KSRTC Official Website for Online Bus Ticket Booking - KSRTC.in

ಪಾಸ್ ಗಳು ಮತ್ತು ರಿಯಾಯಿತಿಗಳು


ಮಾಸಿಕ ಪಾಸುಗಳು:

  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ರಿಯಾಯಿತಿ ದರದಲ್ಲಿ ಮಾಸಿಕ ಪಾಸುಗಳನ್ನು ಎರಡು ಹಂತಗಳ ನಡುವೆ ಪ್ರಯಾಣಿಸುವ ಕಾರ್ಮಿಕರು, ವ್ಯಾಪಾರಿಗಳು ಇತ್ಯಾದಿಯವರ ಅನುಕೂಲಕ್ಕಾಗಿ ಪ್ರಯಾಣಿಕರಿಗೆ ವಿತರಣೆ ಮಾಡುತ್ತಿರುತ್ತದೆ. ಮಾಸಿಕ ಪಾಸುಗಳನ್ನು ಎಲ್ಲಾ ಬಸ್ ನಿಲ್ದಾಣಗಳಲ್ಲಿ ವಿತರಿಸಲಾಗುತ್ತಿದೆ. ಮಾಸಿಕ ಪಾಸುಗಳನ್ನು ಕರಾರಸಾನಿಗಮವು ವಿತರಿಸುವ ಗುರುತಿನ ಚೀಟಿಯೊಂದಿಗೆ ಮಾನ್ಯ ಮಾಡಲಾಗುತ್ತದೆ.
  •  
  • ಕರಾರಸಾನಿಗಮ ವಿತರಿಸುವ ಭಾವಚಿತ್ರವಿರುವ ಗುರುತಿನ ಚೀಟಿ ರೂ.50/- ದರಗಳಾಗಿದ್ದು, ಒಂದು ವರ್ಷ ಅವಧಿಗೆ ಚಾಲ್ತಿಯಲ್ಲಿರುತ್ತದೆ.
  •  
  • ವೇಗದೂತ ಸಾರಿಗೆಗಳಲ್ಲಿ ಪ್ರಯಾಣಿಸಲು ವಿತರಿಸುವ ಪಾಸುಗಳನ್ನು ವೇಗದೂತ ಹಾಗೂ ಸಾಮಾನ್ಯ ಬಸ್ಸುಗಳೆರಡಲ್ಲಿ ಮಾನ್ಯ ಮಾಡಲಾಗುತ್ತದೆ.
  •  
  • ಸಾಮಾನ್ಯ ಸಾರಿಗೆಗಳಲ್ಲಿ ಪ್ರಯಾಣಿಸಲು ವಿತರಿಸುವ ಪಾಸುಗಳನ್ನು ಸಾಮಾನ್ಯ ಸೇವೆಗಳಲ್ಲಿ ಮಾತ್ರ ಮಾನ್ಯ ಮಾಡಲಾಗುತ್ತದೆ.
  •  

ವೇಗದೂತ ಹಾಗೂ ಸಾಮಾನ್ಯ ಸೇವೆಗಳ ಪಾಸುಗಳ ವಿವರ ( ದರಗಳು ದಿನಾಂಕ 01.03.2020 ರಿಂದ ಜಾರಿಗೆ ಬರುವಂತೆ)

ದರ ವಿಧಿಸುವ ಹಂತಗಳು
ವೇಗದೂತ ಹಾಗೂ ತಡೆರಹಿತ ಸಾರಿಗೆ
ದರ (ರೂ. ಗಳಲ್ಲಿ)
ಸಾಮಾನ್ಯ ಸಾರಿಗೆ
ದರ (ರೂ. ಗಳಲ್ಲಿ)
1 450-00 400-00
2 700-00 650-00
3 1100-00 900-00
4 1250-00 1100-00
5 1350-00 1200-00
6 1550-00 1300-00
7 1700-00 1400-00
8 1850-00 1550-00
9 2000-00 1700-00
10 2150-00 1800-00
11 2250-00 N.A.
12 2300-00 N.A.
13 2350-00 N.A.
14 2450-00 N.A.
15 2550-00 N.A.
16 2600-00 N.A.
17 2650-00 N.A.
18 2700-00 N.A.
19 2750-00 N.A.
20 2800-00 N.A.

