ಸುದ್ದಿ ಮತ್ತು ಘಟನೆಗಳು


ಗೋವಾ ರಾಜ್ಯಕ್ಕೆ ಕೆಎಸ್‌ಆರ್‌ಟಿಸಿ ಅಂತರರಾಜ್ಯ ಸೇವೆಯನ್ನು ಮರು ಪ್ರಾರಂಭಿಸುವುದು ಪತ್ರಿಕಾ ಪ್ರಕಟಣೆ

Read More...

ಕೆ ಎಸ್ ಆರ್ ಟಿ ಸಿ ಯ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ "ಸ್ತ್ರೀ ಶೌಚಾಲಯ" ಪ್ರಾರಂಭ

Read More...

ಆದ್ಯ ಗಮನಕ್ಕೆ !!!

ಕೆ ಎಸ್ ಆರ್ ಟಿ ಸಿ ಯಲ್ಲಿ ಉದ್ಯೋಗಗಳಿಗಾಗಿ ನಕಲಿ ನೇಮಕಾತಿ ಆದೇಶದ ಬಗ್ಗೆ ಎಚ್ಚರವಹಿಸಿ

ಆದ್ಯ ಗಮನಕ್ಕೆ !!!

ಕರ್ನಾಟಕ ರಾಜ್ಯ ಸರ್ಕಾರದ ಆದೇಶದ ಪ್ರಕಾರ,  ಇತರ  ರಾಜ್ಯಗಳಿಂದ  ಕರ್ನಾಟಕಕ್ಕೆ ಬರುವ  ಎಲ್ಲಾ ಪ್ರಯಾಣಿಕರು 
ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. 
( https://sevasindhu.karnataka.gov.in)   ನೋಂದಣಿ ಪುರಾವೆಗಳನ್ನು ಬಸ್ ಹತ್ತುವ ಮೊದಲು ಕೆಎಸ್‌ಆರ್‌ಟಿಸಿ 
ಸಿಬ್ಬಂದಿಗಳಿಗೆ ತೋರಿಸುವುದು ಕಡ್ಡಾಯವಾಗಿರುತ್ತದೆ, ಇಲ್ಲದಿದ್ದರೆ ಪ್ರಯಾಣವನ್ನು ನಿರಾಕರಿಸಲಾಗುವುದು.
 
ಕರ್ನಾಟಕದಿಂದ ಆಂಧ್ರ ಪ್ರದೇಶಕ್ಕೆ ಮತ್ತು ಆಂಧ್ರ ಪ್ರದೇಶದಿಂದ ಕರ್ನಾಟಕಕ್ಕೆ 
ಪ್ರಯಾಣಿಸುವ  ಪ್ರಯಾಣಿಕರು 
ಪ್ರಯಾಣದ ಅವಧಿಯಲ್ಲಿ ಆಧಾರ್ ಕಾರ್ಡ್ ಅನ್ನು ತಮ್ಮಬಳಿ ಕಡ್ಡಾಯವಾಗಿ  ಹೊಂದಿರಬೇಕಾಗಿರುತ್ತದೆ.

ಪತ್ರಿಕಾ ಪ್ರಕಟಣೆ.

  ದಿನದ  ಸಂಕ್ಷಿಪ್ತ ಮಾಹಿತಿ: #ಕೆಎಸ್ ಆರ್ ಟಿ ಸಿ-COVID 19 


*ವ್ಯವಸ್ಥಾಪಕ‌ ನಿರ್ದೇಶಕರು,‌ ನಿಗಮದ‌ ಚಾಲನಾ ಸಿಬ್ಬಂದಿಗಳಿಗೆ mask ಅನ್ನು ವಿತರಿಸಲು ಸೂಚಿಸಿರುತ್ತಾರೆ .
 
* ಇಂದಿನವರೆಗಿನ ನಿಗಮದ ಒಟ್ಟು ನಷ್ಟ ರೂ.5.30 ಕೋಟಿ
 
* ಇಂದಿನ  ಬಸ್ಸುಗಳ ಅನುಸೂಚಿಗಳ ರದ್ದತಿ 818
 
* ಅವತಾರ್ ಟಿಕೇಟ್ ಬುಕ್ಕಿಂಗ್  ( ಆನ್ ಲೈನ್) ಪ್ರತಿದಿನದ  5500 ಕ್ಕೆ ಕುಸಿದಿದೆ ( ಈ ಹಿಂದೆ ಪ್ರತಿದಿನ 22000-23000ಗಳಿತ್ತು)
 
* ಬಸ್ಸುಗಳ ಸ್ವಚ್ಚತಾ ಕಾರ್ಯ ಹಾಗೂ fumigation ಕಾರ್ಯ ಗಳನ್ನು ಪರಿಣಾಮಕಾರಿಗೊಳಿಸಲಾಗಿದೆ.
 
* Sanitizer ಮತ್ತು‌ ಇತರೆ ಅವಶ್ಯಕ ಸಾಮಾಗ್ರಿಗಳನ್ನು ಕಡ್ಡಾಯವಾಗಿ ಘಟಕಗಳಲ್ಲಿ ಇಡಲು ಸೂಚಿಸಲಾಗಿದೆ.

* ಇಂದು ರಾತ್ರಿಯಿಂದ ಜಾರಿಗೆ ಬರುವಂತೆ (ದಿನಾಂಕ: 18.03.2020 )ನಿಗಮದ‌ ಪ್ರತಿಷ್ಠಿತ ವಾಹನಗಳಲ್ಲಿ ನೀಡಲಾಗುತ್ತಿರುವ Blanket and Bedspread ಗಳನ್ನು ತಾತ್ಕಾಲಿಕವಾಗಿ  ರದ್ದುಗೊಳಿಸಲಾಗುತ್ತಿದೆ ( COVID -19 ಸಂಬಂಧ). ಸಾರ್ವಜನಿಕರು ತಾವೇ Blanket and Bedspread ತೆಗೆದುಕೊಂಡು‌ ಬರಲು ಕೋರಲಾಗಿದೆ.
       
Read More...

ದಿನಾಂಕ: 18.03.2020 ರಿಂದ‌ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ‌ ಪ್ರತಿಷ್ಠಿತ ವಾಹನಗಳಲ್ಲಿ ನೀಡಲಾಗುತ್ತಿರುವ Blanket and Bedspread ಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುತ್ತಿದೆ (COVID -19 ಸಂಬಂಧ). ಸಾರ್ವಜನಿಕರು ತಾವೇ Blanket and Bedspread ತೆಗೆದುಕೊಂಡು‌ ಬರಲು ಕೋರಲಾಗಿದೆ.

