ಲಗೇಜು ದರಗಳು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಲಗೇಜ್/ಸರಕುಗಳನ್ನು ಸಾಗಿಸುವ ವ್ಯವಸ್ಥೆ ಜಾರಿಯಲ್ಲಿದ್ದು, ಅದರಂತೆ ನಿಗಮದ ಬಸ್ಸುಗಳಲ್ಲಿ ಲಗೇಜ್‍ಗಳನ್ನು ಸಾಗಿಸುವಾಗ ಈ ಕೆಳಕಂಡ ಕ್ರಮಗಳನ್ನು ಅನುಸರಿಸುವುದು.

I. ಲಗೇಜ್‍ಗಳ ವರ್ಗೀಕರಣ:

1. ಹಗುರ ಲಗೇಜ್

ಕಡಿಮೆ ತೂಕವಿರುವ ಹಾಗೂ ಹೆಚ್ಚಿನ ಸ್ಥಳಾವಕಾಶವನ್ನು ಆಕ್ರಮಿಸುವ ಲಗೇಜ್‍ಗಳಿಗೆ ಪ್ರತಿ 10 ಕೆ.ಜಿಗೆ ಒಂದು ಯೂನಿಟ್ ಎಂದು ಪರಿಗಣಿಸುವುದು.
    1. ಪ್ರೆಸ್ ಮಾಡದ ಕಾಟನ್ ಬೇಲ್‍ಗಳು
    2. ಪ್ಲಾಸ್ಟಿಕ್ ವಸ್ತುಗಳು / ಪೈಪ್‍ಗಳು, ಅಲಂಕಾರಿಕ ವಸ್ತುಗಳು, ಇತ್ಯಾದಿ
    3. ಅಲ್ಯೂಮಿನಿಯಂ ಪಾತ್ರೆಗಳು /ಪೈಪ್‍ಗಳು
    4. ಹೂವು, ಸೊಪ್ಪು, ಅಲಂಕಾರಿಕ ವಸ್ತುಗಳು, ಇತ್ಯಾದಿ.

2. ಭಾರದ ಲಗೇಜ್:

ಭಾರದ ಲಗೇಜ್‍ನ್ನು 20 ಕೆ.ಜಿ.ಗೆ ಒಂದು ಯೂನಿಟ್ ಎಂದು ಪರಿಗಣಿಸುವುದು.
    1. ಕೃಷಿ ಉತ್ಪನ್ನಗಳು / ತರಕಾರಿ / ಹಣ್ಣುಗಳು
    2. ಗೊಬ್ಬರ
    3. ಧಾನ್ಯಗಳು / ಬೀಜಗಳು
    4. ಮೋಟಾರುಗಳು / ಪಂಪ್‍ಗಳು / ಕಬ್ಬಿಣದ ಪೈಪ್‍ಗಳು
    5. ಸೂಟ್‍ಕೇಸ್, ಬ್ಯಾಗ್, ಇತ್ಯಾದಿ ಲಗೇಜ್‍ಗಳು

3. ಸಾಗಿಸಲು ಸಾಧ್ಯವಿರುವಂತಹ ವಸ್ತುಗಳು:

    1. ಟ್ರಕ್ ಟೈರ್ - 3 ಯೂನಿಟ್‍ಗಳು (60 ಕೆ.ಜಿಗಳು)
    2. ರೆಫ್ರಿಜರೇಟರ್/ಬೈಸಿಕಲ್/ವಾಶಿಂಗ್ ಮೆಷಿನ್/ವೀಣೆ/ಕಾರ್ ಟೈರ್ – 2 ಯೂನಿಟ್‍ಗಳು (40 ಕೆ.ಜಿಗಳು)
    3. ಟೇಬಲ್ ಫ್ಯಾನ್/ ಹಾರ್ಮೊನಿಯಂ/ ಟಿವಿ/ ಕಂಪ್ಯೂಟರ್ ಮಾನಿಟರ್, ಸಿ.ಪಿ.ಯು/ ಬ್ಯಾಟರಿ/ 25 ಲೀಟರ್ ಖಾಲಿ ಕಂಟೈನರ್ - 01 ಯೂನಿಟ್ (20 ಕೆ.ಜಿಗಳು)