ನಗರಗಳಲ್ಲಿ ವಿತರಣೆಯಲ್ಲಿರುವ ಮಾಸಿಕ ಪಾಸುಗಳ ದರಗಳು (ದರಗಳು ದಿನಾಂಕ 01.03.2020 ಜಾರಿಗೆ ಬಂದಿರುತ್ತವೆ):

ಕರಾರಸಾನಿಗಮದ ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಮಾಸಿಕ ಪಾಸುಗಳನ್ನು ವಿತರಿಸಲಾಗುತ್ತಿದೆ. ನಿಗಮವು ವಿತರಿಸುವ ಗುರುತಿನ ಚೀಟಿಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

ಕ್ರಮ ಸಂಖ್ಯೆ ನಗರ ಪಾಸಿನ ವಿಧ ಸಾಮಾನ್ಯ
ಪ್ರಯಾಣಿಕರಿಗೆ ದರ (ರೂ.ಗಳಲ್ಲಿ)
ಹಿರಿಯ
ನಾಗರಿಕರಿಗೆ ದರ (ರೂ.ಗಳಲ್ಲಿ)
1 ಮೈಸೂರು ನಗರ ನಗರ ಸೇವೆಗಳಿಗೆ 700 630
2 ಮೈಸೂರು ನಗರ ನಗರ & ಹೊರವಲಯ ಸೇವೆ  925 830
3 ಮೈಸೂರು ನಗರ ವೋಲ್ವೋ ಸೇವೆಗಳಿಗೆ  1150 ಅನ್ವಯಿಸುವುದಿಲ್ಲ
4 ತುಮಕೂರು ನಗರ 10 ನೇ ಹಂತದವರೆಗೆ ಪ್ರಯಾಣಿಸಲು 550 495
5 ಹಾಸನ ನಗರ  8 ನೇ ಹಂತದವರೆಗೆ ಪ್ರಯಾಣಿಸಲು 600 540
6 ಮಂಗಳೂರು ನಗರ ಮಂಗಳೂರು ಬಸ್ ನಿಲ್ದಾಣ-ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣ 650 585
7 ಮಂಗಳೂರು ನಗರ ಬಿಸಿ ರೋಡ್ / ಬಂಟ್ವಾಳ / ಪಾಣೆ ಮಂಗಳೂರು 900 810

ದಿನದ ಪಾಸುಗಳು :

ಮೈಸೂರು ನಗರ ವ್ಯಾಪ್ತಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ಕೆಳಕಂಡ ದೈನಂದಿನ ಪಾಸುಗಳನ್ನು ವಿತರಿಸಲಾಗುತ್ತಿದೆ. 

ಕ್ರಮ ಸಂಖ್ಯೆ ಸೇವೆಗಳು ದರ (ರೂ.ಗಳಲ್ಲಿ)
1 ಮೈಸೂರು ನಗರ & ಹೊರವಲಯ ಸೇವೆಗಳು ರೂ.60/-
2 ಮೈಸೂರು ವೋಲ್ವೋ ಸೇವೆಗಳು  ರೂ.100 + ಜಿಎಸ್‍ಟಿ

ಮಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ಕೆಳಕಂಡ ದೈನಂದಿನ ಪಾಸುಗಳನ್ನು ವಿತರಿಸಲಾಗುತ್ತಿದೆ. 