ಕೆ.ಎಸ್.ಆರ್.ಟಿ.ಸಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ -2020

ದಿನಾಂಕ:10-03-2019 ಬೆಳಗ್ಗೆ 10.00 ಗಂಟೆಗೆ, ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಛೇರಿಯ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶ್ರೀ. ಲಕ್ಷಣ ಸಂಗಪ್ಪ ಸವದಿ, sಮಾನ್ಯ ಉಪ ಮುಖ್ಯಮಂತ್ರಿಗಳು, ಸಾರಿಗೆ ಇಲಾಖೆರವರು, ಶ್ರೀ.ಶಿವಯೋಗಿ ಸಿ. ಕಳಸದ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಶ್ರೀಮತಿ.ಕವಿತಾ ಎಸ್.ಮನ್ನಿಕೇರಿ, (ನಿರ್ದೇಶಕರು ಸಿಬ್ಬಂದಿ&ಪರಿಸರ), ಡಾ|| ರಾಮ್ ಸಪೆಟ್ ಭಾ.ಪೊ.ಸೇ, ನಿರ್ದೇಶಕರು (ಭದ್ರತಾ ಮತ್ತು ಜಾಗೃತಾ), ಕರಾರಸಾ ನಿಗಮ ಮತ್ತು ಶ್ರೀ ಹೇಮಂತ್ ಮಾದೇಗೌಡ, CSR ಮುಖ್ಯಸ್ಥರು, ನಿಗಮದ ಹಾಗೂ ಇನ್ನಿತರೆ ಅಧಿಕಾರಿಗಳ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.    


Read More...

ನಿಗಮದ ಬಸ್ಸುಗಳಲ್ಲಿ ನಿರಂತರವಾಗಿ ಪ್ರಯಾಣಿಸಿದ ಪ್ರಯಾಣಿಕರ2019 ರಲ್ಲಿ(FrequentTraveller Meet) ಸಭೆಯ ಬಗ್ಗೆ.  29-02-2020

ದಿನಾಂಕ: 29.02.2020ರಂದು ಕೆಎಸ್‍ಆರ್‍ಟಿಸಿ ಕೆಂದ್ರಕಛೇರಿಯಲ್ಲಿ ನಿರಂತರ ಪ್ರಯಾಣಿಕರ (FrequentTraveller Meet) ಸಭೆಯಲ್ಲಿ ನಿರ್ದೇಶಕರು (ಭದ್ರತಾ ಮತ್ತು ಜಾಗೃತಾ) ಡಾ|| ರಾಮ್ ನಿವಾಸ್ ಸಪೆಟ್ ಭಾ.ಪೊ.ಸೇ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.                      

Read More...

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅನಂತಪುರಕ್ಕೆ ಫ್ಲೈ ಬಸ್ ಸಾರಿಗೆಯನ್ನು ಹೊಸದಾಗಿ ಪ್ರಾರಂಭಿಸಿ ದಿನಾಂಕ 13-03-2020ರಿಂದ ಕಾರ್ಯಾಚರಣೆ ಮಾಡಲಾಗುತ್ತದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅನಂತಪುರಕ್ಕೆ ಫ್ಲೈ ಬಸ್ ಸಾರಿಗೆಯನ್ನು ಹೊಸದಾಗಿ ಪ್ರಾರಂಭಿಸಿ ದಿನಾಂಕ 13-03-2020ರಿಂದ ಕಾರ್ಯಾಚರಣೆ ಮಾಡಲಾಗುತ್ತದೆ.
Read More...

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಪ್ರಯಾಣ ದರ ಪರಿಷ್ಕರಣೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಉತ್ತಮ, ಮಿತವ್ಯಯಕರ ಹಾಗೂ ನಂಬಲರ್ಹವಾದ ಸಾರಿಗೆ ಸೌಲಭ್ಯವನ್ನು ಒದಗಿಸಿ ದೇಶದಲ್ಲಿಯೇ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುತ್ತದೆ. ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ನೂತನ ಮಾದರಿಯ ಹೊಸ ಬಸ್ಸುಗಳ ಅಳವಡಿಕೆ, ಹೊಸ ಘಟಕ ಮತ್ತು ಬಸ್ ನಿಲ್ದಾಣಗಳ ನಿರ್ಮಾಣ, ನೂತನ ತಂತ್ರಜಾÐನ ಅಳವಡಿಕೆ ಮತ್ತು ಬಸ್ ನಿಲ್ದಾಣಗಳ ನವೀಕರಣಗಳ ನಿರ್ಧಿಷ್ಟ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿರುತ್ತದೆ.  ನಿಗಮದ ಒಟ್ಟು ಕಾರ್ಯಾಚರಣೆಯ ಮೂರನೇ ಒಂದು ಭಾಗದಷ್ಟು ಸೇವೆಗಳು ಸಾಮಾನ್ಯ ಸೇವೆಗಳಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿರುತ್ತವೆ. ಇದಲ್ಲದೆ ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ಅಂಧರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಹಿರಿಯ ನಾಗರೀಕರಿಗೆ ರಿಯಾಯಿತಿ/ ಉಚಿತ ಪಾಸುಗಳನ್ನು/ ರಿಯಾಯಿತಿ ಪ್ರಯಾಣದರವನ್ನು ನೀಡಲಾಗುತ್ತಿದೆ. ನಿಗಮವು ಒದಗಿಸುತ್ತಿರುವ ಸಾರಿಗೆ ಸೇವೆಗಳು ಪ್ರಗತಿದಾಯಕವಾಗಿ ಸುಧಾರಣೆಯಾಗಿದ್ದು ತತ್ಪರಿಣಾಮವಾಗಿ ನಿಗಮದ ಸೇವೆಗಳಿಗೆ ಬೇಡಿಕೆಯು ಹೆಚ್ಚಾಗಿರುತ್ತದೆ.  
Read More...

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮದ ವತಿಯಿಂದ 300 ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ  

ದಿನಾಂಕ 21.02.2020 ರಂದು ಶಿವರಾತ್ರಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 20.02.2020 ಹಾಗೂ 21.02.2020 ರಂದು ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 300 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ದಿನಾಂಕ: 23.02.2020ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು.
Read More...

