಕ.ರಾ.ರ.ಸಾ.ನಿ. ದ ವ್ಯವಹಾರ ವಿತರಣಾ ಮುಂಗಟ್ಟೆಗಳಲ್ಲಿ ಟಿಕೆಟ್ ಶುಲ್ಕ ಒಂದೇ ಆಗಿರುತ್ತದೆ.
ಈ-ಟಿಕೆಟ್ ಗೆ ಗುರುತು ದಾಖಲೆಯನ್ನು ಹೊಂದಿರುವುದು ಕಡ್ಡಾಯವೇ?
ಹೌದು. ಗುರುತು ದಾಖಲೆಯನ್ನು ಹೊಂದಿರುವುದು ಮತ್ತು ಪ್ರಯಾಣದ ಸಮಯದಲ್ಲಿ ಅದನ್ನು ಹಾಜರು ಪಡಿಸುವುದು ಕಡ್ಡಾಯ.
ಈ-ಟಿಕೆಟ್ ಗೆ ಗುರುತು ದಾಖಲೆಯನ್ನು ಹೊಂದಿರುವುದು ಕಡ್ಡಾಯವೇ?
ಹೌದು. ಗುರುತು ದಾಖಲೆಯನ್ನು ಹೊಂದಿರುವುದು ಮತ್ತು ಪ್ರಯಾಣದ ಸಮಯದಲ್ಲಿ ಅದನ್ನು ಹಾಜರು ಪಡಿಸುವುದು ಕಡ್ಡಾಯ.
ಈ-ಟಿಕೆಟ್ ನ ಮುದ್ರಿತ ಪ್ರತಿ ಹೊಂದಿರುವುದು ಕಡ್ಡಾಯವೇ?
ಹೌದು. ಟಿಕೆಟ್ ನ ಮುದ್ರಿತ ಪ್ರತಿ ಹೊಂದಿರುವುದು ಹಾಗೂ ಪ್ರಯಾಣದ ಸಮಯದಲ್ಲಿ ಅದನ್ನು ಹಾಜರು ಪಡಿಸುವುದು ಕಡ್ಡಾಯ. ಅಂತರ್ಜಾಲದಲ್ಲಿ ಟಿಕೆಟ್ ಕಾಯ್ದಿರಿಸಿದ್ದರೆ, ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯ ನಂತರ ಈ-ಟಿಕೆಟ್ ಲಭ್ಯವಿರುತ್ತದೆ. ಪ್ರಯಾಣಿಕರು ಕೆಲಸದ ವೇಳೆಯಲ್ಲಿ ಕ.ರಾ.ರ.ಸಾ.ನಿ.ದ ಮುಂಗಟ್ಟೆಗಳಿಂದಲೂ ಟಿಕೆಟ್ ನ ಮುದ್ರಿತ ಪ್ರತಿಯನ್ನು ಪಡೆಯಬಹುದು.
ಮಕ್ಕಳ ಟಿಕೆಟ್ ಶುಲ್ಕಗಳಿಗಾಗಿ ವಯಸ್ಸಿನ ಮಾನದಂಡಗಳೇನು?
- 6 ವರ್ಷಗಳಿಗಿಂತ ಕೆಳಗಿನ (<= 6 ವರ್ಷಗಳು) ವಯಸ್ಸಿನ ಮಕ್ಕಳು ಉಚಿತವಾಗಿ ಸಂಚರಿಸಬಹುದಾಗಿದೆ.
- 6 (>6 ವರ್ಷಗಳು) ರಿಂದ 12 ವರ್ಷದ (<12 ವರ್ಷಗಳು) ಮಕ್ಕಳಿಗೆ, ಮಕ್ಕಳ ಟಿಕೆಟ್ ಶುಲ್ಕವನ್ನು ವಿಧಿಸಲಾಗುವುದು.
- 12 ವರ್ಷದ ಮೇಲ್ಪಟ್ಟ (>12 ವರ್ಷಗಳು) ಮಕ್ಕಳಿಗೆ ವಯಸ್ಕರ ಟಿಕೆಟ್ ಶುಲ್ಕವನ್ನು ವಿಧಿಸಲಾಗುವುದು.
ಅಥವಾ
- 117 ಸೆಂ.ಮೀ ನಿಂದ 140 ಸೆಂ.ಮೀ ನಷ್ಟು ಎತ್ತರವಿರುವ ಮಕ್ಕಳಿಗೆ ಮಕ್ಕಳ ಟಿಕೆಟ್ ಶುಲ್ಕವನ್ನು ವಿಧಿಸಲಾಗುವುದು.
- 140 ಸೆಂ.ಮೀ ಗಳಿಗಿಂತ ಎತ್ತರವಾಗಿರುವ ಮಕ್ಕಳಿಗೆ ವಯಸ್ಕರ ಟಿಕೆಟ್ ಶುಲ್ಕವನ್ನು ವಿಧಿಸಲಾಗುವುದು.
ಮಕ್ಕಳ ಟಿಕೆಟ್ ಶುಲ್ಕದ ಮಾನದಂಡಗಳೇನು?