ಕ್ರಮ ಸಂಖ್ಯೆ ಸೇವೆಗಳು ದರ (ರೂ.ಗಳಲ್ಲಿ)
1 ಮಂಗಳೂರು-ಮಣಿಪಾಲ ನಡುವೆ ರೂ.170/-

ಸಂಯುಕ್ತ ದೈನಂದಿನ ಬಸ್ ಪಾಸ್ (ಕರಾರಸಾನಿಗಮ ಹಾಗೂ ಬೆಂಮಸಾಸಂಸ್ಥೆ ಬಸ್ಸುಗಳಲ್ಲಿ ಪ್ರಯಾಣಿಸಲು( (ದರಗಳು ದಿನಾಂಕ 01.03.2020 ರಿಂದ ಜಾರಿಗೆ ಬರಲಿದೆ)

ಬೆಂಗಳೂರು ಸುತ್ತಮುತ್ತಲಿನ ಸ್ಥಳಗಳಿಂದ ತಾಲ್ಲೂಕು / ಪಟ್ಟಣಗಳಿಂದ ಬೆಂಗಳೂರಿಗೆ ಬಂದು ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ಪಾಸುಗಳನ್ನು ವಿತರಿಸುತ್ತಿದ್ದು, ವಿತರಣೆಯ ದಿನದಂದು ಮಧ್ಯರಾತ್ರಿಯವರೆಗೆ ಚಾಲ್ತಿಯಲ್ಲಿರುತ್ತದೆ. ಈ ಪಾಸುಗಳನ್ನು ಕರಾರಸಾನಿಗಮದ ಸಾಮಾನ್ಯ / ವೇಗದೂತ ಬಸ್ಸುಗಳಲ್ಲಿ ಹಾಗೂ ಬೆಂಮಸಾಸಂಸ್ಥೆಯ ನಗರ, ಹೊರವಲಯ ಬಸ್ಸುಗಳಲ್ಲಿ ಮಾನ್ಯ ಮಾಡಲಾಗುವುದು. 
ಕ್ರ.ಸಂ. ಇಂದ ವರೆಗೆ ದರ (ರೂ. ಗಳಲ್ಲಿ)
1 ಕನಕಪುರ ಬೆಂಗಳೂರು 150.00
2 ಹಾರೊಹಳ್ಳಿ ಬೆಂಗಳೂರು 115.00
3 ಚನ್ನಪಟ್ನ ಬೆಂಗಳೂರು 150.00
4 ರಾಮನಗರ ಬೆಂಗಳೂರು 120.00
5 ಮಾಗಡಿ ಬೆಂಗಳೂರು 105.00
6 ಚಿಕ್ಕಬಳ್ಳಾಪುರ ಬೆಂಗಳೂರು 150.00
7 ಗೌರಿಬಿದನೂರು ಬೆಂಗಳೂರು 185.00
8 ಶಿಢ್ಲಘಟ್ಟ ಬೆಂಗಳೂರು 125.00
9 ಚಿಂತಾಮಣಿ ಬೆಂಗಳೂರು 185.00
10 ಕೋಲಾರ ಬೆಂಗಳೂರು 175.00
11 ತುಮಕೂರು ಬೆಂಗಳೂರು 160.00
12 ಕುಣಿಗಲ್ ಬೆಂಗಳೂರು 160.00
13 ಡಾಬಸ್ಪೇಟೆ ಬೆಂಗಳೂರು 120.00
14 ಮದ್ದೂರು ಬೆಂಗಳೂರು 165.00

ಮೈಸೂರು ನಗರದ ಸುತ್ತಮುತ್ತಲ ಸ್ಥಳಗಳಿಂದ ತಾಲ್ಲೂಕು/ ಪಟ್ಟಣಗಳಿಂದ ಮೈಸೂರಿಗೆ ಬಂದು ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ದೈನಂದಿನ ಪಾಸುಗಳನ್ನು ವಿತರಿಸಲಾಗುತ್ತಿದ್ದು, ಸಾಮಾನ್ಯ / ವೇಗದೂತ ಬಸ್ಸುಗಳಲ್ಲಿ ಹಾಗೂ ಮೈಸೂರು ನಗರದ ಸಾಮಾನ್ಯ / ಹೊರವಲಯ ಬಸ್ಸುಗಳಲ್ಲಿ ಮಾನ್ಯ ಮಾಡಲಾಗುವುದು. 