ಬೆಂಗಳೂರು-ಚೆನ್ನೈ ವಯಾ ಹೊಸೂರು ಮಾರ್ಗದಲ್ಲಿ ಕಾರ್ಯಾಚರಣೆಯಾಗುತ್ತಿರುವ  ಐರಾವತ ಕ್ಲಬ್ ಕ್ಲಾಸ್ ಸಾರಿಗೆಯನ್ನು ಮೇಲ್ದರ್ಜೆಗೇರಿಸಿ ಅಂಬಾರಿ ಡ್ರೀಮ್ ಕ್ಲಾಸ್ ಸಾರಿಗೆಯನ್ನು ಕಾರ್ಯಾಚರಣೆ ಮಾಡುವ ಬಗ್ಗೆ.  

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಚೆನ್ನೈ ವಯಾ ಹೊಸೂರು ಮಾರ್ಗದಲ್ಲಿ ಕಾರ್ಯಾಚರಣೆಯಾಗುತ್ತಿರುವ ಐರಾವತ ಕ್ಲಬ್ ಕ್ಲಾಸ್ ಸಾರಿಗೆಯನ್ನು ಮೇಲ್ದರ್ಜೆಗೇರಿಸಿ, ದಿನಾಂಕ 14/02/2020 ರಿಂದ ಜಾರಿಗೆ ಬರುವಂತೆ ಅಂಬಾರಿ ಡ್ರೀಮ್ ಕ್ಲಾಸ್ (ಮಲ್ಟಿಆಕ್ಸಲ್ ಎ.ಸಿ ಸ್ಲೀಪರ್) ಸಾರಿಗೆಯನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
Read More...

ಕೆ.ಎಸ್.ಆರ್.ಟಿ.ಸಿ ಗೆ ಸಾಮಾಜಿಕ ಕಳಕಳಿ ವರ್ಗದಡಿ ರಾಪ್ಟ್ರೀಯ ಸಾರ್ವಜನಿಕ ಸಾರಿಗೆ ಪ್ರಶಸ್ತಿ ಹಾಗೂ ರೂ 5ಲಕ್ಷ ನಗದು ಪುರಸ್ಕಾರ


ನವದೆಹಲಿ ದಿನಾಂಕ: 31ನೇ ಜನವರಿ2020: “ಸ್ವಚ್ಛತೆಯೇ ಸೇವೆ ಉಪಕ್ರಮಕ್ಕೆ” ಕೆಎಸ್‍ಆರ್‍ಟಿಸಿಗೆ ಸಾಮಾಜಿಕ ಕಳಕಳಿ ವರ್ಗದಡಿ ರಾಪ್ಟ್ರೀಯ ಸಾರ್ವಜನಿಕ ಸಾರಿಗೆ ಪ್ರಶಸ್ತಿ- 2019 ಅನ್ನು ನವದೆಹಲಿಯ ಮಾಣೆಕ್ ಷಾ ಸೆಂಟರ್‍ನಲ್ಲಿ ನಡೆದಎ.ಎಸ್.ಆರ್.ಟಿ.ಯುವಿನ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಜನರಲ್ (ಡಾ)ವಿಜಯ್‍ಕುಮಾರ್ ಸಿಂಗ್ PVSM, AVSM, YSM (Retd) ಮಾನ್ಯ ರಾಜ್ಯ ಸಚಿವರು, ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯ, ಭಾರತ ಸರ್ಕಾರರವರು, ಶ್ರೀ.ಶಿವಯೋಗಿ.ಸಿ.ಕಳಸದ,ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‍ಆರ್‍ಟಿಸಿರವರಿಗೆ ಪ್ರದಾನ ಮಾಡಿದರು.

Read More...

ಟಿಕೇಟ್‍ ಇಲ್ಲದೆ ಪ್ರಯಾಣಿಸಿದ 846 ಪ್ರಯಾಣಿಕರಿಗೆದಂಡ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೊದಲ ಬಾರಿಗೆ ಪ್ರತಿ ಸೋಮವಾರ ಅಧಿಕಾರಿಗಳೊಂದಿಗೆ ಹೆಚ್ಚುವರಿ ತನಿಖಾ ತಂಡಗಳನ್ನು ರಚಿಸಿ, ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕು ಗೊಳಿಸಿದೆ. ದಿನಾಂಕ:20.01.2020 & 27.01.2020 ರಂದು ಕ್ರಮವಾಗಿ 110 ಮತ್ತು 115 ತಂಡಗಳನ್ನು ರಚಿಸಿ, ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 5242 ವಾಹನಗಳನ್ನು ತನಿಖೆ ಗೊಳಪಡಿಸಿ 691 ಪ್ರಕರಣಗಳನ್ನು ಪತ್ತೆ ಹಚ್ಚಿ, 846 ಟಿಕೇಟ್ ರಹಿತ ಪ್ರಯಾಣಿಕರಿಂದ 1,14,408/-ರೂ. ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಿರುತ್ತಾರೆ. ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 13,544/-ರೂ. ಗಳನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಹಾಗೂ ತಪ್ಪಿತಸ್ಥರ ವಿರುದ್ದ ಇಲಾಖಾ ರೀತ್ಯಾ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಲಾಗಿದೆ.

Read More...

ಗಣರಾಜ್ಯೋತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭ

ಕರಾರಸಾನಿಗಮದ ಕೇಂದ್ರ ಕಛೇರಿಯಲ್ಲಿ  ಶ್ರೀ ಶಿವಯೋಗಿ.ಸಿ.ಕಳಸದ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು ಸಮಸ್ತ ಸಿಬ್ಬಂದಿಗಳಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು ಮತ್ತು ಕೇಂದ್ರಕಛೇರಿಯ ನೌಕರರು ಮತ್ತು ಅಧಿಕಾರಿಗಳ ಅರ್ಹ ಮಕ್ಕಳಿಗೆ ನಗದು ಪುರಸ್ಕಾರ ವಿತರಿಸಿದರು 

Read More...

ಪತ್ರಿಕಾ ಪ್ರಕಟಣೆ: ಕ.ರಾ.ರ.ಸಾ.ನಿಗಮದಲ್ಲಿ ತಾಂತ್ರಿಕ ಸಹಾಯಕ ಹಾಗೂ ಭದ್ರತಾ ರಕ್ಷಕ ಹುದ್ದೆಗಳಿಗೆ ಕರೆ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವ ಕುರಿತು

Read More...