4. ಸಾಕು ಪ್ರಾಣಿಗಳು ( Pet animals )

    1. ಸಾಕು ಪ್ರಾಣಿ / ಪಕ್ಷಿಗಳನ್ನು ನಗರ, ಸಾಮಾನ್ಯ, ಹೊರವಲಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಮಾತ್ರ ಸಾಗಾಣಿಕೆ ಮಾಡಲು ಅನುಮತಿಸಿದೆ. ಪ್ರತಿಷ್ಠಿತ ಸಾರಿಗೆಗಳಾದ ಕರ್ನಾಟಕ ವೈಭವ, ರಾಜಹಂಸ, ಹವಾನಿಯಂತ್ರಣರಹಿತ ಸ್ಲೀಪರ್ ಮತ್ತು ಎಲ್ಲಾ ರೀತಿಯ ಹವಾನಿಯಂತ್ರಿತ ಸಾರಿಗೆಗಳಲ್ಲಿ ಸಾಕು ಪ್ರಾಣಿ/ ಪಕ್ಷಿಗಳ ಸಾಗಣೆಯನ್ನು ನಿರ್ಬಂಧಿಸಲಾಗಿದೆ.
    2. ಮೊಲ, ನಾಯಿಮರಿ, ಬೆಕ್ಕು, ಪಕ್ಷಿ, ಪಂಜರದಲ್ಲಿನ ಪಕ್ಷಿ ಇತ್ಯಾದಿಗಳಿಗೆ ಮಕ್ಕಳ ದರ ವಿಧಿಸುವುದು.
    3. ನಾಯಿಯನ್ನು ಸೂಕ್ತವಾಗಿ ಚೈನ್‍ನಿಂದ ಬಿಗಿದು, ವಾರಸುದಾರರ ಕಾಳಜಿಯೊಂದಿಗೆ ಕೊಂಡೊಯ್ಯುವುದು.
    4. ಸಾಕು ಪ್ರಾಣಿಗಳನ್ನು ಕೊಂಡೊಯ್ಯುವ ಪ್ರಯಾಣಿಕರು ಇತರೆ ಪ್ರಯಾಣಿಕರಿಗೆ ಅಥವಾ ನಿಗಮದ ಸಿಬ್ಬಂದಿಗಳಿಗೆ ಅಥವಾ ಲಗೇಜ್‍ಗೆ ಹಾನಿಯಾಗದ ರೀತಿ ಅಥವಾ ಇತರೆ ಪ್ರಯಾಣಿಕರ ವಸ್ತುಗಳಿಗೆ ತೊಂದರೆಯಾಗದಂತೆ ಹಾಗೂ ನಿಗಮದ ಆಸ್ತಿಗೆ ಹಾನಿಯಾಗದ ರೀತಿ ಕಾಳಜಿ ವಹಿಸತಕ್ಕದ್ದು.

ಸೂಚನೆ: - ಸಾಕು ಪ್ರಾಣಿಗಳಿಗೆ ಮೇಲಿನಂತೆ ದರ ವಿಧಿಸಿ ಪ್ರಯಾಣಿಸಲು ಅವಕಾಶ ನೀಡುವುದು. ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುವುದಿಲ್ಲ.

5. ರೇಷ್ಮೆ ಗೂಡು (Cocoon):

ರೇಷ್ಮೆ ಗೂಡನ್ನು ಪ್ರತಿ 15 ಕೆ.ಜಿಗೆ ಒಂದು ಯೂನಿಟ್‍ನಂತೆ ಪರಿಗಣಿಸುವುದು.

6. ಉಚಿತ ಸಾಗಣೆ :

