ಸಾಂದರ್ಭಿಕ ಒಪ್ಪಂದದ ಬಸ್ಸು :

ಸಾರ್ವಜನಿಕರಿಗೆ ಟೂರ್, ಮದುವೆ ಇತ್ಯಾದಿ ಸಂದರ್ಭಗಳಿಗೆ ಹಾಗೂ ಶಾಲಾ/ಕಾಲೇಜುಗಳಿಗೆ ಟೂರ್ / ಪ್ರವಾಸಗಳಿಗೆ ಪ್ರತಿ ಕಿ.ಮೀ ಆಧಾರದ ಮೇಲೆ ಬಸ್ಸುಗಳನ್ನು ಆಚರಣೆ ಮಾಡುವುದನ್ನು ಸಾಂದರ್ಭಿಕ ಒಪ್ಪಂದ ಎಂದು ಕರೆಯಲಾಗುವುದು.

ದಿನಾಂಕ 07.03.2019 ರಿಂದ ಜಾರಿಯಲ್ಲಿರುವ ಸಾಂದರ್ಭಿಕ ಒಪ್ಪಂದದ ದರಗಳು :

ವಾರಾಂತ್ಯ ದಿನಗಳು (ಶುಕ್ರವಾರ ದಿಂದ ಭಾನುವಾರ) ವಾರದ ದಿನಗಳಲ್ಲಿ (ಸೋಮವಾರ ದಿಂದ ಗುರುವಾರ)
ಪ್ರತಿ ಕಿ.ಮೀ ದರ (ರೂ) ಪ್ರತಿ ಕಿ.ಮೀ ದರ (ರೂ)
ರಾಜ್ಯದೊಳಗೆ ಅಂತರರಾಜ್ಯ ರಾಜ್ಯದೊಳಗೆ ಅಂತರರಾಜ್ಯ
  ದಿನಕ್ಕೆ ಕನಿಷ್ಠ ಪ್ರಯಾಣದ ಕಿ.ಮೀ  ಪ್ರತಿ ಕಿ.ಮೀ ದರ  ಪ್ರತಿ ಕಿ.ಮೀ ದರ  ದಿನಕ್ಕೆ ಕನಿಷ್ಠ ಪ್ರಯಾಣದ ಕಿ.ಮೀ  ಪ್ರತಿ ಕಿ.ಮೀ ದರ   ಪ್ರತಿ ಕಿ.ಮೀ ದರ  
A B C D E F G H
ಕರ್ನಾಟಕ ಸಾರಿಗೆ (15.12.2019) 55 300 39 41 300 36 39
ರಾಜಹಂಸ-ಎಕ್ಸಿಕ್ಯೂಟೀವ್ 36 300 40 45 300 40 45
ರಾಜಹಂಸ 39 300 43 47 300 43 47
ರಾಜಹಂಸ - (12 ಮೀ.ಚಾಸಿಸ್) 44 300 45 49 300 45 49
ಮೈ.ನ.ಸಾ.ಸೆಮಿ-ಲೋ ಪ್ಲೋರ್ 42 250 37 NA 250 37 NA
ಮಿಡಿ ಬಸ್ 30 250 32 NA 250 32 NA
ವೋಲ್ವೋ ಸೆಮಿ ಸ್ಲೀಪರ್ Single Axle-Mark-III 45 400 59 64 400 59 59
ಮೈ.ನ.ಸಾ.ವೋಲ್ವೋ ಎ/ಸಿ 38 300 64 69 300 64 69
ಐರಾವತ ಕ್ಲಬ್‍ಕ್ಲಾಸ್ ಮಲ್ಟಿಆಕ್ಸೆಲ್ (BS-III) 47/49 500 70 77 500 65 70
ಸ್ಲೀಪರ್ ನಾನ್ ಎ/ಸಿ 32 400 53 58 400 53 58
ಸ್ಲೀಪರ್ ಎ.ಸಿ. 32 400 75 81 400 75 81
ಫ್ಲೈ ಬಸ್ 40 500 105 115 500 105 115
ಐರಾವತ ಕ್ಲಬ್‍ಕ್ಲಾಸ್ ಮಲ್ಟಿಆಕ್ಸೆಲ್ - 14.5 ಮೀಟರ್ ಚಾಸಿಸ್ 51 500 85 95 500 80 90