ಭಾರಿ ವಾಹನ ಚಾಲನೆ ಕುರಿತು ಕ.ರಾ.ರ.ಸಾ. ನಿಗಮದಿಂದ ಉಚಿತ ತರಬೇತಿ ನೀಡುವ ಬಗ್ಗೆ

ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮವು 2019-20ನೇ ಸಾಲಿನ ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ WWW.kaushalkar.com  ವೆಬ್‍ಸೈಟ್‍ನಲ್ಲಿ ನೊಂದಣಿ ಮಾಡಿಕೊಂಡು ವಸತಿ ಸಹಿತ ತರಬೇತಿ ಪಡೆಯಲು ಈ ಕೆಳಕಂಡ ಮೂಲ ದಾಖಲೆಗಳು ಹಾಗೂ 2 ಜೊತೆ ಜೆರಾಕ್ಸ್ ಪ್ರತಿ ಸಹಿತ ಕೂಡಲೇ ಹಾಜರಾಗಬಹುದಾಗಿದೆ.. 

Read More...

ಕ.ರಾ.ರ.ಸಾ.ನಿಗಮದಲ್ಲಿ ತಾಂತ್ರಿಕ ಸಹಾಯಕ ಹಾಗೂ ಭದ್ರತಾ ರಕ್ಷಕ ಹುದ್ದೆಗಳ ಭರ್ತಿ ಮಾಡಲು ದಿನಾಂಕ 02-02-2020 ರಂದು ನಡೆಸುವ ಸಾಮಾನ್ಯ ಸಾಮಥ್ರ್ಯ ಪರೀಕ್ಷೆ : ಹೆಚ್ಚಿನ ವಿವರಗಳಿಗಾಗಿ ವೀಕ್ಷಿಸಿ - http://kea.kar.nic.in/ksrtc/time_table.pdf

ಬೆಂಗಳೂರು-ನೆಲ್ಲೂರು, ಬೆಂಗಳೂರು-ರಾಯಚೂರು ವಯಾ ಮಂತ್ರಾಲಯ ಮಾರ್ಗಗಳಲ್ಲಿ ಹೊಸದಾಗಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡುವ ಬಗ್ಗೆ.


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ರಾಯಚೂರು ವಯಾ ಮಂತ್ರಾಲಯ, ಬೆಂಗಳೂರು-ನೆಲ್ಲೂರು ಮಾರ್ಗಗಳಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ (ಎ.ಸಿ ಸ್ಲೀಪರ್) ಸಾರಿಗೆಗಳನ್ನು ದಿನಾಂಕ 13/01/2020 ರಿಂದ  ಕಾರ್ಯಾಚರಣೆ ಮಾಡಲಾಗುತ್ತಿದೆ.

Read More...

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಾರಿಗೆಗಳಲ್ಲಿ ಮುಂಗಡ ಕಾಯ್ದಿರಿಸಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿದ್ಯುನ್ಮಾನ ಪ್ರತಿಯ(ಸಾಫ್ಟ್ ಕಾಪಿ) ಗುರುತಿನ ಚೀಟಿಯನ್ನು ಅನುಮತಿಸುತ್ತಿರುವ ಬಗ್ಗೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಪ್ರಯಾಣಿಕರ ಪ್ರಯಾಣವನ್ನು ಸುಗಮಗೊಳಿಸಲು ಆನ್‍ಲೈನ್ ಮೂಲಕ ಮುಂಗಡ ಕಾಯ್ದಿರಿಸುವ ವ್ಯವಸ್ಥೆಯನ್ನು ಒದಗಿಸಿರುತ್ತದೆ. ಆನ್‍ಲೈನ್‍ನಲ್ಲಿ ಮುಂಗಡ ಟಿಕೇಟು ಕಾಯ್ದಿರಿಸುವ ಪ್ರಯಾಣಿಕರಿಗೆ ಭೌತಿಕ ಗುರುತಿನ ಚೀಟಿ ಅಥವಾ ಪ್ರಯಾಣಿಕರು ಡಿಜಿಲಾಕರ್ ಆಪ್ (DigiLocker App) ಮುಖಾಂತರ ಹಾಜರುಪಡಿಸುವ ಆಧಾರ್, ಪಾನ್‍ಕಾರ್ಡ್ ಹಾಗೂ ಚಾಲನಾ ಪರವಾನಗಿ ಗುರುತಿನ ಚೀಟಿ (ಸಾಫ್ಟ್ ಪ್ರತಿ) ಗಳನ್ನು ಇ-ಟಿಕೇಟ್/ಎಂ-ಟಿಕೇಟ್ ಜೊತೆಗೆ ಪ್ರಯಾಣದ ಸಮಯದಲ್ಲಿ ಅಗತ್ಯ ಪುರಾವೆಯಾಗಿ ಮಾನ್ಯ ಮಾಡಲಾಗುವುದು. 

Read More...

ಕೆ.ಎಸ್.ಆರ್.ಟಿ.ಸಿ ಯ ವಿವಿಧ ಮಾದರಿಯ ನೂತನ ಬಸ್ಸುಗಳ ಉದ್ಘಾಟನೆ

ದಿನಾಂಕ:7.01.2020ರಮಂಗಳವಾರದಂದು ಬೆಳಿಗ್ಗೆ10.00ಕ್ಕೆ ವಿಧಾನ ಸೌಧ ಮುಂಭಾಗ, ಗ್ರಾಂಡ್ ಸ್ಟೆಪ್ಸ್ ನಲ್ಲಿ ಕೆ.ಎಸ್.ಆರ್.ಟಿ.ಸಿಯ ವಿವಿಧಮಾದರಿಯ 20 ನೂತನ ಬಸ್ಸುಗಳಉದ್ಘಾಟನಾ ಸಮಾರಂಭವನ್ನು, ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಮಾನ್ಯ ಉಪ ಮುಖ್ಯಮಂತ್ರಿಗಳು, ಹಾಗೂ ಸಾರಿಗೆ ಮತ್ತು ಕೃಷಿ ಸಚಿವರು,ನೆರವೇರಿಸಲಿದ್ದಾರೆ.

Read More...   Photos...

ದಿನಾಂಕ:06/01/2020 ರಂದು ಕ.ರಾ.ರ.ಸಾ.ನಿಗಮದ ಚಾಲಕ/ನಿರ್ವಾಹಕರಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ (Oral Cancer  )ಬಾಯಿ ಮತ್ತು ಗಂಟಲು ಕ್ಯಾನ್ಸರ್ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದಿನಾಂಕ:06/01/2020 ರಂದು ಕ.ರಾ.ರ.ಸಾ.ನಿಗಮದ ಕೇಂದ್ರಕಛೇರಿಯಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ನಿಗಮದ 17 ವಿಭಾಗಗಳ ಸುಮಾರು 150 ಚಾಲಕ/ನಿರ್ವಾಹಕರಿಗೆ (Oral Cancer) ಬಾಯಿ ಮತ್ತು ಗಂಟಲು ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Read More...