  • ಪ್ರತಿ ಪ್ರಯಾಣಿಕರು 30 ಕೆ.ಜಿ ತೂಕದವರೆಗೆ ಲಗೇಜ್ ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುತ್ತದೆ. ಮಕ್ಕಳು 15 ಕೆ.ಜಿ ತೂಕದವರೆಗೆ ಲಗೇಜ್ ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುತ್ತದೆ.
  • ಅವಕಾಶಕ್ಕಿಂತ ಹೆಚ್ಚಿನ ತೂಕದ ಲಗೇಜ್ ಕೊಂಡೊಯ್ಯುವ ಪ್ರಯಾಣಿಕರಿಗೆ, ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುವ ಲಗೇಜ್ ಹೊರತುಪಡಿಸಿ, ಉಳಿದ ಲಗೇಜ್‍ಗೆ ದರ ವಿಧಿಸಲಾಗುವುದು.
  • ಪ್ರಯಾಣಿಕರು 04 ಅಥವಾ 05 ಜನರ ಗುಂಪಿನಲ್ಲಿ ಪ್ರಯಾಣಿಸುತಿದ್ದಲ್ಲಿ, ತಲಾ 30 ಕೆ.ಜಿ ವೈಯಕ್ತಿಕ ಲಗೇಜ್‍ನ್ನು ಕೊಂಡೊಯ್ಯಬಹುದು. ಪ್ರಯಾಣಿಕರ ಬ್ಯಾಗ್‍ನ ತೂಕ 30 ಕೆ.ಜಿ ಮೀರಿದಲ್ಲಿ ಅದನ್ನು ವಾಣಿಜ್ಯ ಲಗೇಜ್ ಎಂದು ಪರಿಗಣಿಸಿ ನಿಗಮದ ನಿಯಮಾವಳಿಯಂತೆ ಲಗೇಜ್ ಶುಲ್ಕ ವಿಧಿಸಲಾಗುವುದು.
  • ಉಚಿತ ಲಗೇಜ್ ಮಿತಿಯು ಪ್ರಯಾಣಿಕರ ವೈಯಕ್ತಿಕ ವಾಣಿಜ್ಯೇತರ ವಸ್ತುಗಳಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ವಸ್ತುಗಳು ಮತ್ತು Portable Luggage ಗಳಿಗೆ ಲಗೇಜ್ ಶುಲ್ಕ ಅನ್ವಯಿಸುತ್ತದೆ.
  • ಒಬ್ಬ ವಯಸ್ಕ ಪ್ರಯಾಣಿಕ 05 ಹಾಸಿಗೆ ಮತ್ತು ಒಂದು ನಾಯಿಯನ್ನು ತನ್ನ ಜೊತೆ ಕೊಂಡ್ಯೊಯಲು ಇಚ್ಛಿಸಿದಲ್ಲಿ ಹಾಸಿಗೆಯನ್ನು ಉಚಿತ ಲಗೇಜ್ ಎಂದು ಪರಿಗಣಿಸಿ, ನಾಯಿಗೆ ನಿಗದಿತ ದರ ವಿಧಿಸಲಾಗುವುದು.

II. ಲಗೇಜ್ ದರ:

ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುವ ಲಗೇಜ್‍ನ್ನು ಹೊರತುಪಡಿಸಿ, ಇತರೆ ಲಗೇಜ್‍ಗಳಿಗೆ ಕೆಳಕಂಡಂತೆ ಒಂದು ಯೂನಿಟ್‍ಗೆ ದರ ವಿಧಿಸುವುದು.

ಕ್ರ.ಸಂ

ವಾಹನದ ಮಾದರಿ
ದರ ಪ್ರತಿ ಹಂತಕ್ಕೆ (ರೂ) ಕನಿಷ್ಟ ದರ (ರೂ)
1 ಹವಾ ನಿಯಂತ್ರಣ ರಹಿತ ಬಸ್ಸುಗಳು (All Non A/c Services) (ಕರ್ನಾಟಕ ಸಾರಿಗೆ, ಕರ್ನಾಟಕ ವೈಭವ, ರಾಜಹಂಸ, ನಾನ್ ಎ.ಸಿ ಸ್ಲೀಪರ್ ಮತ್ತು ನಗರ ಸಾರಿಗೆ ಇತ್ಯಾದಿ) ಮತ್ತು

ಹವಾ ನಿಯಂತ್ರಿತ ವಾಹನಗಳು (All A/c Services)