ಎಲ್ಲ ಹವಾ ನಿಯಂತ್ರಿತ ಬಸ್ ಗಳಿಗೆ (ವೋಲ್ವೋ,ಶೀತಲ್, ಮೇಘದೂತ, ಕೊರೊನ, ಹವಾ-ನಿಯಂತ್ರಿತ ಸ್ಲೀಪರ್) ವಯಸ್ಕರ ಶುಲ್ಕದ 75% ರಷ್ಟು ಶುಲ್ಕ ವಿಧಿಸಲಾಗುತ್ತದೆ.
ಇತರ ಬಸ್ ಗಳಿಗೆ (ವೇಗದೂತ, ಕರ್ನಾಟಕ ಸಾರಿಗೆ, ರಾಜಹಂಸ) ವಯಸ್ಕರ ಶುಲ್ಕದ 50% ರಷ್ಟು ಶುಲ್ಕ ವಿಧಿಸಲಾಗುತ್ತದೆ .
ನನ್ನ ಟಿಕೆಟ್ ಕಳೆದು ಹೋಗಿದೆ. ಈಗ ನಾನು ಏನು ಮಾಡಬೇಕು?
ಈ-ಟಿಕೆಟ್ ಕಳೆದು ಹೋಗಿದ್ದರೆ, ಕ.ರಾ.ರ.ಸಾ.ನಿ ದ ತಂತ್ರಾಶದಲ್ಲಿ ಲಾಗಿನ್ ಆಗಿ ಈ-ಟಿಕೆಟ್ ನ ಮುದ್ರಿತ ಪ್ರತಿಯನ್ನು ಪಡೆಯಬಹುದು. ಮುಂಗಟ್ಟೆಯಲ್ಲಿ ಪಡೆದ ಟಿಕೆಟ್ ಕಳೆದು ಹೋಗಿದ್ದರೆ, ಅವಶ್ಯಕ ವಿವರಗಳು ಮತ್ತು ಗುರುತಿನ ದಾಖಲೆಗಳನ್ನು ಒದಗಿಸಿ, 25% ಟಿಕೆಟ್ ಶುಲ್ಕವನ್ನು ಪಾವತಿಸಿ ಟಿಕೆಟ್ ನ ನಕಲು ಪ್ರತಿಯನ್ನು ಪಡೆಯಬಹುದು.
ನಾನು ನನ್ನ ಹೆಸರಿನಲ್ಲಿ ಈ- ಟಿಕೆಟ್ ಅನ್ನು ಕಾಯ್ದಿರಿಸಿರುವೆ. ಬೇರೆ ಯಾರಾದರೂ ಈ ಟಿಕೆಟ್ ನೊಂದಿಗೆ ಪ್ರಯಾಣ ಮಾಡಬಹುದೆ?
ಇಲ್ಲ. ಇದಕ್ಕೆ ಅವಕಾಶವಿಲ್ಲ.
ಹಣ ಪಾವತಿಗಾಗಿ ಕೇವಲ ಐ.ಸಿ.ಐ.ಸಿ.ಐ ಕ್ರೆಡಿಟ್ ಕಾರ್ಡ್ ಮತ್ತು ಎಸ್.ಬಿ.ಐ ಡೆಬಿಟ್ ಕಾರ್ಡ್‍ಗಳನ್ನುಮಾತ್ರ ಬಳಸಬೇಕೆ?
ಕೇವಲ ಐ.ಸಿ.ಐ.ಸಿ.ಐ ಒಂದೇ ಲಭ್ಯವಿರುವ ಪಾವತಿ ಮಾರ್ಗ(ಪೇಮೆಂಟ್ ಗೇಟ್ ವೇ). ನೀವು ಯಾವುದೇ ಭಾರತೀಯ ಬ್ಯಾಂಕ್ ನ ಮಾಸ್ಟರ್/ವೀಸಾ ವ್ಯಾಪಾರ ಮುದ್ರೆ ಇರುವ ಕ್ರೆಡಿಟ್ ಕಾರ್ಡ್ ಅನ್ನು ಪಾವತಿಗಾಗಿ ಬಳಸಬಹುದಾಗಿದೆ. ನೀವು ಮಾಸ್ಟರ್/ವೀಸಾ ವ್ಯಾಪಾರ ಮುದ್ರೆ ಇರುವ, ವ್ಯವಹಾರಗಳನ್ನು ಸಮರ್ಥಿಸುವ ಡೆಬಿಟ್ ಕಾರ್ಡ್ ಗಳನ್ನೂ ಕೂಡಾ ಪಾವತಿಗಾಗಿ ಬಳಸಬಹುದು. ನಿಮ್ಮ ಎಸ್.ಬಿ.ಐ. ಅಂತರ್ಜಾಲ ಬ್ಯಾಂಕಿಂಗ್ ವ್ಯವಹಾರಗಳು ಚಾಲ್ತಿಯಲ್ಲಿದ್ದರೆ, ನೀವು ಎಸ್.ಬಿ.ಐ. ಅಂತರ್ಜಾಲ ಪಾವತಿಯನ್ನೂ ಮಾಡಬಹುದಾಗಿದೆ.