ಶ್ರೀ. ಶಿವಯೋಗಿ ಸಿ.ಕಳಸದ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆ.ಎಸ್.ಆರ್.ಟಿ‌.ಸಿ ರವರು ಸಮಸ್ತ ಅಧಿಕಾರಿ/ಸಿಬ್ಬಂದಿಗಳಿಗೆ ಹೊಸವರುಷ -2020ರ ಶುಭಾಶಯ ತಿಳಿಸಿದರು.

ಶ್ರೀ. ಶಿವಯೋಗಿ ಸಿ.ಕಳಸದ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆ ಎಸ್ ಆರ್ ಟಿ‌ ಸಿ ರವರು ಕೇಂದ್ರ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಗಮದ ಸಮಸ್ತ ಅಧಿಕಾರಿ/ಸಿಬ್ಬಂದಿಗಳಿಗೆ ಹೊಸವರುಷ -2020ರ ಶುಭಾಶಯ ತಿಳಿಸಿದರು.

Read More...

ಭಾರಿ ವಾಹನ ಚಾಲನೆ ಕುರಿತು ಕ.ರಾ.ರ.ಸಾ. ನಿಗಮದಿಂದ ಉಚಿತ ತರಬೇತಿ ನೀಡುವ ಬಗ್ಗೆ

ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮವು 2019-20ನೇ ಸಾಲಿನ ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ WWW.kaushalkar.com  ವೆಬ್‍ಸೈಟ್‍ನಲ್ಲಿ ನೊಂದಣಿ ಮಾಡಿಕೊಂಡು ವಸತಿ ಸಹಿತ ತರಬೇತಿ ಪಡೆಯಲು ಈ ಕೆಳಕಂಡ ಮೂಲ ದಾಖಲೆಗಳು ಹಾಗೂ 2 ಜೊತೆ ಜೆರಾಕ್ಸ್ ಪ್ರತಿ ಸಹಿತ ಕೂಡಲೇ ಹಾಜರಾಗಬಹುದಾಗಿದೆ.. 

Read More...

ಓಂ ಶಕ್ತಿ ದೇವಸ್ಥಾನಕ್ಕೆ ಸಾಂದರ್ಭಿಕಒಪ್ಪಂದದ ಮೇಲೆ ವಿಶೇಷ ಬಸ್ಸುಗಳನ್ನು ಒದಗಿಸುವ ಬಗ್ಗೆ.

ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮವು ತಮಿಳುನಾಡಿನ ಮೇಲ್‍ಮರವತ್ತೂರು ಓಂ ಶಕ್ತಿ ದೇವಸ್ಥಾನಕ್ಕೆ ಸಾಂದರ್ಭಿಕಒಪ್ಪಂದದ ಮೇಲೆ ಬಸ್ಸುಗಳನ್ನು ಒದಗಿಸಲು ವಿಶೇಷ ವ್ಯವಸ್ಥೆ ಮಾಡಿರುತ್ತದೆ. ಈ ಸಂಬಂಧ ಭಕ್ತಾಧಿಗಳ ಅನುಕೂಲಕ್ಕಾಗಿ ಬೆಂಗಳೂರು ನಗರದಲ್ಲಿಕೆಂಪೆಗೌಡ ಬಸ್ ನಿಲ್ದಾಣದಲ್ಲಿ (ಮೊ.ಸಂ.7760990535), ಮೈಸೂರುರಸ್ತೆ ಬಸ್ ನಿಲ್ದಾಣದ ಘಟಕ-5, 6 ರಲ್ಲಿ ವಿಶೇಷ ಕೌಂಟರ್‍ಗಳನ್ನು ತೆರೆಯಲಾಗಿರುತ್ತದೆ. 

Read More...

ಮಂಗಳೂರು - ಹೈದರಾಬಾದ್ ಮಾರ್ಗದಲ್ಲಿ ಮಲ್ಟಿಆಕ್ಸಲ್ ಸೇವೆಯಿಂದ ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿಆಕ್ಸಲ್ ಎ.ಸಿ ಸ್ಲೀಪರ್ ಸೇವೆಗೆ ಉನ್ನತೀಕರಿಸಿರುವ ಬಗ್ಗೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು  ಸಾರ್ವಜನಿಕ ಪ್ರಯಾಣಿಕರ  ಅನುಕೂಲಕ್ಕಾಗಿ  ದಿನಾಂಕ 01/12/2019 ರಿಂದ 1500 ಘಂಟೆಗೆ ಮಂಗಳೂರು - ಹೈದರಾಬಾದ್ ಮಾರ್ಗದಲ್ಲಿ ಮಲ್ಟಿಆಕ್ಸಲ್ ಸೇವೆಯಿಂದ ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿಆಕ್ಸಲ್ ಎ.ಸಿ ಸ್ಲೀಪರ್ ಸೇವೆಗೆ ಉನ್ನತೀಕರಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ.              ಈ ಕೆಳಕಂಡ ವೇಳಾಪಟ್ಟಿಯಂತೆ ಪ್ರಾರಂಭಿಸಲಾಗಿದೆ.
ಮಂಗಳೂರು ಇಂದ 1501 ಘಂಟೆಗೆ , ಉಡುಪಿ ಇಂದ 1601 ಘಂಟೆಗೆ , ಕುಂದಾಪುರ ಇಂದ 1700 ಘಂಟೆಗೆ

ಕೆ.ಎಸ್‍.ಆರ್.ಟಿ.ಸಿ ಗೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ರೋಲಿಂಗ್ ಶೀಲ್ಡ್‍ನೊಂದಿಗೆ ಪ್ರಶಸ್ತಿ-2019 

ದಿನಾಂಕ:6ನೇ,ಡಿಸೆಂಬರ್ 2019: ವಿಧಾನಸೌಧÀ, ಬ್ಯಾಂಕ್ವೆಟ್ ಹಾಲ್ ಬೆಂಗಳೂರು: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಸಮಾರಂಭದಲ್ಲಿರಾಜ್ಯದ ಸರ್ಕಾರಿ ಸಂಸ್ಥೆಗಳ ಪೈಕಿಅತೀ ಹೆಚ್ಚು ಸÀಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹಣಾ ಪ್ರಶಸ್ತಿಯುಕೆಎಸ್‍ಆರ್‍ಟಿಸಿಗೆ ಲಭಿಸಿರುತ್ತದೆ.ನಿಗಮವು ಸತತ5ನೇ ಬಾರಿಗೆ ಸದರಿ ಪ್ರಶಸ್ತಿಯನ್ನು ಪಡೆಯುತ್ತಿದೆ.