ಪ್ರಮುಖ ಷರತ್ತು ಮತ್ತು ನಿಬಂಧನೆಗಳು:

 • ವಾರದ ದಿನಗಳು ಸೋಮವಾರದಿಂದ ಗುರುವಾರದವರೆಗೆ ಪರಿಗಣಿಸಲಾಗುವುದು.
 • ವಾರಾಂತ್ಯದ ದಿನಗಳಿಗೆ(ಶುಕ್ರವಾರದಿಂದ ಭಾನುವಾರದವರೆಗೆ) ವಾರಾಂತ್ಯದ ದರಗಳನ್ನು ವಿಧಿಸಲಾಗುವುದು.
 • ಇದರ ಜೊತೆಗೆ ರೂ.50/- ಅಪಘಾತ ಪರಿಹಾರ ನಿಧಿ ಸಂಗ್ರಹಿಸಲಾಗುವುದು.
 • ಮಾನ್ಯತೆ ಪಡೆದ ಶಾಲೆ/ಕಾಲೇಜು ವಿದ್ಯಾರ್ಥಿಗಳಿಗೆ ಚಾಲ್ತಿಯಲ್ಲಿರುವ ದರಗಳಲ್ಲಿ ಪ್ರತಿ ಕಿ.ಮೀಗೆ ರೂ.2/- ರಿಯಾಯಿತಿಯನ್ನು ಅಂತರರಾಜ್ಯ ಒಪ್ಪಂದ ವಾಹನಗಳಿಗೂ ಸೇರಿದಂತೆ ಒದಗಿಸಲಾಗುವುದು.
 • ಕಿ.ಮೀಗಳನ್ನು ಆಚರಣಾ ಘಟಕದಿಂದ ವಾಪಸ್ಸು ಘಟಕಕ್ಕೆ ವಾಪಸ್ಸಾಗುವರೆಗೆ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು.
 • ಸಾಂದರ್ಭಿಕ ಒಪ್ಪಂದದ ಬಸ್ಸುಗಳನ್ನು ಕನಿಷ್ಠ 03 ದಿನಗಳ ಮುಂಚಿತವಾಗಿ ಕಾಯಿರಿಸಬೇಕು.
 • ಬಸ್ಸುಗಳನ್ನು ಲಭ್ಯತೆಗನುಗುಣವಾಗಿ ಒದಗಿಸಲಾಗುವುದು.
 • ಭದ್ರತಾ ಠೇವಣಿ ಒಟ್ಟಾರೆ ಆಚರಣೆಯ ಶೇ.20 ರಷ್ಟು ಮುಂಚಿತವಾಗಿ ಪಾವತಿಸಬೇಕು.
 • ಟೋಲ್ ಫೀ, ಎಂಟ್ರಿ ಫೀ, ಇತರೆ ಶುಲ್ಕಗಳನ್ನು ಒಪ್ಪಂದದಾರರೇ ಪಾವತಿಸಬೇಕು.
 • ಅಂತರರಾಜ್ಯ ಒಪ್ಪಂದಗಳಿದ್ದಲ್ಲಿ, ಪರ್ಮೀಟ್ ಶುಲ್ಕ ಹಾಗೂ ಇತ್ಯಾದಿ ಶುಲ್ಕಗಳನ್ನು ಒಪ್ಪಂದದಾರರೇ ಪಾವತಿಸಬೇಕು.
 • ಅಂತರರಾಜ್ಯ ಒಪ್ಪಂದಗಳಿಗೆ ಪ್ರಯಾಣಿಕರ ಪಟ್ಟಿಯನ್ನು ನೀಡುವುದು ಕಡ್ಡಾಯವಿರುತ್ತದೆ.
 • ಘಟಕದಿಂದ ಆಚರಣೆಯಾದ ಸಮಯದಿಂದ 24 ಗಂಟೆವರೆಗೆ ಒಂದು ದಿನಗಳೆಂದು ಪರಿಗಣಿಸಲಾಗುವುದು.
 • ತಡ ಆಚರಣೆಗೆ ಹೆಚ್ಚುವರಿ ದರ ವಿಧಿಸಲಾಗುವುದು.
 • ಹವಾನಿಯಂತ್ರಣರಹಿತ ಬಸ್ಸುಗಳಿಗೆ ಜಿಎಸ್‍ಟಿ ಶುಲ್ಕ ವಿಧಿಸಲಾಗುವುದಿಲ್ಲ ದಿನಾಂಕ 01.07.2017ರಿಂದ
 • ಹವಾನಿಯಂತ್ರಣ ಬಸ್ಸುಗಳಿಗೆ ಶೇ.5 ರಷ್ಟು ಜಿಎಸ್‍ಟಿ ಶುಲ್ಕ ವಿಧಿಸಲಾಗುವುದು. ದಿನಾಂಕ 01.07.2017 ರಿಂದ