ಕ್ರ.ಸಂ. ಇಂದ ವರೆಗೆ ದರ (ರೂ. ಗಳಲ್ಲಿ)
1 ಪಿರಿಯಾಪಟ್ಟಣ ಮೈಸೂರು 150.00
2 ಹುಣಸೂರು ಮೈಸೂರು 100.00
3 ಕೆ.ಆರ್.ನಗರ ಮೈಸೂರು 100.00
4 ಸರಗೂರು ಮೈಸೂರು 110.00
5 ಹೆಚ್.ಡಿ.ಕೋಟೆ ಮೈಸೂರು 110.00
6 ಮಳವಳ್ಳಿ ಮೈಸೂರು 100.00
7 ಬನ್ನೂರು ಮೈಸೂರು 70.00
8 ಮಂಡ್ಯ ಮೈಸೂರು 100.00
9 ಕೆ.ಆರ್ .ಪೇಟೆ ಮೈಸೂರು 125.00
10 ಗುಂಡ್ಲುಪೇಟೆ ಮೈಸೂರು 125.00
11 ಚಾಮರಾಜನಗರ್ ಮೈಸೂರು 125.00
12 ಕೊಳ್ಳೇಗಾಲ ಮೈಸೂರು 125.00
13 ನಂಜನಗೂಡು ಮೈಸೂರು 70.00
14 ಪಾಂಡವಪುರ ಮೈಸೂರು 80.00
15 ಹೆಚ್.ಡಿ.ಕೋಟೆ ಹ್ಯಾಂಡ್‍ಪೋಸ್ಟ್  ಮೈಸೂರು 100.00
16 ಟಿ ನರಸೀಪುರ ಮೈಸೂರು 60.00
17 ಯಳಂದೂರು ಮೈಸೂರು 120.00

ಇತರೆ ನಗರ / ಪಟ್ಟಣಗಳಲ್ಲಿ ವಿತರಣೆಯಲ್ಲಿರುವ ದೈನಂದಿನ ಪಾಸುಗಳು :

ಕ್ರ.ಸಂ. ಇಂದ ವರೆಗೆ ದರ (ರೂ. ಗಳಲ್ಲಿ)
1 ದಾವಣಗೆರೆ  ಚಿತ್ರದುರ್ಗ 120.00
2 ದಾವಣಗೆರೆ ಶಿವಮೊಗ್ಗ 180.00
3 ದಾವಣಗೆರೆ ರಾಣಿಬೆನ್ನೂರು 90.00
4 ಹರಿಹರ ಶಿವಮೊಗ್ಗ 160.00
5 ಚಿತ್ರದುರ್ಗ ಹಿರಿಯೂರು 90.00

ಹಿರಿಯ ನಾಗರಿಕರ ರಿಯಾಯಿತಿ :
  