Read More...

ದಿನಾಂಕ: 06/12/2019 ರಂದು ಶ್ರೀ.ಶಿವಯೋಗಿ ಸಿ.ಕಳಸದ ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ಕೆ ಎಸ್ ಆರ್ ಟಿ‌ ಸಿ ರವರು , ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಷ್ ಮಾಡಿ ಮುರುಬಳಕೆ ಮಾಡುವ ಯಂತ್ರವನ್ನು ಉದ್ಘಾಟಿಸಿದರು.

ಸದರಿ ಯಂತ್ರವು ಪ್ರತಿ ದಿನ ಕನಿಷ್ಠ 4500 ಪ್ಲಾಸ್ಟಿಕ್ ಬಾಟಲಿಗಳನ್ನು ಕ್ರಷ್ ಮಾಡಲಿದ್ದು, ಒಂದು ವರ್ಷಕ್ಕೆ 17.2 ಟನ್ ಪ್ಲಾಸ್ಟಿಕ್ ತ್ಯಾಜ್ಯ ಈ ಯಂತ್ರದಿಂದ  ಮರುಬಳಕೆ ಆಗಲಿದೆ. ಇದರಿಂದ ರಸ್ತೆ , ಶೌಚಾಲಯದ ಕ್ಯಾಬಿನ್ , ಕಸದ ಬುಟ್ಟಿಗಳು, ದಿನಚರಿ ಪುಸ್ತಕ, ಟಿ - ಶರ್ಟ್ ಗಳನ್ನು ತಯಾರಿಸಲಾಗಿತ್ತದೆ.

ಸದರಿ ಯಂತ್ರವು 4.3 ಲಕ್ಷ ವಾಗಿದ್ದು, ಗ್ರೀನ್ ಸೈಕ್ಲೋ ಪಾಸ್ಟ್ ಮತ್ತು ಸ್ಪರ್ಶ ಮಸಾಲಾ ರವರ ಅSಖ ( ಸಾಮಾಜಿಕ ಹೊಣೆಗಾರಿಕೆ) ಯಡಿ ಕಾರ್ಯಗತಗೊಳಿಸಲಾಗಿದೆ. ನಿಗಮವು ಉಚಿತ ಸ್ಥಳಾವಕಾಶ ಮತ್ತು ವಿದ್ಯುತ್ ವೆಚ್ಚವನ್ನು ಭರಿಸಲಿದೆ.  ನಿಗಮವು ಪರಿಸರ ಸ್ನೇಹಿ ಕಾರ್ಯಕ್ರಮಗಳಡಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.

ಈ ಸಂದರ್ಭದಲ್ಲಿ ಶ್ರೀಮತಿ.ಕವಿತಾ ಎಸ್. ಮನ್ನಿಕೇರಿ, ಭಾಆಸೇ, ನಿರ್ದೇಶಕರು (ಸಿಬ್ಬಂದಿ& ಪರಿಸರ), ಕೆ ಎಸ್ ಆರ್ ಟಿ‌ಸಿ, ಶ್ರೀ.ರಘುರಾಮ್ , ಶ್ರೀ.ಜಾನ್ ಡಿಸೋಜಾ, ಶ್ರೀ.ರಂಗಪ್ರಸಾದ್ , ನಿರ್ದೇಶಕರುಗಳು, ಗ್ರೀನ್ ಸೈಕ್ಲೋಪಾಸ್ಟ್, ಶ್ರೀ.ಶಿವಪ್ರಸಾದ್, ವ್ಯವಸ್ಥಾಪಕ ನಿರ್ದೇಶಕರು, ಸ್ಪರ್ಶ್ ಮಸಾಲಾ ,ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು..

Read More...

ಬೆಂಗಳೂರು-ಪಂಪಾ (ಶಬರಿಮಲೈ) ಮಾರ್ಗದಲ್ಲಿ ರಾಜಹಂಸ ಹಾಗೂ ವೋಲ್ವೋ ವಾಹನಗಳನ್ನು ದಿನಾಂಕ 01/12/2019 ರಿಂದ ಕಾರ್ಯಾಚರಣೆ ಮಾಡುವ ಬಗ್ಗೆ. 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ  ಅನುಕೂಲಕ್ಕಾಗಿ  ದಿನಾಂಕ 01/12/2019 ರಿಂದ ಹೊಸದಾಗಿ ಬೆಂಗಳೂರು-ಪಂಪಾ (ಶಬರಿಮಲೈ) ಮಾರ್ಗದಲ್ಲಿ ರಾಜಹಂಸ ಹಾಗೂ ವೋಲ್ವೋ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಕೆಳಕಂಡ ವೇಳಾಪಟ್ಟಿಯಂತೆ ಪ್ರಾರಂಭಿಸಲಾಗಿದೆ.

Read More...

ಕೆ.ಎಸ್‍.ಆರ್.ಟಿ.ಸಿ. ಯಲ್ಲಿ, ಶ್ರೀ.ಜಯಚಾಮರಾಜೇಂದ್ರ ಒಡೆಯರ್ ಜನ್ಮ ಶತಮಾನೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭ

 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕನ್ನಡ ಕ್ರಿಯಾ ಸಮಿತಿ, ಬೆಂಗಳೂರು ಕೇಂದ್ರಿಯ ವಿಭಾಗರವರು, ಘಟಕ ೨ ರಲ್ಲಿ  ಶ್ರೀ.ಜಯಚಾಮರಾಜೇಂದ್ರ ಒಡೆಯರ್ ಜನ್ಮ ಶತಮಾನೋತ್ಸವ  ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು  ಆಯೋಜಿಸಿದ್ದರು. ಶ್ರೀ.ಯದುವೀರ್‌ ಕೃಷ್ಣ ದತ್ತ ಚಾಮರಾಜ ಒಡೆಯರು‌, ಮೈಸೂರು ರಾಜವಂಶಸ್ಥರು, ಕಾರ್ಯಕ್ರಮವನ್ನು ಉದ್ಘಾಟಿಸಿದರು.
 ಶ್ರೀ.ಶಿವಯೋಗಿ ಸಿ.ಕಳಸದ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆ ಎಸ್ ಆರ್ ಟಿ‌ ಸಿ, ಅಧ್ಯಕ್ಷತೆ ವಹಿಸಿದ್ದರು.
* ಈ ಸಂದರ್ಭದಲ್ಲಿ , ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
* ಶ್ರೀ. ಜಯಚಾಮರಾಜ ಒಡೆಯರ್ ಹಾಗೂ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಲಾಯಿತು.
* ನೇತ್ರದಾನ ನೋಂದಣಿ‌ ಅಭಿಯಾನವನ್ನು‌ ಸಹ ಹಮ್ಮಿಕೊಳ್ಳಲಾಗಿತ್ತು.
* ಶ್ರೀ.ಯದುವೀರ್‌ ಕೃಷ್ಣ ದತ್ತ ಚಾಮರಾಜ ಒಡೆಯರು‌, ಮೈಸೂರು ರಾಜವಂಶಸ್ಥರು, ಅಂಬಾರಿ ಡ್ರೀಮ್ ಕ್ಲಾಸ್ ಬಸ್ಸಿನ ವೀಕ್ಷಣೆ ನಡೆಸಿ ಬಸ್ಸಿನ ಹೆಸರು ಅಂಬಾರಿ ಮೈಸೂರು ಸಂಸ್ಥಾನದ ನೆನಪನ್ನು ಮರುಕಳಿಸುವಂತಿದೆ ಎಂದು ತಿಳಿಸಿ ಬಸ್ಸಿನ ಬಗ್ಗೆ ಮೆಚ್ಚುಗೆ  ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ  ಸನ್ಮಾನ್ಯರಿಗೆ  ಸನ್ಮಾನ ಮಾಡಿ ಗೌರವ ಸೂಚಿಸಲಾಯಿತು.

Read More...

ಕೆ.ಎಸ್‍.ಆರ್.ಟಿ.ಸಿ.ಗೆ ಎಕನಾಮಿಕ್ಸ್ ಟೈಮ್ಸ್ ಗವರ್ನ್‍ಮೆಂಟ್. ಕಾಂ ಗ್ಲೋಬಲ್ ಸ್ಮಾರ್ಟ್ ಮೊಬಿಲಿಟಿ ಪ್ರಶಸ್ತಿ ದೊರೆತಿರುವ ಬಗ್ಗೆ..

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 16 ಸಣ್ಣ ಮತ್ತು ಮಧ್ಯಮ ನಗರ ಪಟ್ಟಣಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ನಗರ ಸಾರಿಗೆಯು, ಪ್ರತಿದಿನ 11075 ಟ್ರಿಪ್‍ಗಳಿಂದ, 5.10 ಲಕ್ಷ ಜನರಿಗೆ  ಸಾರಿಗೆ ಸೌಲಭ್ಯ ಒದಗಿಸುತ್ತಿದೆ.

Read More...

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಹಾಯವಾಣಿ ಸಂಖ್ಯೆ ಬದಲಾಗಿರುವ ಬಗ್ಗೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರಿಗಾಗಿ ಒದಗಿಸಿರುವ ಕಾಲ್ ಸೆಂಟರ್ ಸಹಾಯವಾಣಿ ಸಂಖ್ಯೆ: 080-49596666 ಬದಲಾಯಿಸಿ, ನೂತನ ಸಹಾಯವಾಣಿ ಸಂಖ್ಯೆ: 9449596666 ನ್ನು ದಿನಾಂಕ: 01.11.2019 ರಿಂದ ಜಾರಿಗೊಳಿಸಲು ತೀರ್ಮಾನಿಸಲಾಗಿರುತ್ತದೆ. 

Read More...

ಟಿಕೇಟ್‍ ಇಲ್ಲದೆ ಪ್ರಯಾಣಿಸಿದ 5858 ಪ್ರಯಾಣಿಕರಿಗೆದಂಡ.

ಸೆಪ್ಟಂಬರ್-2019ರ ಮಾಹೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 45884 ವಾಹನಗಳನ್ನು ತನಿಖೆಗೊಳಪಡಿಸಿ 4732 ಪ್ರಕರಣಗಳನ್ನು ಪತ್ತೆಹಚ್ಚಿ.

Read More...

ದೀಪಾವಳಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮದ ವತಿಯಿಂದ 1600 ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರ ಅನುಕೂಲಕ್ಕಾಗಿ  ದೀಪಾವಳಿ  ಹಬ್ಬದ ಪ್ರಯುಕ್ತ  1600 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
Read More...

ಪತ್ರಿಕಾ ಪ್ರಕಟಣೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2019-20ನೇ ಸಾಲಿನ ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ಭಾರಿ / ಲಘು ವಾಹನ ಚಾಲನಾ ತರಬೇತಿ ಮತ್ತು ತಾಂತ್ರಿಕ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

Read More...

ಪತ್ರಿಕಾ ಪ್ರಕಟಣೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2019-20 ನೇ ಸಾಲಿಗೆ ದಿನಾಂಕ 19-06-2019 ರಿಂದ ವಿದ್ಯಾರ್ಥಿ ಬಸ್ ಪಾಸುಗಳನ್ನು ನಿಗಮದ ಎಲ್ಲಾ ವಿಭಾಗಗಳಲ್ಲಿ ವಿತರಣೆ ಮಾಡಲಿದೆ. ವಿದ್ಯಾರ್ಥಿ ಬಸ್ ಪಾಸ್ ದರಗಳು ಕಳೆದ ವರ್ಷದ ಬಸ್ ಪಾಸ್ ದರಗಳನ್ನೇ ಈ ವರ್ಷವೂ ಮುಂದುವರಿಸಲಾಗಿದ್ದು ದರಗಳು ಈ ಕೆಳಕಂಡಂತಿವೆ.(Student bus pass rates are same as last year).

ಬೆಂಗಳೂರು-ಮುಂಡರಗಿ ಮಾರ್ಗದಲ್ಲಿ ಹೊಸದಾಗಿ ನಾನ್ ಎ.ಸಿ ಸ್ಲೀಪರ್ ಸಾರಿಗೆಯನ್ನು ಕಾರ್ಯಾಚರಣೆ ಮಾಡುವ ಬಗ್ಗೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಮುಂಡರಗಿ ಮಾರ್ಗದಲ್ಲಿ ಹೊಸದಾಗಿ ನಾನ್ ಎ.ಸಿ ಸ್ಲೀಪರ್ ಸಾರಿಗೆಯನ್ನು ಕಾರ್ಯಾಚರಣೆ ದಿನಾಂಕ 01-07-2019 ರಿಂದ ಮಾಡಲಾಗುತ್ತಿದೆ. ಈ ಕೆಳಕಂಡ ವೇಳಾಪಟ್ಟಿಯಂತೆ ಪ್ರಾರಂಭಿಸಲಾಗಿದೆ.