Cancellation Rules:

ಸಾಂದರ್ಭಿಕ ಒಪ್ಪಂದದ ವಾಹನಗಳ ಬುಕಿಂಗ್ ರದ್ದುಗೊಳಿಸಿದಲ್ಲಿ ಕೆಳಕಂಡಂತೆ ಶುಲ್ಕ ಕಡಿತಗೊಳಿಸಲಾಗುವುದು.
ಒಪ್ಪಂದದ ಮೇಲೆ ಕಾಯ್ದಿರಿಸಿದ ವಾಹನ ರದ್ದುಪಡಿಸಿದ ಸಮಯ ರದ್ದುಪಡಿಸಿದಾಗ ವಿಧಿಸಬೇಕಾದ ರದ್ದತಿ ಶುಲ್ಕ
ವಾಹನ ಹೊರಡಬೇಕಾದ 24 ಗಂಟೆಗಳ ಮೊದಲು ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ ಒಪ್ಪಂದದ ಮೇಲೆ ನೀಡಲಾಗುವ ವಾಹನಕ್ಕೆ ಒಂದು ದಿನಕ್ಕೆ ವಿಧಿಸುವ ಕನಿಷ್ಠ ದರದ ಶೇ.10ರಷ್ಟು + ಅಂತರ ರಾಜ್ಯ ಪರ್ಮಿಟ್ ಶುಲ್ಕವೇನಾದರೂ ಇದ್ದರೆ ಅದರ ಮೊತ್ತ.
ವಾಹನ ಹೊರಡಬೇಕಾದ 1 ಗಂಟೆಯ ಮೊದಲು ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ ಒಪ್ಪಂದದ ಮೇಲೆ ನೀಡಲಾಗುವ ವಾಹನಕ್ಕೆ ಒಂದು ದಿನಕ್ಕೆ ವಿಧಿಸುವ ಕನಿಷ್ಠ ದರದ ಶೇ.25ರಷ್ಟು + ಅಂತರ ರಾಜ್ಯ ಪರ್ಮಿಟ್ ಶುಲ್ಕವೇನಾದರೂ ಇದ್ದರೆ ಅದರ ಮೊತ್ತ.
ವಾಹನ ಹೊರಡಬೇಕಾದ ಸಮಯದ ನಂತರ ಹಾಗೂ ವಾಹನ ಘಟಕದಿಂದ ಹೊರಡುವ ಮುಂಚಿತವಾಗಿ ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ ಒಪ್ಪಂದದ ಮೇಲೆ ನೀಡಲಾಗುವ ವಾಹನಕ್ಕೆ ಒಂದು ದಿನಕ್ಕೆ ವಿಧಿಸುವ ಕನಿಷ್ಠ ದರದ ಶೇ.50ರಷ್ಟು + ಅಂತರ ರಾಜ್ಯ ಪರ್ಮಿಟ್ ಶುಲ್ಕವೇನಾದರೂ ಇದ್ದರೆ ಅದರ ಮೊತ್ತ.
ವಾಹನವು ಘಟಕದಿಂದ ಹೊರಟ ನಂತರ ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ ಒಂದು ದಿನದ ಕನಿಷ್ಠ ದರವನ್ನು ವಿಧಿಸುವುದು + ಅಂತರ ರಾಜ್ಯ ಪರ್ಮಿಟ್ ಶುಲ್ಕವೇನಾದರೂ ಇದ್ದರೆ ಅದರ ಮೊತ್ತ.