   ಹಿರಿಯ ನಾಗರಿಕರಿಗೆ ಟಿಕೆಟ್ ಪ್ರಯಾಣ ದರದಲ್ಲಿ ರಿಯಾಯಿತಿ :                 
  1. 60 ವರ್ಷ ಪೂರ್ಣಗೊಂಡಿರುವ ಹಾಗೂ ಅದಕ್ಕೂ ಹೆಚ್ಚಿನ ವಯಸ್ಸಿನ ಕರ್ನಾಟಕ ರಾಜ್ಯದ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ಶೇ.25 ರಿಯಾಯಿತಿ ಒದಗಿಸಲಾಗಿದೆ.
  2. ಈ ಪ್ರಯಾಣ ದರ ರಿಯಾಯಿತಿ ಸೌಲಭ್ಯವು ನಿಗಮದ ನಗರ, ಹೊರವಲಯ, ಸಾಮಾನ್ಯ, ವೇಗದೂತ ಅರೆ  ಸುವಿಹಾರಿ ಮತ್ತು ರಾಜಹಂಸ ಬಸ್ಸುಗಳಿಗೆ ಮಾತ್ರ ಅನ್ವಯಿಸುತ್ತದೆ. 
  3. ಹಿರಿಯ ನಾಗರಿಕರಿಗೆ ರಿಯಾಯಿತಿ ಪ್ರಯಾಣ ಸೌಲಭ್ಯವು ನಿಗಮವು ಆಚರಣೆಗೊಳಿಸುವ ಅಂತರರಾಜ್ಯ ಸೇವೆಗಳಿಗೂ ಅನ್ವಯಿಸುತ್ತದೆ.  
  4. ಹಿರಿಯ ನಾಗರಿಕರ ಟಿಕೆಟ್ ಪ್ರಯಾಣ ದರದಲ್ಲಿ ಶೇ.25 ರಿಯಾಯಿತಿ ಪಡೆಯಲು ಪ್ರಯಾಣದ ಸಮಯದಲ್ಲಿ ಈ ಕೆಳಕಂಡ ಯಾವುದಾದರೂ ಒಂದು ಮೂಲ ಗುರುತಿನ ಚೀಟಿ ಅಥವಾ ಡಿಜಿಲಾಕರ್  ಆಪ್ ಮುಖಾಂತರ ಹಾಜರುಪಡಿಸುವ ಆಧಾರ್ ಹಾಗೂ ಚಾಲನಾ ಪರವಾನಗಿ ಗುರುತಿನ ಚೀಟಿಯನ್ನು  ಪುರಾವೆಯಾಗಿ ಸ್ವೀಕರಿಸಲು ನಿರ್ದೇಶನಗಳನ್ನು  ನೀಡಲಾಗಿರುತ್ತದೆ. ಗುರುತಿನ ಚೀಟಿಯಲ್ಲಿ ಕರ್ನಾಟಕ  ರಾಜ್ಯದ ವಾಸಸ್ಥಳ ನಮೂದಿಸಿರುವುದು ಕಡ್ಡಾಯವಿರುತ್ತದೆ.

ಗುರುತಿನ ಚೀಟಿಯ ಮಾದರಿ ಮೂಲ / ಸಾಫ್ಟ್ ಪ್ರತಿ
ಚಾಲನಾ ಪರವಾನಗಿ, ಚುನಾವಣೆ ಗುರುತಿನ ಚೀಟಿ, ಪಾನ್ ಕಾರ್ಡ್, ಪಾಸ್‍ಪೋರ್ಟ್, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಚೀಟಿ 
•  ಪ್ರಯಾಣಿಕರ ಫೋಟೋ ಸಹಿತ ಗುರುತಿನ ಚೀಟಿ ಮೂಲ ಪ್ರತಿ ಅಥವಾ
•  ಡಿಜಿಲಾಕರ್ ಆಪ್ (  DigiLocker app) ಮುಖಾಂತರ ಹಾಜರುಪಡಿಸುವ ಸಾಫ್ಟ್ ಪ್ರತಿ 
ಸರ್ಕಾರಿ ಇಲಾಖೆಗಳಿಂದ ಪೋಟೋ ಸಮೇತ ವಿತರಿಸಿರುವ ಗುರುತಿನ ಚೀಟಿ  ಮೂಲ ಗುರುತಿನ ಚೀಟಿ
ನಿಗಮದ ವತಿಯಿಂದ ವಿತರಿಸಿರುವ ಗುರುತಿನ ಚೀಟಿ ಮೂಲ ಗುರುತಿನ ಚೀಟಿ