(ವೋಲ್ವೋ, ಕರೋನಾ, ಮಲ್ಟಿಆಕ್ಸೆಲ್, ಡೈಮಂಡ್‍ಕ್ಲಾಸ್, ಎ.ಸಿ ಸ್ಲೀಪರ್, ಫ್ಲೈ ಬಸ್, ಇತ್ಯಾದಿ)
ರೂ.0.75 ರೂ.5.00
  • ಈ ದರಗಳು ಪ್ರಯಾಣಿಕರು ಜೊತೆಗಿಲ್ಲದೆ ಸಾಗಿಸುವ ಸರಕಿಗೂ ಹಾಗೂ ಅಂತರರಾಜ್ಯದಲ್ಲಿ ಸಾಗಿಸಲ್ಪಡುವ ಸರಕಿಗೂ ಅನ್ವಯವಾಗಲಿದೆ.
  • ದಿನಪತ್ರಿಕೆಗಳ ಬಂಡಲ್ 05 ಕೆ.ಜಿಗೆ ಒಂದು ಯೂನಿಟ್‍ನಂತೆ ಪರಿಗಣಿಸುವುದು.

III. ನಿಷೇಧಿತ ವಸ್ತುಗಳು:

  • 1. ಪೆಟ್ರೋಲ್, ಗ್ಯಾಸ್, ಡೀಸೆಲ್, ಕೆರೋಸಿನ್
  • 2. ಮದ್ಯಪಾನೀಯಗಳು
  • 3. ಗ್ಯಾಸೋಲಿನ್
  • 4. ಸ್ಪಿರಿಟ್, ಟರಪೆಂಟೈನ್
  • 5. ಆಸಿಡ್
  • 6. ಸಲ್ಫರ್
  • 7. ಕೋಲ್ಟಾರ್
  • 8. ಗನ್ಪೌಡರ್
  • 9. ಹಸಿ/ ಒಣಗಿದ ಮೀನುಗಳು
  • 10. ಪಟಾಕಿ/ಸಿಡಿಮದ್ದುಗಳು
  • 11. ಅಫೀಮ್/ನಶೆ ವಸ್ತುಗಳು
  • 12. ಗ್ಯಾಸ್ ಸಿಲಿಂಡರ್
  • 13. ಮೃತ ದೇಹಗಳು (ಕಳೇಬರ)
  • 14. ಪರವಾನಗಿ ಇಲ್ಲದ ಅರಣ್ಯ ಉತ್ಪನ್ನಗಳು
  • 15. ಮೂಳೆ/ಕೊಂಬುಗಳು
  • 16. ಸಾಕು ಪ್ರಾಣಿಗಳನ್ನು ಹೊರತುಪಡಿಸಿ ಉಳಿದ ಪ್ರಾಣಿಗಳು.
  • 17. ಬ್ಯಾಟರಿಗಳು (Dry Batteries)
  • 18. ಕಲ್ಲಿದ್ದಲು
  • 19. ಪ್ಯಾಕ್ ಮಾಡದ ಹತ್ತಿ
  • 20. ಪ್ಯಾಕ್ ಮಾಡದ ಒಣಗಿದ ಎಲೆಗಳು
  • 21. ಗನ್ನುಗಳು ಮತ್ತು ತೋಟಾಗಳು
  • 22. ಸಂಸ್ಕರಿಸದ ಚರ್ಮ, ತುಪ್ಪಳ, ಕೂದಲು
  • 23. ಪ್ಯಾಕ್ ಮಾಡದ ಉಲ್ಲನ್ ವಸ್ತುಗಳು
  • 24. ದುರ್ವಾಸನೆ ಕೂಡಿದ ಪದಾರ್ಥಗಳು
  • 25. ಅಳಿವಿನ ಅಂಚಿನಲ್ಲಿರುವ ಪ್ರಾಣಿ/ಪಕ್ಷಿ ಹಾಗೂ ಇತರೆ ಸರಿಸೃಪಗಳು
  • 26. ವಿಷಕಾರಿ ಜೀವ ಜಂತುಗಳು (ಹಾವು ಮತ್ತು ಇತರೆ).
  • 27. ಕರ್ಪೂರ ಇತ್ಯಾದಿ, ಸುಲಭವಾಗಿ ಹೊತ್ತಿಕೊಳ್ಳುವ ಪದಾರ್ಥಗಳು.
  • 28. ಕಾನೂನಿನ ಪ್ರಕಾರ ನಿಷೇಧಿಸಲ್ಪಟ್ಟ ಹಾಗೂ ಹಾನಿಯ ಇತರೆ ವಸ್ತುಗಳು