ಖಾಯಂಗುತ್ತಿಗೆ ಬಸ್ಸುಗಳು

ನಿಗದಿತ ಸಮಯ ಹಾಗೂ ನಿಗದಿತ ಮಾರ್ಗದಲ್ಲಿ ಗುಂಪಿನ ಪ್ರಯಾಣಿಕರಿಗಾಗಿ ದಿನವಹಿ ಆಚರಣೆ ಮಾಡುವ ಸೇವೆಗಳನ್ನು ಖಾಯಂಗುತ್ತಿಗೆ ಸೇವೆಗಳು ಎಂದು ಕರೆಯಲಾಗುವುದು. ಈ ಸೇವೆಗಳನ್ನು ಗ್ರಾಹಕರ ಆಧಾರದ ಮೇಲೆ ಅಂದರೆ ಶಾಲಾ/ ಕಾಲೇಜು ವಿದ್ಯಾರ್ಥಿಗಳಿಗೆ, ಖಾಸಗಿ ಕಂಪನಿಗಳು / ಸಾರ್ವಜನಿಕ ಉದ್ದಿಮೆಗಳು ನೌಕರರು ಕಛೇರಿ/ಫ್ಯಾಕ್ಟರಿಗಳಿಗೆ ಪ್ರಯಾಣಿಸಲು ಆಚರಣೆ ಮಾಡಲಾಗುವುದು. ಈ ಸೇವೆಗಳ ಆಚರಣೆಗೆ ಕೆಳಕಂಡ ದರಗಳು ಹಾಗೂ ಷರತ್ತು ನಿಬಂಧನೆಗಳು ಅನ್ವಯವಾಗಲಿದೆ.

ದಿನಾಂಕ 01.12.2018 ರಿಂದ ಜಾರಿಗೆ ಬಂದಿರುತ್ತದೆ.

ಬಸ್ಸಿನ ವಿಧ ಪ್ರತಿ ಕಿ.ಮೀದ ದರ (ರೂಗಳಲ್ಲಿ)
ಕರ್ನಾಟಕ ಸಾರಿಗೆ / ಸೆಮಿ ಲೊ-ಫ್ಲೋರ್ (ನಗರ ಸಾರಿಗೆ) / ನಗರ ಸಾರಿಗೆ (12 ಮೀಟರ್ ಚಾಸಿಸ್) 37/-
ಮಿಡಿ ಬಸ್ಸು (30 ಆಸನಗಳು)* 32/-
ರಾಜಹಂಸ ಎಕ್ಸಿಕ್ಯೂಟಿವ್ 43/-
* ಹೊಸ ಬಸ್ಸುಗಳ ಆವಿಷ್ಕಾರದ ಸಮಯದಲ್ಲಿ ದರ ನಿಗದಿಪಡಿಸಲಾಗುವುದು.

Important Terms and Conditions

 • ಆಚರಣಾ ಘಟಕದಿಂದ ವಾಪಸ್ಸು ಘಟಕಕ್ಕೆ ಬರುವುದನ್ನು ಕಿ.ಮೀ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು.
 • ಕರ್ನಾಟಕ ರಾಜ್ಯದೊಳಗೆ ಮಾನ್ಯತೆ ಪಡೆದ ಶಾಲೆಗಳಿಗೆ / ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿ ಕಿ.ಮೀಗೆ ರೂ.2/- ರಂತೆ ರಿಯಾಯಿತಿ ನೀಡಲಾಗುವುದು.
 • ಹವಾನಿಯಂತ್ರಣರಹಿತ ಸೇವೆಗಳಿಗೆ ಜಿಎಸ್‍ಟಿ ಅನ್ವಯವಾಗುವುದಿಲ್ಲ. ಎಸಿ ಬಸ್ಸುಗಳಿಗೆ ಶೇ.5 ರಷ್ಟು ಜಿಎಸ್‍ಟಿ ವಿಧಿಸಲಾಗುವುದು.

ಸಂಪರ್ಕಿಸ ಬೇಕಾದ ವಿವರಗಳು

ಸಾಂದರ್ಭಿಕ ಒಪ್ಪಂದದ ಬುಕಿಂಗ್‍ಗಾಗಿ 7760990535 or 7760990556 ನ್ನು ಸಂಪರ್ಕಿಸಿ.

Last updated date 06-10-2020 13:30 PM
Sort by:
Relevance
Relevance
Date