ವಿಕಲಚೇತನರ ಪಾಸುಗಳಿಗೆ ರಿಯಾಯಿತಿ :
ಕರಾರಸಾ ನಿಗಮವು ಕರ್ನಾಟಕ ರಾಜ್ಯದ ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ವಿತರಿಸುತ್ತಿದೆ. 
  1. ಪಾಸುಗಳ ದರಗಳನ್ನು ವಾರ್ಷಿಕ ರೂ.660/- ಕ್ಕೆ ನಿಗದಿಪಡಿಸಲಾಗಿದೆ.
  2.  ಈ ಪಾಸುಗಳನ್ನು ಶೇ.40 ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದ ಅಂಗವಿಕಲತೆಯುಳ್ಳ ವ್ಯಕ್ತಿಗಳು ಅಂದರೆ, 1) ಅಂಧತ್ವ, 2) ಮಂದದೃಷ್ಟಿ, 3) ಕುಷ್ಠರೋಗ ನಿವಾರಿತರಾದವರು, 4)ಶ್ರವಣದೋಷವುಳ್ಳವರು, 5)ಲನವಲನ  ಅಂಗವಿಕಲತೆ, 6) ಬುದ್ಧಿಮಾಂದ್ಯತೆ, 7)ಮಾನಸಿಕ ಅಸ್ವಸ್ಥರು ನಿಗಮದ ವತಿಯಿಂದ ರಿಯಾಯಿತಿ ಪಾಸುಗಳನ್ನು ಪಡೆಯಬಹುದು.  
  3. ಈ ಪಾಸುದಾರರು ನಗರ, ಹೊರವಲಯ, ಸಾಮಾನ್ಯ ಮತ್ತು ವೇಗದೂತ  ಬಸ್ಸುಗಳಲ್ಲಿ ಕರಾರಸಾನಿಗಮ, ವಾಕರಸಾಸಂಸ್ಥೆ ಹಾಗೂ ಈಕರಸಾಸಂಸ್ಥೆ ಬಸ್ಸುಗಳಲ್ಲಿ ಪಾಸು ತರಣೆಯಾದ ಸ್ಥಳದ 100 ಕಿ.ಮೀ  ವ್ಯಾಪ್ತಿಯೊಳಗೆ ಪ್ರಯಾಣಿಸಲು ಅವಕಾಶವಿರುತ್ತದೆ. 
  4. ಇತರೆ ನಿರ್ದೇಶನಗಳನ್ನು ಸಾಮಾನ್ಯ ಸ್ಥಾಯಿ ಆದೇಶ ಸಂ.779/2016  ದಿನಾಂಕ 20.12.2016 ರಲ್ಲಿ     ತಿಳಿಸಲಾಗಿದೆ.

ಪ್ರಯಾಣ ಸೌಲಭ್ಯ :
      •    ಈ ಪಾಸುದಾರರು ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ 
             ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ. 
      •    ಕರ್ನಾಟಕ ರಾಜ್ಯದೊಳಗೆ ಮಾತ್ರ ಪ್ರಯಾಣಿಸಬಹುದು. 
      •    ಈ ಪಾಸು ಜನವರಿಯಿಂದ ಡಿಸೆಂಬರ್ ರವರೆಗೆ ಚಾಲ್ತಿಯಲ್ಲಿರುತ್ತದೆ.