ಟಿಕೇಟ್‍ ಇಲ್ಲದೆ ಪ್ರಯಾಣಿಸಿದ 5950 ಪ್ರಯಾಣಿಕರಿಗೆದಂಡ.

ಮೇ-2019ರ ಮಾಹೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 44412 ವಾಹನಗಳನ್ನು ತನಿಖೆಗೊಳಪಡಿಸಿ 4632 ಪ್ರಕರಣಗಳನ್ನು ಪತ್ತೆಹಚ್ಚಿ.

ಪತ್ರಿಕಾ ಪ್ರಕಟಣೆ..

ಕರಾರಸಾನಿಗಮದ ವತಿಯಿಂದ ಶಾಲೆ/ ಪಿಯುಸಿ ವಿದ್ಯಾರ್ಥಿ ಪಾಸುದಾರರಿಗೆ ಹಿಂದಿನ ವರ್ಷದ ಪಾಸು ತೋರಿಸಿ ದಿನಾಂಕ 30.06.2019 ರವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು.

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಕುರಿತು

ದಿನಾಂಕ:06-06-2019 ರಂದು ಕರಾರಸಾನಿಗಮದ ಪ್ರಾದೇಶಿಕ ಕಾರ್ಯಾಗಾರ, ಕೆಂಗೇರಿ, ಬೆಂಗಳೂರಿನ ಆವರಣದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕ.ರಾರ.ಸಾ.ನಿಗಮವು ದಿನಾಂಕ:31.05.2019 ರಂದು ವಿಶ್ವ ತಂಬಾಕು ಮುಕ್ತ ದಿನಾಚರಣೆಯ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮ "ತಂಬಾಕನ್ನು ದೂರವಿಡಿ - ನಿಮ್ಮ ಉಸಿರನ್ನು ಕಾಪಾಡಿ.

ಡಾ.ಪಿ.ಎಸ್.ಹರ್ಷ, ಭಾಪೊಸೇ, ನಿರ್ದೇಶಕರು (ಭದ್ರತಾ&ಜಾಗೃತ), ಕರಾರಸಾ ನಿಗಮ ಹಾಗೂ ಶ್ರೀ. ಪಿ. ಆರ್.ಶಿವಪ್ರಸಾದ್, ಕಆಸೇ, ನಿರ್ದೇಶಕರು (ಸಿಬ್ಬಂದಿ & ಪರಿಸರ), ಕರಾರಸಾ ನಿಗಮ, ರವರೊಂದಿಗೆ ಚಾಲಕ ಮತ್ತು ನಿರ್ವಾಹಕರು ಸಿಗರೇಟು ಹಾಗೂ ತಂಬಾಕಿನ.

ಕರಾರಸಾನಿಗಮದ ವತಿಯಿಂದ ತ್ವರಿತವಾಗಿ ವಿಚಾರಣೆ ಮತ್ತು ಟಿಕೇಟ್ ಬುಕಿಂಗ್ ಸಹಾಯಕ್ಕಾಗಿ "ಚಾಟ್ಬೊಟ್ ಸಹಾಯವಾಣಿ".

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್ ಆರ್ ಟಿಸಿ) ವೆಬ್‍ಸೈಟ್ WWW.KSRTC.IN ಅತಿ ಹೆಚ್ಚು ಸಂದರ್ಶಿತ ವೆಬ್‍ಸೈಟ್‍ಗಳಲ್ಲಿ ಒಂದಾಗಿದ್ದು, ಸಾರ್ವಜನಿಕರು ವಿಚಾರಣೆ, ಮುಂಗಡ ಬುಕಿಂಗ್.

ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳೂರು, ದಾವಣಗೆರೆ, ಶಿವಮೊಗ್ಗ ಹಾಗೂ ಮೈಸೂರು - ತಿರುಪತಿ ಪ್ಯಾಕೇಜ್ ಟೂರ್‍ಗಳನ್ನು ಕಾರ್ಯಾಚರಣೆ ಪ್ರಾರಂಭಿಸಿರುವ ಬಗ್ಗೆ.

ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ತಿರುಪತಿ ಪ್ಯಾಕೇಜ್‍ಟೂರ್‍ನ್ನು ಆಂಧ್ರ ಪ್ರದೇಶ ಪ್ರವಾಸಅಭಿವೃದ್ಧಿ ಸಂಸ್ಥೆಯ ಸಹಭಾಗಿತ್ವದಲ್ಲಿ ಜಂಟಿಯಾಗಿ12.05.2017 ರಿಂದ ಪ್ರಾರಂಭಿಸಿತ್ತು.

ಟಿಕೇಟ್ ಇಲ್ಲದೆ ಪ್ರಯಾಣಿಸಿದ 5555 ಪ್ರಯಾಣಿಕರಿಗೆ ದಂಡ.

ಏಪ್ರಿಲ್-2019 ರ ಮಾಹೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 43144ವಾಹನಗಳನ್ನು ತನಿಖೆಗೊಳಪಡಿಸಿ 4380 ಪ್ರಕರಣಗಳನ್ನು ಪತ್ತೆಹಚ್ಚಿ, 5555 ಟಿಕೇಟ್ ರಹಿತ ಪ್ರಯಾಣಿಕರಿಂದ.

ಕೆ ಎಸ್ ಆರ್ ಟಿಸಿ ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಶಿವಯೋಗಿ ಸಿ. ಕಳಸದ, ಭಾಆಸೇ, ರವರು ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳಿಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಮುಖಾಂತರ ವಿಭಾಗಗಳ ಹಂಚಿಕೆ ಸಂದರ್ಭದಲ್ಲಿ ಅಭ್ಯರ್ಥಿಗಳೊಂದಿಗೆ ಮಾತು.

ಕೆಎಸ್ ಆರ್ ಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಶಿವಯೋಗಿ ಸಿ. ಕಳಸದ, ಭಾಆಸೇ, ರವರು, ದಿನಾಂಕ: 13-05-2019 ರಂದು ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳಿಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಮುಖಾಂತರ ವಿಭಾಗಗಳ ಹಂಚಿಕೆ ಕಾರ್ಯವನ್ನು ಪರಿವೀಕ್ಷಿಸಿದರು.

Last updated date 20 01-09-2020 03:15 AM
Custom Search

Sort by:
Relevance
Relevance
Date