IV. ಲಗೇಜ್/ ಸರಕುಗಳನ್ನು ಸಾಗಿಸುವಾಗ ಅನ್ವಯಿಸುವ ಷರತ್ತು ಮತ್ತು ನಿಬಂಧನೆಗಳು:

  • ನಿಗಮವು ಯಾವುದೇ ಲಗೇಜ್‍ನ್ನು ಅನುಮತಿಸುವ/ನಿರಾಕರಿಸುವ ಹಕ್ಕನ್ನು ಹೊಂದಿರುತ್ತದೆ.
  • ಸ್ಥಳಾವಕಾಶದ ಲಭ್ಯತೆ ಮೇರೆಗೆ ಪ್ಯಾಕಿಂಗ್ ಸ್ಥಿತಿಯಲ್ಲಿರುವ ಲಗೇಜ್‍ನ್ನು ಅನುಮತಿಸಲಾಗುವುದು.
  • ಆಕ್ರಮಣಕಾರಿ, ನಿಷಿದ್ಧ, ಸ್ಪೋಟಕ, ಸುಲಭವಾಗಿ ಹೊತ್ತಿಕೊಳ್ಳುವ ಪದಾರ್ಥಗಳು ಅಥವಾ ಇತರೆ ಅಪಾಯಕಾರಿ ವಸ್ತುಗಳನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ಕೊಂಡೊಯ್ಯಲು ಅವಕಾಶವಿಲ್ಲ.
  • ಸರಕುಗಳು ಹಾಳಾದಲ್ಲಿ, ಅನಿರೀಕ್ಷಿತ ಘಟನೆಗಳಿಂದ/ಅಪಘಾತಗಳಿಂದ ಲಗೇಜ್ ಕಳವು, ಹಾನಿಯುಂಟಾದಲ್ಲಿ ನಿಗಮವು ಜವಾಬ್ದಾರಿಯಾಗಿರುವುದಿಲ್ಲ.
  • ಲಗೇಜ್‍ನಲ್ಲಿರುವ ವಸ್ತುಗಳ ಬಗ್ಗೆ ಗುಮಾನಿ ಬಂದಲ್ಲಿ, ನಿಗಮದ ಸಿಬ್ಬಂದಿಗಳು ಪರಿಶೀಲನೆ ನಡೆಸುವ ಅಧಿಕಾರ ಹೊಂದಿರುತ್ತದೆ.
  • ಸ್ಥಳಾವಕಾಶದ ಲಭ್ಯತೆ ಮೇರೆಗೆ ಲಗೇಜ್ ಕೊಂಡೊಯ್ಯಲು ಅವಕಾಶ ನೀಡುವ ನಿಯಮಾವಳಿಗೊಳಪಟ್ಟಿದೆ. ಪ್ರಯಾಣಿಕರು ಅಥವಾ ನಿಗಮದ ಸಿಬ್ಬಂದಿಗಳು ಚಲಿಸಲು ಅನಾನುಕೂಲವಾಗುವ ರೀತಿಯಲ್ಲಿ ಮತ್ತು ಚಾಲಕರ ಕ್ಯಾಬಿನ್‍ನಲ್ಲಿ ಯಾವುದೇ ಸಂದರ್ಭಗಳಲ್ಲಿಯೂ ಲಗೇಜ್ ಕೊಂಡೊಯ್ಯುವಂತಿಲ್ಲ.
  • ಬಸ್ಸಿನಲ್ಲಿ ಕೊಂಡೊಯ್ಯುತ್ತಿರುವ ಲಗೇಜ್‍ಗೆ ಮೊದಲ ಸ್ಥಳದಲ್ಲಿಯೇ ದರ ವಿಧಿಸದೇ ಲಗೇಜ್ ಚೀಟಿಯನ್ನು ಪಡೆಯದಿದ್ದಲ್ಲ್ಲಿ, ನಿರ್ದಿಷ್ಟ ಲಗೇಜ್‍ನ ದರದ ಎರಡು ಪಟ್ಟು ದಂಡವನ್ನು ಪ್ರಯಾಣಿಕರಿಗೆ ವಿಧಿಸುವುದು.

Last updated date 01-11-2019 03:15 AM
Custom Search
Sort by:
Relevance
Relevance
Date