ಪಾಸು ವಿತರಣೆಯ ವಿಧಾನ:      
  1. ಪಾಸು ಪಡೆಯಲು ಮತ್ತು ನವೀಕರಣ ಮಾಡಲು ವ್ಯಕ್ತಿಯು ಖುದ್ದಾಗಿ ಹಾಜರಿರಬೇಕು.  ಅಂಗವಿಕಲರ  ಗುರುತಿನ ಚೀಟಿಯನ್ನು / ಯುಡಿಐಡಿ ಕಾರ್ಡ್‍ನ್ನು ಪರಿಶೀಲನೆಗೆ ತೋರಿಸಬೇಕು. ಮೇಲ್ಕಂಡ ವಿವಿಧ ಅಂಗವಿಕಲತೆಯನ್ನು ಹೊಂದಿರುವ ಫಲಾನುಭವಿಯು ಅರ್ಜಿಯನ್ನು ಭರ್ತಿಗೊಳಿಸಿ ಸಂಬಂಧಿಸಿದ  ವಿಭಾಗೀಯ ಕಛೇರಿಯಲ್ಲಿ ಸಲ್ಲಿಸಬೇಕು.
  2. ಅರ್ಜಿಯ ಜೊತೆಗೆ ವಿಕಲಚೇತನರು (ವಾಸಸ್ಥಳ ಜಿಲ್ಲಾವ್ಯಾಪ್ತಿಯ) ನಿಗದಿಪಡಿಸಿದ ವೈದ್ಯಕೀಯ ಪ್ರಾಧಿಕಾರಗಳಿಂದ ಗುರುತಿಸಲ್ಪಟ್ಟ  ವಿಕಲಚೇತನರಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯ ಸಹಿ ಹಾಗೂ ಮೊಹರಿನೊಡನೆ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ  ಒದಗಿಸಿರುವ ಅಂಗವಿಕಲತೆ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿಯ  ಮೂಲಪ್ರತಿಯನ್ನು ಪರಿಶೀಲನೆಗಾಗಿ ಹಾಜರುಪಡಿಸಬೇಕಿರುತ್ತದೆ.
  3.  ಈ ಪಾಸುಗಳನ್ನು 01 ನೇ ಜನವರಿ 28 ನೇ ಫೆಬ್ರವರಿ ಅವಧಿಯೊಳಗೆ  ನವೀಕರಣ ಮಾಡಿಕೊಳ್ಳುವುದು. 
  4. ಅಗತ್ಯ ಅರ್ಹತೆಗಳನ್ನು ಪೂರೈಸಿದ ಫಲಾನುಭವಿಗಳಿಗೆ ನೂತನ ಪಾಸುಗಳನ್ನು ವರ್ಷಪೂರ್ತಿ ವಿತರಣೆ  ಮಾಡಲಾಗುವುದು.

ಇತರೆ ಷರತ್ತು ನಿಬಂಧನೆಗಳು:                       
  1. ಸರ್ಕಾರಿ / ಅರೆ ಸರ್ಕಾರಿ ನೌಕರಿಯಲ್ಲಿರುವ ಫಲಾನುಭವಿಗಳು ಈ ಪಾಸು  ಪಡೆಯಲು ಅರ್ಹರಿರುವುದಿಲ್ಲ. 
  2.  ಪಾಸುದಾರರು ಪ್ರಯಾಣ ಮಾಡುವಾಗ ಪಾಸನ್ನು ಜೊತೆಯಲ್ಲಿಟ್ಟು ಪ್ರಯಾಣಿಸಬೇಕು. ನಿರ್ವಾಹಕರು / ಚಾಲಕರು / ತನಿಖಾ ಸಿಬ್ಬಂದಿಗಳು ಕೇಳಿದಲ್ಲಿ ತೋರಿಸಬೇಕು.

ಅಂಧರ ಪಾಸು :
ಕರಾರಸಾನಿಮಗವು ಕರ್ನಾಟಕ ರಾಜ್ಯದ ಅಂಧರಿಗೆ ಬಸ್ ಪಾಸ್ ವಿತರಿಸುತ್ತಿದೆ. ವಿವರಗಳು ಕೆಳಕಂಡಂತಿವೆ. 
  1. ಇದು ಉಚಿತ ಬಸ್ ಪಾಸ್ ಆಗಿರುತ್ತದೆ. 
  2. ಪೂರ್ಣ ಅಂಧರಿಗೆ ಮಾತ್ರ ವಿತರಿಸಲಾಗುತ್ತಿದೆ. 
  3. ಈ ಪಾಸುದಾರರು ಕರಾರಸಾನಿಗಮ, ಬೆಂಮಸಾಸಂಸ್ಥೆ, ವಾಕರಸಾ ಸಂಸ್ಥೆ ಹಾಗೂ ಈಕರಸಾ ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ರಾಜ್ಯ ಹಾಗೂ ಅಂತರರಾಜ್ಯಗಳೆರಡಲ್ಲೂ ಪ್ರಯಾಣಿಸಬಹುದಾಗಿದೆ.
  4. ಇತರೆ ನಿರ್ದೇಶನಗಳನ್ನು ಸಾಮಾನ್ಯ ಸ್ಥಾಯಿ ಆದೇಶ ಸಂ.777/2016 ದಿನಾಂಕ  30.11.2016 ರಲ್ಲಿ ತಿಳಿಸಲಾಗಿದೆ.
ಪಾಸು ವಿತರಣೆಯ ವಿಧಾನ:    
  1.  ಪೂರ್ಣ ಅಂಧರು ಈ ಪಾಸನ್ನು ಪಡೆಯಬಹುದು. 
  2. ಪಾಸು ಪಡೆಯಲು ಮತ್ತು ನವೀಕರಣ ಮಾಡಲು ವ್ಯಕ್ತಿಯು ಖುದ್ದಾಗಿ ಹಾಜರಿರಬೇಕು. ಅಂಗವಿಕಲರ ಗುರುತಿನ ಚೀಟಿ / ಯುಡಿಐಡಿ ಕಾರ್ಡ್ ಅನ್ನು ಪರಿಶೀಲನೆಗೆ ತೋರಿಸಬೇಕು. 
  3. ಅರ್ಜಿಯ ಜೊತೆಗೆ ನಿಗದಿಪಡಿಸಿದ ವೈದ್ಯಕೀಯ ಪ್ರಾಧಿಕಾರಗಳಿಂದ ಗುರುತಿಸಲ್ಪಟ್ಟ ವಿಕಲಚೇತನರಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯ  ಸಹಿ ಹಾಗೂ ಮೊಹರಿನೊಡನೆ ವಿಕಲಚೇತನರ ಹಾಗೂ  ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಒದಗಿಸಿರುವ ಅಂಧತ್ವದ  ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿಯ ಮೂಲಪ್ರತಿ ಅಥವಾ ಯುಡಿಐಡಿ ಕಾರ್ಡ್ ಅನ್ನು ಪರಿಶೀಲನೆಗಾಗಿ ಹಾಜರುಪಡಿಸಬೇಕಿರುತ್ತದೆ. 
  4. ಈ ಪಾಸುಗಳು ವಿತರಣೆಯಾದ ದಿನಾಂಕದಿಂದ 05 ವರ್ಷಗಳ ಅವಧಿಗೆ ಚಾಲ್ತಿಯಲ್ಲಿರುತ್ತದೆ. 
  5. ಈ ಪಾಸುದಾರರಿಗೆ ಉಚಿತವಾಗಿ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆಯನ್ನು ಒದಗಿಸಲಾಗಿದೆ. 
  6.  ರಾಜ್ಯ ಹಾಗೂ ಅಂತರರಾಜ್ಯ ಪ್ರಯಾಣಕ್ಕೆ ಅವಕಾಶವಿರುತ್ತದೆ. 

ಇತರೆ ಷರತ್ತು ನಿಬಂಧನೆಗಳು:
  1. ಪಾಸುದಾರರು ಪ್ರಯಾಣ ಮಾಡುವಾಗ ಪಾಸನ್ನು ಜೊತೆಯಲ್ಲಿಟ್ಟು  ಪ್ರಯಾಣಿಸಬೇಕು. ನಿರ್ವಾಹಕರು /  ಚಾಲಕರು / ತನಿಖಾ ಸಿಬ್ಬಂದಿಗಳು ಕೇಳಿದಲ್ಲಿ ತೋರಿಸಬೇಕು.




Last updated date 01-03-2020 03:15 AM
Sort by:
Relevance
Relevance
Date